Tiger Shroff Firing Case: ಶೂಟರ್‌ಗಳ ಬಂಧನದ ಬೆನ್ನಲ್ಲೇ ನಟಿ ರಮ್ಯಾ ಟ್ವೀಟ್; ಬಾಲಿವುಡ್ ಬಗ್ಗೆ ಸ್ಫೋಟಕ ಹೇಳಿಕೆ!

Tiger Shroff Firing Case: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಹತ್ಯೆಗೆ ಮೂವರು ಯತ್ನಿಸಿದ್ದು, ಮೂವರು ಶೂಟರ್‌ಗಳನ್ನು ಇದೀಗ ಬಂಧಿಸಲಾಗಿದೆ. ಟೈಗರ್ ಶ್ರಾಫ್ ಅವರನ್ನು ಶೂಟ್ ಮಾಡುವುದಕ್ಕೆ ಪ್ರಯತ್ನಿಸಿದ ಮೂವರು ಶೂಟರ್‌ಗಳು ರಾಜಸ್ಥಾನದ ಕೋಟಾ ರೈಲು ನಿಲ್ದಾಣ ವ್ಯಾಪ್ತಿಯಲ್ಲಿ ರೈಲಿನಲ್ಲಿ ಪ್ರಯಾಣಿಸುವಾಗ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಇಬ್ಬರು ಹರಿಯಾಣದವರು ಮತ್ತು ಒಬ್ಬರು ಬಿಹಾರದವರು. ಮೂವರೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿದ್ದಾರೆಂದು ಹೇಳಲಾಗಿದೆ. ಈ ವಿಚಾರವಾಗಿ ನಟಿ, ಮಾಜಿ ಸಂಸದೆ ರಮ್ಯಾ ಅವರು ಸೋಷಿಯಲ್ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

ಟೈಗರ್ ಶ್ರಾಫ್ ಮೇಲೆ ನಡೆದಿರುವ ಹಲ್ಲೆಯ ವಿಚಾರವಾಗಿ ಟ್ವೀಟ್ ಮಾಡಿರುವ ನಟಿ ರಮ್ಯಾ ಅವರು, ಟೈಗರ್ ಶ್ರಾಫ್ ಸುರಕ್ಷಿತವಾಗಿರುವುದು ಸಮಾಧಾನ ತಂದಿದೆ. ಗಾಯಗೊಂಡಿರುವ ಅವರ ಚಾಲಕ ಮತ್ತು ಆಟೋರಿಕ್ಷಾ ಚಾಲಕ ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಸಂಜೆ 7 ಗಂಟೆ, ಜನನಿಬಿಡ ರಸ್ತೆ, ಮಾಸ್ಕ್‌ ಧರಿಸದ ಶೂಟರ್‌ಗಳು ಎಷ್ಟು ಚಿಕ್ಕ ವಯಸ್ಸಿನವರು! ಅವರು ಸಿಕ್ಕಿಬೀಳುವ ಭಯವಿಲ್ಲದೆ ಇರುವುದಕ್ಕೆ ಕಾರಣ, ಅವರ ಮನಸ್ಸನ್ನು ಸುಲಭವಾಗಿ ಬದಲಾಯಿಸಬಹುದು. ಆದರೆ ಆದೇಶ ನೀಡುವವರಿಗೆ ಯಾವುದೇ ಅಪಾಯವಿಲ್ಲ.

Tiger Shroff Firing Case Ramya Tweets After Shooter Arrests Makes Shocking Remark About Bollywood

ಮಹಾರಾಷ್ಟ್ರದ ಮುಂಬೈನ ಜುಹುವಿನಲ್ಲಿ ಈ ಹಿಂದೆಯೂ ಇಂತಹ ಘಟನೆಗಳು ಮತ್ತೆ ಮತ್ತೆ ನಡೆದಿವೆ. ಪ್ರತಿ ಬಾರಿಯೂ ಶೂಟರ್‌ಗಳನ್ನು ಬಂಧಿಸಲಾಗುತ್ತದೆ, ಆದರೆ ಅವರ ಹಿಂದಿರುವ ಜಾಲ ಮುಂದುವರಿಯುತ್ತದೆ. ಎರಡು ಪ್ರಶ್ನೆಗಳಿಗೆ ಉತ್ತರ ಬೇಕಿದೆ. ಜೈಲಿನೊಳಗಿಂದಲೇ ಗ್ಯಾಂಗ್‌ಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ?

