Tirupati Laddu row: ನಟ ಪ್ರಕಾಶ್‌ ರಾಜ್‌ vs ಪವನ್‌ ಕಲ್ಯಾಣ್‌ ಟ್ವೀಟ್ ವಾರ್, ಯಾಕೆ ಈ ಟೀಕೆ

ತಿರುಪತಿಯ ಲಡ್ಡು ಪ್ರಸಾದದ ಬಗ್ಗೆ ಕೇಳಿ ಬಂದಿರುವ ಆರೋಪವು ವಿಶ್ವದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ತಿರುಪತಿಯಲ್ಲಿ ಪ್ರಸಾದ ರೂಪದಲ್ಲಿ ನೀಡುವ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಹಸುವಿನ ಕೊಬ್ಬು, ಹಂದಿ ಕೊಬ್ಬು ಹಾಗೂ ಮೀನಿನ ಎಣ್ಣೆಯನ್ನು ಬಳಸಲಾಗುತ್ತಿದೆ ಎನ್ನುವ ಆರೋಪವು ಗಂಭೀರ ಚರ್ಚೆಗೆ ಕಾರಣವಾಗಿದೆ. ಇದೀಗ ಇದೇ ವಿಚಾರವಾಗಿ ನಟ ಪ್ರಕಾಶ್‌ ರಾಜ್‌ ಮತ್ತು ನಟ ಹಾಗೂ ಆಂಧ್ರಪ್ರದೇದ ಉಪ ಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ನಡುವೆ ಟ್ವೀಟ್ ವಾರ್ ಪ್ರಾರಂಭವಾಗಿದೆ.

ನಟ ಪ್ರಕಾಶ್‌ರಾಜ್‌ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ನಡುವೆ ಟ್ವೀಟ್‌ ವಾರ್ ಪ್ರಾರಂಭವಾಗಿರುವುದಕ್ಕೆ ಮೂಲಕ ಕಾರಣ. ಹಿಂದೂ ಐಟಿಸೆಲ್‌ ಎನ್ನುವ ಟ್ವಿಟ್ಟರ್‌ ಖಾತೆಯಿಂದ ಆಗಿರುವ ಟ್ವೀಟ್‌ ಅನ್ನು ಪವನ್‌ ಕಲ್ಯಾಣ್‌ ಅವರು ರೀಟ್ವೀಟ್‌ ಮಾಡುವುದರೊಂದಿಗೆ. ಇಬ್ಬರು ನಟರು ಏನು ಹೇಳಿದ್ದಾರೆ ಹಾಗೂ ಟ್ವೀಟ್‌ಗಳೇನು ಎನ್ನುವ ವಿವರ ಇಲ್ಲಿದೆ.

Tirupati Laddu Row Actor Prakash Raj vs Pawan Kalyan tweet war Why This Criticism

ಹಿಂದೂ ಐಟಿಸೆಲ್ ಖಾತೆಯಿಂದ ಟ್ವೀಟ್

ತಿರುಪತಿಯ ಪ್ರಸಾದವಾದ ಲಡ್ಡು ಬಗ್ಗೆ ಸೃಷ್ಟಿಯಾಗಿರುವ ವಿವಾದದ ಬಗ್ಗೆ ಹಿಂದೂ ಐಟಿಸೆಲ್‌ ಖಾತೆಯಿಂದ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಟ್ಯಾಗ್‌ ಮಾಡಿ ಟ್ವೀಟ್‌ ಮಾಡಲಾಗಿತ್ತು.

ಈ ಟ್ವೀಟ್‌ನಲ್ಲಿ ತಿರುಪತಿ ಬಾಲಾಜಿಯ ಪವಿತ್ರ ಪ್ರಸಾದವನ್ನು ಕಲಬೆರಕೆ ಮಾಡಿರುವುದು ದೇವಸ್ಥಾನ ಸಮಿತಿಯು ಮಾಡಿದ ದ್ರೋಹ ಮತ್ತು ದೊಡ್ಡ ಪಾಪವಾಗಿದೆ. ದಯವಿಟ್ಟು ನೀವು ಯಾವುದೇ ವಿಳಂಬ ಮಾಡದೆ ಕೂಡಲೇ ಕ್ರಮ ತೆಗೆದುಕೊಂಡು ತಪ್ಪಿತಸ್ಥರನ್ನು ಬಂಧಿಸಿ. ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎನ್ನುವ ವಿಚಾರವು ಹಿಂದೂಗಳನ್ನು ತೀವ್ರವಾಗಿ ಆಘಾತಕ್ಕೆ ದೂಡಿದೆ ಎಂದು ಟ್ವೀಟ್‌ ಮಾಡಲಾಗಿತ್ತು. ಈ ಟ್ವೀಟ್‌ ಅನ್ನು ಪವನ್‌ ಕಲ್ಯಾಣ್‌ ಅವರು ರೀ ಟ್ವೀಟ್‌ ಮಾಡಿದ್ದರು.

