TTD Building Fire Accident: ಟಿಟಿಡಿ ಆಡಳಿತ ಭವನದಲ್ಲಿ ಅಗ್ನಿ ಅವಘಡ.. ಹಲವು ಕಡತಗಳು ಸುಟ್ಟು ಭಸ್ಮ!
ತಿರುಪತಿಯ ಟಿಟಿಡಿ ಆಡಳಿತ ಭವನದಲ್ಲಿ ಶನಿವಾರ ಸಂಜೆ ಅಗ್ನಿ ಅವಘಡ ಸಂಭವಿಸಿದೆ. ಟಿಟಿಡಿ ಆಡಳಿತ ಭವನದ ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆಯಲ್ಲಿ ಹಲವು ಕಡತಗಳು ಸುಟ್ಟು ಕರಕಲಾಗಿವೆ. ತಿರುಮಲ ತಿರುಪತಿ ದೇವಸ್ಥಾನದ ಅಧೀನದಲ್ಲಿರುವ 13 ದೇವಸ್ಥಾನಗಳ ದಾಖಲೆಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿರುವುದು ಪ್ರಾಥಮಿಕವಾಗಿ ದೃಢಪಟ್ಟಿದೆ.
ನೌಕರ ನಾಗಾರ್ಜುನ ಅವರು ಅಗ್ನಿ ಅವಘಡದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಬೆಂಕಿಯನ್ನು ಹತೋಟಿಗೆ ತರಲಾಗಿತ್ತು. ಆದರೆ ಅಷ್ಟರಲ್ಲಾಗಲೆ ದಾಖಲೆಗಳು ಸುಟ್ಟು ಕರಕಲಾಗಿದ್ದವು ಎಂದು ಹೇಳಲಾಗುತ್ತಿದೆ. ಟಿಟಿಡಿ ಆಡಳಿತ ಭವನದಲ್ಲಿ ನಡೆದ ಅಗ್ನಿ ಅವಘಡದ ಕುರಿತು ಸಹಾಯಕ ಎಂಜಿನಿಯರ್ ಭಾಸ್ಕರ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಅಲಿಪಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಅಲ್ಲದೆ ಅಗ್ನಿ ಅವಘಡದಲ್ಲಿ ಟಿಟಿಡಿ ದೇವಸ್ಥಾನಗಳಿಗೆ ಸಂಬಂಧಿಸಿದ ರಸ್ತೆ ನಿರ್ಮಾಣದ ದಾಖಲೆಗಳು ಸುಟ್ಟು ಭಸ್ಮವಾಗಿವೆ. ಅಪಘಾತದಲ್ಲಿ ಕಡತಗಳು ಭಾಗಶಃ ಹಾಳಾಗಿವೆ ಎಂದು ಸಿವಿಎನ್ ಎಸ್ ಒ ಶ್ರೀಧರ್ ತಿಳಿಸಿದ್ದಾರೆ. ಬೆಂಕಿ ಅವಘಡದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಅಲಿಪಿರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆಯೇ ಅಥವಾ ಗುಪ್ತ ಸಂಚು ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಕಡತಗಳು ಸುಟ್ಟು ಕರಕಲಾಗಿರುವ ಹಿನ್ನೆಲೆಯಲ್ಲಿ ತನಿಖೆಯನ್ನು ಮತ್ತಷ್ಟು ಚುರುಕುಗೊಳೀಸಲಾಗಿದೆ.
ಮತ್ತೊಂದೆಡೆ ಕ್ಷೇತ್ರಕ್ಕೆ ದಾವಿಸಿರುವ ಪೊಲೀಸ್ ಟೀಂ ಸಾಕ್ಷ್ಯ ಸಂಗ್ರಹಿಸುವ ಕಾರ್ಯದಲ್ಲಿ ನಿರತವಾಗಿದೆ. ತಿರುಪತಿ ಎಸ್ಪಿ ಸುಬ್ಬರಾಯುಡು ಮಾತನಾಡಿ, ಘಟನೆ ಆಕಸ್ಮಿಕವೇ ಅಥವಾ ಸಂಚೆ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಕಡತಗಳು ಸುಟ್ಟಿರುವ ಬಗ್ಗೆ ತನಿಖೆ ನಡೆಯುತ್ತಿದ್ದು, 25ರಿಂದ 30 ಕಡತಗಳು ಅಲ್ಪಸ್ವಲ್ಪ ಸುಟ್ಟಿರುವುದು ಗೊತ್ತಾಗಿದೆ ಎಂದರು.
ಘಟನೆ ಕುರಿತು ವಿಜಿಲೆನ್ಸ್ ಮತ್ತು ಪೊಲೀಸ್ ಇಲಾಖೆ ತನಿಖೆ ಕೈಗೆತ್ತಿಕೊಂಡಿದೆ. ಅಪಘಾತ ನಡೆದ ಉಪ ಇಇ ಕೊಠಡಿಗೆ ಭೇಟಿ ನೀಡಿದ ಎಸ್ಪಿ, ತನಿಖೆ ಮಾಡಲಾಗುತ್ತಿದೆ ಇನ್ನೂ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಯೋಜನಾ ಆಡಳಿತ ಕಚೇರಿಯಲ್ಲಿ ಕಡತ ಸುಟ್ಟು ಕರಕಲು!
ಮತ್ತೊಂದೆಡೆ ಪೊಲಾವರಂ ಯೋಜನೆಯ ಆಡಳಿತ ಕಚೇರಿಯಲ್ಲೂ ಕಡತಗಳು ಸುಟ್ಟು ಕರಕಲಾಗಿರುವುದು ಸಂಚಲನ ಮೂಡಿಸಿದೆ. ಘಟನೆಯಲ್ಲಿ ಪೋಲಾವರಂ ಎಡ ಮುಖ್ಯ ಕಾಲುವೆಗೆ ಸಂಬಂಧಿಸಿದ ಕಡತಗಳು ಸುಟ್ಟು ಕರಕಲಾಗಿವೆ. ಆದರೆ ಕಚೇರಿಯಲ್ಲಿದ್ದ ಕೆಲ ಅಧಿಕಾರಿಗಳು ಈ ಕಡತಗಳನ್ನು ಸುಟ್ಟು ಹಾಕಿದ್ದಾರೆ ಎಂಬ ಆರೋಪವಿದೆ.
ಪೊಲೀಸರು ಅರ್ಧ ಸುಟ್ಟ ಕಡತಗಳನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಘಟನೆಯಲ್ಲಿ ಸುಟ್ಟು ಕರಕಲಾದ ಕಡತಗಳು ಪೊಲಾವರಂ ಯೋಜನೆಯಿಂದ ತೆರವುಗೊಂಡವರಿಗೆ ನೀಡಲಾದ ಪರಿಹಾರಕ್ಕೆ ಸಂಬಂಧಿಸಿದವು ಎಂದು ತಿಳಿದು ಬಂದಿದೆ. ಹೀಗೆ ಹಲವಾರು ದಾಖಲೆಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.












Click it and Unblock the Notifications