ಜೂನ್ 30ರವರೆಗೆ ರೈಲು ಸಂಚಾರ ರದ್ದು: ಲಾಕ್‌ಡೌನ್ ಮುಂದುವರಿಕೆ ಸೂಚನೆಯೇ?

ನವದೆಹಲಿ, ಮೇ 14: ದೇಶಾದ್ಯಂತ ಜೂನ್ 30ರವರೆಗೆ ರೈಲುಗಳ ಸಂಚಾರ ರದ್ದುಗೊಳಿಸಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.

ಜೂನ್ 30ರವರೆಗೆ ಕಾಯ್ದಿರಿಸಿದ್ದ ಎಲ್ಲಾ ಟಿಕೆಟ್‌ಗಳನ್ನು ರೈಲ್ವೆ ಇಲಾಖೆ ರದ್ದುಗೊಳಸಿಇದೆ. ಹಾಗೆಯೇ ಹಣವನ್ನು ಪ್ರಯಾಣಿಕರ ಖಾತೆಗಳಿಗೆ ಹಿಂದಿರುಗಿಸುವುದಾಗಿ ತಿಳಿಸಿದೆ. ಶ್ರಮಿಕ ರೈಲು ಎಂದಿನಂತೆ ಸಂಚಾರ ನಡೆಸಲಿದೆ.

Tickets For Regular Trains For Travel Till June 30 Cancelled

ಜೂನ್ 30ರವರೆಗೆ ಪ್ರಯಾಣಿಕರ ರೈಲು ಸಂಚಾರ ಸ್ಥಗಿತಗೊಳ್ಳಲಿದೆ. ಅಂಚೆ, ಎಕ್ಸ್‌ಪ್ರೆಸ್, ಸಬರ್ಬರ್ ಸೇರಿದಂತೆ ಎಲ್ಲಾ ರೈಲುಗಳ ಸಂಚಾರವನ್ನು ನಿಷೇಧಿಸಲಾಗಿದೆ. ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿರುವ ಶ್ರಮಿಕ ರೈಲು ಮಾತ್ರ ಕಾರ್ಯಾಚರಿಸಲಿದೆ.

ಈ ವಿಶೇಷ ರೈಲು ದೆಹಲಿಯ 15 ನಗರಗಳಿಗೆ ಎಂದಿನಂತೆ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ರೈಲ್ವೆ ಟಿಕೆಟ್ ರದ್ದು ಹಾಗೂ ರೈಲು ಸಂಚಾರ ನಿಷೇಧದ ಹಿಂದೆ ಲಾಕ್‌ಡೌನ್ ವಿಸ್ತರಣೆ ಮಾಡುವ ತಂತ್ರ ಅಡಗಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಮೇ 17ರಂದು ಲಾಕ್‌ಡೌನ್ ಮುಂದುವರೆಯಲಿದ್ದು, ಅಷ್ಟರೊಳಗೆ ಲಾಕ್‌ಡೌನ್ ತೆರವು ಅಥವಾ ವಿಸ್ತರಣೆ ವಿಚಾರವನ್ನು ಸರ್ಕಾರ ಜನರ ಮುಂದಿಡಲಿದೆ. ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+