Tirupati Laddu Row Actor Prakash Raj vs Pawan Kalyan tweet war Why This Criticism

ಪವನ್‌ ಕಲ್ಯಾಣ್‌ ಹೇಳಿದ್ದೇನು ?

ಹಿಂದೂ ಐಟಿ ಸೆಲ್‌ ಮಾಡಿದ್ದ ಟ್ವೀಟ್‌ ಅನ್ನು ಹಂಚಿಕೊಂಡಿದ್ದ ಪವನ್‌ ಕಲ್ಯಾಣ್‌ ಅವರು, ತಿರುಪತಿ ತಿರುಮಲ ದೇವಸ್ಥಾನದ ಪ್ರಸಾದವಾದ ಲಡ್ಡಿನಲ್ಲಿ ಹಸುವಿನ ಕೊಬ್ಬು, ಹಂದಿ ಕೊಬ್ಬು ಹಾಗೂ ಮೀನಿನ ಎಣ್ಣೆಯನ್ನು ಸೇರಿಸಲಾಗಿತ್ತು ಎನ್ನುವ ವಿಷಯವನ್ನು ಕೇಳಿ ನನಗೂ ತೀವ್ರ ಆಘಾತವಾಗಿದೆ.

ಹಲವು ಪ್ರಶ್ನೆಗಳಿಗೆ ಈ ಹಿಂದಿನ ವೈಸಿಪಿ (ಜಗನ್‌ ಮೋಹನ್‌ ರೆಡ್ಡಿ) ಸರ್ಕಾರ ರಚಿಸಿದ್ದ ಟಿಟಿಡಿ ಮಂಡಳಿಯು ಉತ್ತರಿಸಬೇಕಾಗಿದೆ. ನಮ್ಮ ಸರ್ಕಾರವು ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವುದಕ್ಕೆ ಬದ್ಧವಾಗಿದೆ ಎಂದಿದ್ದಾರೆ.

ಅಲ್ಲದೇ ಈ ಬೆಳವಣೆಗೆಯು ದೇವಾಲಯಗಳನ್ನು ಅಪವಿತ್ರಗೊಳಿಸುವುದು, ದೇವಸ್ಥಾನದ ಭೂಮಿ ಸಮಸ್ಯೆ ಹಾಗೂ ಇತರ ಧಾರ್ವಿುಕ ಆಚರಣೆಗಳ ಬಗ್ಗೆ ಇರುವ ಕೆಲವು ನಿರ್ದಿಷ್ಟ ಸಮಸ್ಯೆಗಳ ಮೇಲೂ ಬೆಳಕು ಚೆಲ್ಲುತ್ತದೆ ಎಂದು ಪವನ್‌ ಕಲ್ಯಾಣ್‌ ಹೇಳಿದ್ದರು.

ಮುಂದುವರಿದು, ಈಗ ದೇಶದಲ್ಲೇ ಹಿಂದೂ ದೇವಾಲಯಗಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಶೀಲನೆ ಮಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 'ಸನಾತನ ಧರ್ಮ ರಕ್ಷಣಾ ಮಂಡಳಿ'ಯನ್ನು ಸ್ಥಾಪಿಸುವ ಕಾಲ ಬಂದಿದೆ.

