Tirumala: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ 25 ಕೆಜಿ ಚಿನ್ನಾಭರಣ ಧರಿಸಿ ಬಂದ ಕುಟುಂಬ- ವಿಡಿಯೋ

ಭಾರತದಲ್ಲಿರುವ ಅತ್ಯಂತ ಶ್ರೀಮಂತ ದೇವರಗಳ ಪೈಕಿ ತಿರುಪತಿ ತಿಮ್ಮಪ್ಪನಿಗೆ ಎರಡನೇ ಸ್ಥಾನವಿದೆ. ಕೇರಳದ ಪದ್ಮನಾಭ ಸ್ವಾಮಿ ದೇವಾಲಯ ಬಿಟ್ಟರೆ ಎರಡನೇ ಶ್ರೀಮಂತ ದೇವರು ತಿರುಪತಿ ಬಾಲಾಜಿ. ಅಷ್ಟಕ್ಕೂ ಶ್ರೀಮಂತ ದೇವರುಗಳ ಹೆಸರು ಈಗ ಯಾಕೆ ಬಂತು ಅಂದರೆ ಈ ಶ್ರೀಮಂತ ದೇವಸ್ಥಾನ ತಿರುಪತಿಗೆ ಶ್ರೀಮಂತ ಕುಟುಂಬವೊಂದು ಭೇಟಿ ನೀಡಿ ನೋಡಗರಿಗೆ ಅಚ್ಚರಿ ಮೂಡಿಸಿದೆ.

ತಿರುಪತಿ ತಿರುಮಲ ದೇವಸ್ಥಾನಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಹೀಗೆ ಏಳು ಬೆಟ್ಟಗಳ ಒಡೆಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದ ಕುಟುಂಬವೊಂದು 25 ಕೆಜಿ ಚಿನ್ನಾಭರಣ ಹಾಕಿದ್ದು ಸಾಕಷ್ಟು ಸುದ್ದಿಯಾಗಿದೆ. ಆಂಧ್ರಪ್ರದೇಶದ ತಿರುಮಲ ದೇವಸ್ಥಾನಕ್ಕೆ 25 ಕೆಜಿ ಚಿನ್ನದ ಸರವನ್ನು ಧರಿಸಿ ಕುಟುಂಬವೊಂದು ಭೇಟಿ ನೀಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಕುಟುಂಬವನ್ನು ದೇವಸ್ಥಾನಕ್ಕೆ ಆಗಮಿಸಿದ ಜನ ನೋಡಿ ಅಚ್ಚರಿಗೊಂಡಿದ್ದಾರೆ.

Tirumala Family wearing 25 kg gold and came to Tirupati srivari darshan - video

ಚಿನ್ನ ಮತ್ತು ಚಿನ್ನದ ಆಭರಣಗಳನ್ನು ಧರಿಸುವುದು ಯಾವಾಗಲೂ ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ. ಜನರು ಅದನ್ನು ಪ್ರದರ್ಶಿಸಲು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇದಕ್ಕೆ ವೈರಲ್ ಆಗಿರುವ ಈ ವಿಡಿಯೋವೇ ಸಾಕ್ಷಿ. ಕುಟುಂಬವೊಂದು ಕೊರಳಲಿನಲ್ಲಿ ಭಾರದ ಚಿನ್ನದ ಸರಗಳನ್ನು ಧರಿಸಿ ದೇವಸ್ಥಾನಕ್ಕೆ ಆಗಮಿಸಿದೆ. ಈ ವೇಳೆ ಸೆರೆಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಪುಣೆಯ ಕುಟುಂಬವೊಂದು ಆಗಸ್ಟ್ 22, 2024 ರಂದು ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ 25 ಕೆಜಿ ಚಿನ್ನದ ಸರವನ್ನು ಧರಿಸಿ ಭಗವಂತನ ದರ್ಶನ ಪಡೆದಿದೆ. ಟ್ವಿಟರ್‌ನಲ್ಲಿ ವೈರಲ್ ಆದ ವೀಡಿಯೊದಲ್ಲಿ ಇಬ್ಬರು ಪುರುಷರು, ಮಹಿಳೆ ಮತ್ತು ಮಗು ಹೊಳೆಯುವ ಚಿನ್ನದ ಆಭರಣಗಳನ್ನು ಕೊರಳಿಗೆ ಹಾಕಿರುವುದನ್ನು ಕಾಣಬಹುದು.

ತಿರುಮಲದ ವೆಂಕಟೇಶ್ವರ ದೇವಸ್ಥಾನದ ಹೊರಗೆ ಸೆರೆ ಹಿಡಿದ ದೃಶ್ಯದಲ್ಲಿ ಪುರುಷರು ಕೊರಳು ಮುಚ್ಚುವಂತೆ ಚಿನ್ನಾಭರಣಗಳನ್ನು ಧರಿಸಿರುವುದನ್ನು ಕಾಣಬಹುದು. ಈ ಪುರುಷರು ಬ್ರಾಂಡೆಡ್ ಸನ್ ಗ್ಲಾಸ್ ಕೂಡ ಹಾಕಿಕೊಂಡಿದ್ದಾರೆ. ಆದರೆ ಈ ಶ್ರೀಮಂತ ಕುಟುಂಬದ ಸದಸ್ಯರ ಹೆಸರು ತಿಳಿದು ಬಂದಿಲ್ಲ.

Tirumala Family wearing 25 kg gold and came to Tirupati srivari darshan - video

ತಿರುಮಲ ದೇವಸ್ಥಾನ ವರ್ಷವಿಡೀ ಯಾತ್ರಿಕರಿಂದ ತುಂಬಿರುತ್ತದೆ. ಬೇಡಿದ ವರವನ್ನು ನೀಡುವ ತಿಮ್ಮಪ್ಪನಿಗೆ ಭಕ್ತರು ಹರಕೆ ತೀರಿಸಲು ಚಿನ್ನದ ಕಾಣಿಕೆಗಳನ್ನು ನೀಡುತ್ತಾರೆ. ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳು ಹಣ, ಅಲಂಕಾರಿಕ ವಸ್ತುಗಳು, ಚಿನ್ನಾಭರಣ ಸೇರಿದಂತೆ ಅನೇಕ ವಸ್ತುಗಳನ್ನು ಕಾಣಿಕೆ ರೂಪದಲ್ಲಿ ನೀಡುತ್ತಾರೆ. ಹೀಗಾಗಿ ತಿಮ್ಮಪ್ಪನ ಹುಂಡಿಯಲ್ಲಿ ನಿತ್ಯ ನೂರಾರು ಕೋಟಿ ರೂಪಾಯಿ ಆದಾಯ ಸಂಗ್ರಹವಾಗುತ್ತದೆ. ಹೀಗಾಗಿ ತಿರುಪತಿ ದೇಶದ ಅತ್ಯಂತ ಶ್ರೀಮಂತ ದೇವರುಗಳ ಸಾಲಿನಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+