Tirupati: ತಿರುಪತಿ ಭಕ್ತರಿಗೆ ಶುಭ ಸುದ್ದಿ.. ಜೂನ್ ತಿಂಗಳ ದರ್ಶನ ಟಿಕೆಟ್ ಬಿಡುಗಡೆ
ವಿಶ್ವವಿಖ್ಯಾತ ತಿರುಪತಿ ತಿರುಮಲ ಭಕ್ತರಿಗೆ ಟಿಟಿಡಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಜೂನ್ ತಿಂಗಳಲ್ಲಿ ತಿರುಪತಿಗೆ ಹೋಗಲು ಬಯಸುವ ಭಕ್ತರ ಅನುಕೂಲಕ್ಕಾಗಿ ಮುಂಗಡ ಟಿಕೆಟ್ ಬಿಡುಗಡೆ ಮಾಡಲು ದಿನಾಂಕ ಘೋಷಣೆ ಮಾಡಿದೆ. ಈ ಟಿಕೆಟ್ ಕಾಯ್ದಿರಿಸುವ ಮೂಲಕ ಭಕ್ತರು ಸುಲಭವಾಗಿ ಹಾಗೂ ಹೆಚ್ಚು ಸಮಯ ವ್ಯರ್ಥವಾಗದೇ ಶ್ರೀವಾರಿಯ ದರ್ಶನ ಪಡೆಯಬಹುದು.
ಹೌದು... ಟಿಟಿಡಿ ಪ್ರತಿ ತಿಂಗಳು ತಿರುಪತಿ ತಿಮ್ಮಪ್ಪನ ದರ್ಶನ ಟಿಕೆಟ್‌ಗಳು, ಅರ್ಜಿತ ಸೇವಾ ಟಿಕೆಟ್‌ಗಳು ಮತ್ತು ವಸತಿ ಕೊಠಡಿಗಳ ಆನ್‌ಲೈನ್ ಕೋಟಾವನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಇದೀಗ ಜೂನ್ ತಿಂಗಳ ಕೋಟಾವನ್ನು ಬಿಡುಗಡೆ ಮಾಡುವ ದಿನಾಂಕವನ್ನು ಟಿಟಿಡಿ ಘೋಷಣೆ ಮಾಡಿದೆ. ಹಾಗಾದರೆ ಯಾವ ದಿನಾಂಕದಂದು ಜೂನ್ ತಿಂಗಳ ಟಿಕೆಟ್ ಬುಕ್ ಮಾಡಬಹುದು ಎಂದು ಈಗ ತಿಳಿಯೋಣ.

ತಿರುಮಲದ ಸುಪ್ರಭಾತ, ತೋಮಲ, ಅರ್ಚನೆ ಮತ್ತು ಅಷ್ಟದಳ ಪಾದ ಪದ್ಮಾರಾಧನಾ ಸೇವೆಗಳಿಗೆ ಜೂನ್ ತಿಂಗಳ ಕೋಟಾವನ್ನು ಟಿಟಿಡಿ ಮಾರ್ಚ್ 18 ರಂದು ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದೆ. ಈ ಸೇವಾ ಟಿಕೆಟ್‌ಗಳಿಗಾಗಿ ಲಕ್ಕಿ ಡಿಪ್ ನೋಂದಣಿಗಾಗಿ ಮಾರ್ಚ್ 18 ರಿಂದ 20 ರವರೆಗೆ ಬೆಳಿಗ್ಗೆ 10 ಗಂಟೆಯವರೆಗೆ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಲಕ್ಕಿ ಡಿಪ್ ಮೂಲಕ ಈ ಟಿಕೆಟ್‌ಗಳನ್ನು ಪಡೆದ ಭಕ್ತರು ಮಾರ್ಚ್ 20 ರಿಂದ 22 ರ ಮಧ್ಯಾಹ್ನ 12 ಗಂಟೆಯೊಳಗೆ ಮೊತ್ತವನ್ನು ಪಾವತಿಸಿದರೆ ಅವರ ಟಿಕೆಟ್‌ಗಳನ್ನು ನೀಡಲಾಗುವುದು.
ಕಲ್ಯಾಣೋತ್ಸವ, ಊಂಜಲ್ ಸೇವೆ, ಅರ್ಜಿತ ಬ್ರಹ್ಮೋತ್ಸವ ಮತ್ತು ಸಹಸ್ರದೀಪಲಂಕಾರ ಸೇವಾ ಟಿಕೆಟ್‌ಗಳ ಜೂನ್ ಕೋಟಾ ಮಾರ್ಚ್ 21 ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆಯಾಗಲಿದೆ. ಟಿಟಿಡಿ ಮಾರ್ಚ್ 21 ರಂದು ಮಧ್ಯಾಹ್ನ 3 ಗಂಟೆಗೆ ವರ್ಚುವಲ್ ಸೇವೆಗಳು ಮತ್ತು ಅವುಗಳ ದರ್ಶನ ಸ್ಲಾಟ್‌ಗಳ ಮೇ ಕೋಟಾವನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುತ್ತದೆ.