ಈ ನಿಟ್ಟಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳು ಆಗಬೇಕು. ಧಾರ್ಮಿಕ ಮುಖಂಡರು, ನ್ಯಾಯಾಂಗ, ಕಾನೂನು ರೂಪಿಸುವ ರಾಜಕೀಯ ನಾಯಕರು, ಪತ್ರಕರ್ತರು, ಸಾರ್ವಜನಿಕರು ಸೇರಿದಂತೆ ಎಲ್ಲರಿಂದಲೂ ಈ ನಿಟ್ಟಿನಲ್ಲಿ ಚಿಂತನೆ ಹಾಗೂ ಚರ್ಚೆಗಳು ನಡೆಯಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಹಿಂದೂ ಧರ್ಮ ಅಪವಿತ್ರವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಬೇಕು. ಹಿಂದೂ ಧರ್ಮ ಅಪವಿತ್ರವಾಗುವುದನ್ನು ತಡೆಯಬೇಕಿದೆ ಎಂದು ಆಗ್ರಹಿಸಿದ್ದರು.

ಪ್ರಕಾಶ್‌ರಾಜ್‌ ಹೇಳಿದ್ದೇನು ?

ಪವನ್‌ ಕಲ್ಯಾಣ್‌ ಅವರ ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದ ನಟ ಪ್ರಕಾಶ್‌ ರಾಜ್‌ ಅವರು, ಆತ್ಮೀಯ ಪವನ್‌ ಕಲ್ಯಾಣ್‌ ಅವರೇ, ಈ ಪ್ರಕರಣ (ತಿರುಪತಿ ಲಡ್ಡು ವಿವಾದ) ನೀವು ಉಪ ಮುಖ್ಯಮಂತ್ರಿಯಾಗಿರುವ ರಾಜ್ಯದಲ್ಲಿಯೇ (ಆಂಧ್ರಪ್ರದೇಶದಲ್ಲೇ) ಸಂಭವಿಸಿದೆ. ಅಪರಾಧಿಗಳನ್ನು ಪತ್ತೆ ಮಾಡಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹಿಸಿದ್ದಾರೆ.

ನೀವು ಯಾಕೆ ಈ ಆತಂಕವನ್ನು ಹೆಚ್ಚಿಸುತ್ತಿದ್ದೀರಿ, ರಾಷ್ಟ್ರೀಯ ಮಟ್ಟದಲ್ಲಿ ಇದನ್ನು ಏಕೆ ಹಬ್ಬಿಸುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದರು. ದೇಶದಲ್ಲಿ ಈಗಾಗಲೇ ಸಾಕಷ್ಟು ಕೋಮು ಉದ್ವಿಗ್ನತೆ (ಕೋಮು ಸೂಕ್ಷ್ಮ ವಿಚಾರಗಳು) ಇವೆ ಎಂದಿದ್ದರು. ಅಲ್ಲದೇ ಕೊನೆಯದಾಗಿ ಕೇಂದ್ರದಲ್ಲಿ ಇರುವ ನಿಮ್ಮ ಸ್ನೇಹಿತರಿಗೆ ಥ್ಯಾಂಕ್ಸ್‌ ಎಂದು ಸಹ ಪ್ರಕಾಶ್‌ ರಾಜ್‌ ಟ್ವೀಟ್‌ ಮಾಡಿದ್ದರು.

ಯಾರು ಯಾವುದನ್ನು ಬೇಕಾದರೂ ಸ್ಫೋಟಿಸಬಹುದು

ಲಡ್ಡು ವಿವಾದಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್‌ ರಾಜ್‌ ಅವರು ಮತ್ತೊಂದು ಟ್ವೀಟ್‌ ಮಾಡಿದ್ದು. ಯಾರು ಯಾವುದನ್ನು, ಯಾವಾಗ ಬೇಕಾದರೂ ಸ್ಫೋಟ ಮಾಡುವ ಸಾಧ್ಯತೆ ಇದೆ.

ಹೀಗಾಗಿ, ಎಚ್ಚರಿಕೆಯಿಂದ ಇರಿ ಎಂದು ತೆಲುಗು, ಕನ್ನಡ, ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ "ಹುಷಾರಾಗಿರಿ" ಎಂದಿದ್ದಾರೆ. ಅಲ್ಲದೇ ಲಡ್ಡು ಆಕಾರದ ಬಾಂಬ್‌ ಸ್ಫೋಟವಾಗುಂತಹ ಚಿತ್ರವನ್ನು ಸಹ ಇದರೊಂದಿಗೆ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+