ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Tirumala Tirupati: 2022ರಲ್ಲಿ ತಿರುಮಲ ತಿಮ್ಮಪ್ಪನ ಹುಂಡಿ ಸೇರಿದ ಕಾಣಿಕೆ ಮೊತ್ತವೆಷ್ಟು?

|
Google Oneindia Kannada News

ಅಮರಾವತಿ,ಜನವರಿ14 : ವಿಶ್ವದಲ್ಲಿರುವ ಅತಿ ಶ್ರೀಮಂತ ಹಿಂದೂ ದೇವಾಲಯ ಎಂಬ ಖ್ಯಾತಿ ಪಡೆದಿರುವ ತಿರುಮಲ ಬೆಟ್ಟಗಳಲ್ಲಿರುವ ಶ್ರೀವೆಂಕಟೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ ದಾಖಲೆ ಮೊತ್ತದ 1,450 ಕೋಟಿ ರೂಪಾಯಿ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ.

ಕಳೆದ ವರ್ಷ ಅಂದರೇ 2022ರಲ್ಲಿ ಸುಮಾರು 2.37ಕೋಟಿ ಭಕ್ತರು ತಿರುಮಲನ ದರ್ಶನ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸುಮಾರು 1,450 ಕೋಟಿ ರೂಪಾಯಿ ಕಾಣಿಕೆ ರೂಪದಲ್ಲಿ ಬಾಲಾಜಿಯ ಹುಂಡಿ ಸೇರಿಕೊಳ್ಳುವ ಮೂಲಕ ನೂತನ ದಾಖಲೆ ನಿರ್ಮಿಸಿದೆ.

ಮಕರ ಸಂಕ್ರಾಂತಿ ವಿಶೇಷ ಪುಟ

2021ರಲ್ಲಿ ಕೋವಿಡ್‌ ಹಿನ್ನಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಭಕ್ತರು ದರ್ಶನ ಪಡೆದುಕೊಂಡಿದ್ದರು. ಈ ಅವಧಿಯಲ್ಲಿ 1.04 ಕೋಟಿ ಯಾತ್ರಾರ್ಥಿಗಳು ತಿರುಪತಿ ದರ್ಶನ ಪಡೆದುಕೊಂಡಿದ್ದು, ಸುಮಾರು 833.41 ಕೋಟಿ ರೂಪಾಯಿ ಹುಂಡಿಯಲ್ಲಿ ಸಂಗ್ರಹವಾಗಿತ್ತು.

Tirumala Balaji Temple records highest ever Hundi Collection of Rs 1,450 crores in 2022

ಡಿಸೆಂಬರ್ ತಿಂಗಳೊಂದರಲ್ಲೇ 20.25 ಲಕ್ಷ ಭಕ್ತರು ಭೇಟಿ ನೀಡುವ ಮೂಲಕ 129.37 ಕೋಟಿ ರೂಪಾಯಿ ಕಾಣಿಕೆ ಹುಂಡಿ ಸೇರಿಕೊಂಡಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾ ರೆಡ್ಡಿ ಪ್ರಕಾರ ಮಾಹಿತಿ ನೀಡಿದ್ದಾರೆ.

2023 ಜನವರಿ 11 ರವರೆಗೆ ಆರು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದು, ಹುಂಡಿಯಲ್ಲಿ 39.40 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂಬ ಮಾಹಿತಿಯನ್ನು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

Tirumala Balaji Temple records highest ever Hundi Collection of Rs 1,450 crores in 2022

ವೈಕುಂಟ ಏಕಾದಶಿಯಂದು 7.68 ಕೋಟಿ ಸಂಗ್ರಹ !

ಪವಿತ್ರ ವೈಕುಂಟ ಏಕಾದಶಿಯಂದು ತಿರುಮಲ ಬೆಟ್ಟದ ಕಡೆಗೆ ಭಕ್ತರ ಸಾಗರವೇ ಹರಿದು ಹೋಗಿದೆ. ಒಂದೇ ದಿನದಲ್ಲಿ 69,414 ಯಾತ್ರಾರ್ಥಿಗಳು ತಿರುಪತಿ ದರ್ಶನವನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೇ ವೆಂಕಟೇಶ್ವರ ದೇವರ ಹುಂಡಿಯಲ್ಲಿ 7.68 ಕೋಟಿ ರೂಪಾಯಿಗಳನ್ನು ಸಂಗ್ರಹವಾಗಿದೆ. ಈ ಮೂಲಕ ಒಂದೇ ದಿನದಲ್ಲಿ ಅತಿ ಹೆಚ್ಚು ಹುಂಡಿ ಸಂಗ್ರಹದ ತನ್ನದೇ ಹಿಂದಿನ ದಾಖಲೆಯನ್ನು ತಿರುಪತಿ ಮುರಿದಿದೆ. ಹಿಂದಿನ ದಾಖಲೆಯು ರೂ 6.31 ಕೋಟಿಯಾಗಿತ್ತು ಎಂದು ಟಿಟಿಡಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ತಿರುಮಲನ ದರ್ಶನ ದುಬಾರಿ !

ತಿಮ್ಮಪ್ಪನ ದರ್ಶನಕ್ಕೆ ದೇಶದ ಹಲವಾರು ಭಾಗದಿಂದ ಭಕ್ತರು ಆಗಮಿಸುತ್ತಾರೆ. ಅದರೇ ಈಗ ತಿರುಮಲನ ದರ್ಶನ ಭಾಗ್ಯ ಸ್ವಲ್ಪ ದುಬಾರಿಯಾಗಿದೆ. ಜನವರಿ 12 ರಿಂದ ಫೆಬ್ರವರಿ 28ರ ತನಕ ವಿಶೇಷ ದರ್ಶನ ಪಡೆಯಲು ಟಿಟಿಡಿ ಈಗಾಗಲೇ ಆನ್‌ಲೈನ್ ಟಿಕೆಟ್ ಬಿಡುಗಡೆ ಮಾಡಿದೆ. ಈ ವಿಶೇಷ ಟಿಕೆಟ್‌ಗೆ 300 ರೂ. ದರ ನಿಗದಿಪಡಿಸಲಾಗಿದೆ. ಆದರೇ ದರ ಏರಿಕೆ ಬಗ್ಗೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾನ್ಯ ಭಕ್ತರನ್ನು ಗಮನದಲ್ಲಿಟ್ಟುಕೊಂಡು ದರಗಳನ್ನು ನಿಗದಿ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ.

English summary
An offering of Rs 1,450 crore has been collected in the hundi of Srivenkateswara Swamy Temple in the Tirumala hills, which is reputed to be the richest Hindu temple in the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X