Vande Bharat Express Train: ಈ ಭಾಗದ ತಿರುಪತಿ ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್
ಬೆಂಗಳೂರು, ನವೆಂಬರ್ 25: ಭಾರತೀಯ ರೈಲ್ವೆಯಲ್ಲಿ ಹೊಸ ಕ್ರಾಂತಿ ತಂದ ವಂದೇ ಭಾರತ್ ರೈಲಿಗೆ ಪ್ರತಿ ಮಾರ್ಗಗಳಲ್ಲೂ ಬೇಡಿಕೆ ಇದೆ. ಇದೀಗ ತಿರುಪತಿ-ಸಿಕಂದರಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ (20701) ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಕಾರಣದಿಂದ ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಗುಡ್ ನ್ಯೂಸ್. ಏನದು? ರೈಲು ಸಂಚಾರ ಮಾರ್ಗ, ವೇಳಾಪಟ್ಟಿ ವಿವರ ಇಲ್ಲಿದೆ.
ತೆಲುಗು ರಾಜ್ಯಗಳಲ್ಲಿ ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಬೇಡಿಕೆ ಹೆಚ್ಚಳವಾಗಿದೆ. ಸಿಕಂದರಾಬಾದ್‌ನಿಂದ ತಿರುಪತಿಗೆ ಹೋಗಲು ಕನಿಷ್ಠ 12 ರಿಂದ 14 ಗಂಟೆ ಹಿಡಿಯುತ್ತದೆ. ಆದರೆ ಸಿಕಂದರಾಬಾದ್ ಮತ್ತು ತಿರುಪತಿ ನಡುವಿನ ಒಟ್ಟು 661 ಕಿಲೋ ಮೀಟರ್ ದೂರವನ್ನು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೇವಲ 8 ಗಂಟೆ 25 ನಿಮಿಷದಲ್ಲಿ ಕ್ರಮಿಸುತ್ತದೆ.

ಈ ಕಾರಣದಿಂದಲೇ ಭಾಗ್ಯನಗರದ ಸುತ್ತಮುತ್ತಲಿನ ಪ್ರದೇಶಗಳ ಜನರು ಹಾಗೂ ತಿರುಪತಿಗೆ ಹೋಗಿ ಬರುವ ಭಕ್ತರು ಈ ವಂದೇ ಭಾರತ್ ರೈಲನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ರೈಲಿನ ಬೇಡಿಕೆ ಗಮನಿಸಿದ ರೈಲ್ವೆ ಇಲಾಖೆ ಅಧಿಕಾರಿಗಳು ಸಿಕಂದರಾಬಾದ್-ತಿರುಪತಿ ರೈಲಿನ ಬೋಗಿಗಳನ್ನು ಹೆಚ್ಚಿಸಿ ಪ್ರಯಾಣಿಕರಿಗೆ ಖಷಿ ಸುದ್ದಿ ನೀಡಿದ್ದಾರೆ.