ಭವಿಷ್ಯದ ಅವಕಾಶಗಳಿಲ್ಲದ ಅನೇಕ ಯುವಕರು ಅಲ್ಪ ಹಣ ಮತ್ತು ಆನ್‌ಲೈನ್‌ನಲ್ಲಿ ಕೆಲವೇ ನಿಮಿಷಗಳ ಖ್ಯಾತಿಗಾಗಿ ಬಂದೂಕು ಹಿಡಿಯಲು ಏಕೆ ಸಿದ್ಧರಾಗುತ್ತಿದ್ದಾರೆ. ಈ ಎರಡೂ ಸಮಸ್ಯೆಗಳನ್ನು ಸರಿಪಡಿಸುವವರೆಗೆ, ನಾವು ಸಮಸ್ಯೆಯ ಮೂಲವನ್ನು ಪರಿಹರಿಸದೆ ಅದರ ಪರಿಣಾಮಗಳನ್ನು ಮಾತ್ರ ನಿಭಾಯಿಸುತ್ತಿದ್ದೇವೆ. 'ಬಾಲಿವುಡ್‌' ಮೌನವಾಗಿದೆ. ಎಲ್ಲೆಡೆ ಭಯ ಮತ್ತು ಆತಂಕವಿದೆ ಎಂದು ನಟಿ ರಮ್ಯಾ ಅವರು ಹೇಳಿದ್ದಾರೆ.

ಪ್ರಕರಣದ ಹಿನ್ನೆಲೆ ಏನು ?

ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಹತ್ಯೆಗೆ ಮೂವರು ಯತ್ನಿಸಿದ್ದು ಅವರನ್ನು ಬಂಧಿಸಲಾಗಿದೆ. ಮೂವರು ಆರೋಪಿಗಳಲ್ಲಿ ಇಬ್ಬರು ಬಾಡಿಗೆ ದಾಳಿಕೋರರಾಗಿದ್ದರೆ, ಮೂರನೆಯವನು ದಾಳಿಯ ನಂತರ ತಪ್ಪಿಸಿಕೊಳ್ಳಲು ಸಹಾಯ ಮಾಡಿದನೆಂದು ಶಂಕಿಸಲಾಗಿದೆ. ಆರೋಪಿಗಳಲ್ಲಿ ಒಬ್ಬ ಹರಿಯಾಣದ ಸೋನಿಪತ್‌ನ 17 ವರ್ಷದ ಅಪ್ರಾಪ್ತ.

ಇತರ ಇಬ್ಬರನ್ನು ಬಿಹಾರದ ಬೇಗುಸರಾಯ್‌ನ 22 ವರ್ಷದ ಹೃತಿಕ್ ಕುಮಾರ್ ಅಲಿಯಾಸ್ ರೋಶನ್ ಎಂದು ಗುರುತಿಸಲಾಗಿದೆ. ಪ್ರಸ್ತುತ ಮುಂಬೈನ ಅಂಧೇರಿ ಪಶ್ಚಿಮ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಆ ಯುವಕ ರ‍್ಯಾಪಿಡೋ ರೈಡರ್ ಆಗಿ ಕೆಲಸ ಮಾಡುತ್ತಿದ್ದು, 18 ವರ್ಷದ ರೆಹಾನ್ ಹರಿಯಾಣದ ಸೋನಿಪತ್ ಎಂದು ಗುರುತಿಸಲಾಗಿದೆ.

ರೆಹಾನ್ ಕಳೆದ 12 ವರ್ಷಗಳಿಂದ ತನ್ನ ತಂದೆಯಿಂದ ದೂರವಿದ್ದರು ಅಂತ ಹೇಳಲಾಗಿದೆ. ಮುಂಬೈನ ಪೊಲೀಸರು ನೀಡಿದ ಮಾಹಿತಿಯ ಆಧಾರದ ಮೇಲೆ ರಾಜಸ್ಥಾನ ಆಂಟಿ-ಗ್ಯಾಂಗ್‌ಸ್ಟರ್ ಟಾಸ್ಕ್ ಫೋರ್ಸ್ (ಎಜಿಟಿಎಫ್) ಮತ್ತು ಕೋಟಾ ಸಿಟಿ ಪೊಲೀಸರ ಜಂಟಿ ತಂಡವು ಮೂವರು ಶೂಟರ್‌ಗಳನ್ನು ಬಂಧಿಸಿದ್ದಾರೆ. ಪುಣೆ - ಜೈಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಆರೋಪಿಗಳನ್ನು ಬಂಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+