ಜೂನ್ ತಿಂಗಳ ಅಂಗ ಪ್ರದಕ್ಷಿಣೆ ಟೋಕನ್‌ಗಳ ಕೋಟಾವನ್ನು ಟಿಟಿಡಿ ಮಾರ್ಚ್ 22 ರಂದು ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದೆ. ಮಾರ್ಚ್ 22 ರಂದು ಬೆಳಿಗ್ಗೆ 11 ಗಂಟೆಗೆ ಶ್ರೀವಾಣಿ ಟ್ರಸ್ಟ್ ಟಿಕೆಟ್‌ಗಳಿಗಾಗಿ ಟಿಟಿಡಿ ಮೇ ತಿಂಗಳ ಆನ್‌ಲೈನ್ ಕೋಟಾವನ್ನು ಬಿಡುಗಡೆ ಮಾಡಲಿದೆ.
ವೃದ್ಧರು, ಅಂಗವಿಕಲರು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ತಿರುಮಲ ದೇವರ ದರ್ಶನ ಪಡೆಯಲು ಅನುಕೂಲವಾಗುವಂತೆ ಜೂನ್ ತಿಂಗಳ ಉಚಿತ ವಿಶೇಷ ದರ್ಶನ ಟೋಕನ್‌ಗಳ ಕೋಟಾವನ್ನು ಟಿಟಿಡಿ ಮಾರ್ಚ್ 22 ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದೆ.
ಅಲ್ಲದೆ ಜೂನ್ ತಿಂಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್ ಕೋಟಾವನ್ನು ಮಾರ್ಚ್ 24 ರಂದು ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಜೊತೆಗೆ ತಿರುಮಲ ಮತ್ತು ತಿರುಪತಿಯಲ್ಲಿ ಜೂನ್ ತಿಂಗಳ ಕೊಠಡಿ ಕೋಟಾವನ್ನು ಮಾರ್ಚ್ 24 ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಶ್ರೀವಾರಿ ಅರ್ಜಿತ ಸೇವೆ ಮತ್ತು ದರ್ಶನ ಟಿಕೆಟ್‌ಗಳನ್ನು https://ttdevasthanams.ap.gov.in ವೆಬ್‌ಸೈಟ್ ಮೂಲಕ ಮಾತ್ರ ಬುಕ್ ಮಾಡಬೇಕು. ತಿರುಮಲ ಶ್ರೀವಾರಿ ಭಕ್ತರು ನಕಲಿ ವೆಬ್‌ಸೈಟ್‌ಗಳನ್ನು ನಂಬಬೇಡಿ ಮತ್ತು ಅಧಿಕೃತ ಟಿಟಿಡಿ ವೆಬ್‌ಸೈಟ್‌ನಲ್ಲಿ ಮಾತ್ರ ಟಿಕೆಟ್‌ಗಳನ್ನು ಬುಕ್ ಮಾಡಬೇಕೆಂದು ಸೂಚಿಸಲಾಗಿದೆ.












Click it and Unblock the Notifications