ರೈಲಿನ ಬೋಗಿಗಳು ಹೆಚ್ಚಳ
ಕೋಚ್‌ಗಳ ಹೆಚ್ಚಿಸುವ ಬಗ್ಗೆ ಈಗಾಗಲೇ ಅಧಿಕಾರಿಗಳು ಘೋಷಿದ್ದರು. ಸದ್ಯ 14 ಎಸಿ ಚೇರ್ ಕಾರ್‌ಗಳು ಮತ್ತು ಎರಡು ಎಕ್ಸಿಕ್ಯುಟಿವ್ ಚೇರ್ ಕಾರ್‌ಗಳೊಂದಿಗೆ (16 ಬೋಗಿ) ಸಂಚಾರ ಮಾಡುತ್ತಿದೆ. ಪ್ರಯಾಣಿಕರ ಅಧಿಕ ಸಂಚಾರ ಗಮನಿಸಿ ಹೆಚ್ಚುವರಿಯಾಗಿ 4 ಎಸಿ ಚೇರ್ ಕಾರ್‌ಗಳನ್ನು ಜೋಡಿಸಲಾಗಿದೆ. ಇದರಿಂದಾಗಿ ರೈಲಿನ ಒಟ್ಟು ಎಸಿ ಚೇರ್ ಕಾರ್‌ಗಳು ಸಂಖ್ಯೆ 18 ಹಾಗೂ ಎರಡು ಎಕ್ಸಿಕ್ಯುಟಿವ್ ಚೇರ್ ಕಾರ್ ಸೇರಿ ಒಟ್ಟು 20 ಬೋಗಿಗಳ ಸಹಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಮಾಡುತ್ತಿದೆ. ಇದರಿಂದ ಪ್ರಯಾಣಿಕರಿಗೆ ಮತ್ತಷ್ಟು ಅರಾಮದಾಯಕ ಸಂಚಾರ ಸೇವೆ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಂದೇ ಭಾರತ್ ರೈಲಿನ ಸಂಚಾರ, ವೇಳಾಪಟ್ಟಿ, ನಿಲುಗಡೆ
ತೆಲುಗು ರಾಜ್ಯಗಳ ಜೊತೆಗೆ ಅಕ್ಕಪಕ್ಕದ ರಾಜ್ಯಗಳ ಭಕ್ತರಿಗೂ ಬೋಗಿ ಹೆಚ್ಚಳದಿಂದ ಅನುಕೂಲವಾಗಲಿದೆ. 20701 ಸಂಖ್ಯೆ ವಂದೇ ಭಾರತ್ ಸಿಕಂದರಾಬಾದ್‌ನಿಂದ ಬೆಳಗ್ಗೆ 6:10 ಗಂಟೆಗೆ ಹೊರಡುತ್ತದೆ. ಮಾರ್ಗ ಮಧ್ಯ ನಲ್ಗೊಂಡ (7:24ಗಂಟೆ) ಮಿರಿಯಾಲಗುಡ (7:45) ಗುಂಟೂರು (9:39) ಓಂಗೋಲ್ (11:03), ನೆಲ್ಲೂರು (12:19) ಮೂಲಕ ಪ್ರಯಾಣಿಸಿ ಮಧ್ಯಾಹ್ನ 2:35 ಕ್ಕೆ ತಿರುಪತಿ ನಿಲ್ದಾಣಕ್ಕೆ ಬಂದು ಸೇರುತ್ತದೆ. ಮರಳಿ ಅದೇ ದಿಕ್ಕಿನಲ್ಲಿ ಮಧ್ಯಾಹ್ನ 3:15ಗಂಟೆಗೆ ತಿರುಪತಿಯಿಂದ ಹೊರಡುತ್ತದೆ. ಅದೇ ದಿನ ರಾತ್ರಿ 11:40 ಗಂಟೆಗೆ ಸಿಕಂದರಾಬಾದ್ ಗೆ ಬರುತ್ತದೆ.
ವಾರದಲ್ಲಿ ಮಂಗಳವಾರ ಒಂದು ದಿನ ಬಿಟ್ಟು ಉಳಿದೆಲ್ಲ ದಿನ ಸಿಕಂದರಾಬಾದ್-ತಿರುಪತಿ ರೈಲು ಸೇವೆ ಲಭ್ಯವಿದೆ. ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಹೇಳುವಂತೆ ಯಾವಾಗಲೂ ಜನದಟ್ಟಣೆಯಿಂದ ಕೂಡಿರುವ ಈ ರೈಲಿನಲ್ಲಿ ನಾಲ್ಕು ಹೆಚ್ಚುವರಿ ಕೋಚ್‌ಗಳನ್ನು ಸೇರಿಸುವುದು ಅದ್ಭುತ ಬೆಳವಣಿಗೆ ಎಂದು ಭಕ್ತರು, ಸಾರ್ವಜನಿಕರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications