India Weather: ಈ ಭಾಗಗಳಲ್ಲಿ ಮುಂದಿನ 5 ದಿನ ರಣಮಳೆ ಎಚ್ಚರಿಕೆ....Rain Alert
ಬೆಂಗಳೂರು, ಸೆಪ್ಟಂಬರ್ 10: ದೇಶದ ಉತ್ತರ ಹಾಗೂ ಪೂರ್ವ ಭಾಗದಲ್ಲಿ ಅಬ್ಬರಿಸಿದ್ದ ಮುಂಗಾರು ಮಳೆ ಇದೀಗ ಅಲ್ಲಿ ತಗ್ಗಿದೆ. ಆದರೆ ಮಣಿಪುರ, ಪಶ್ಚಿಮ ಬಂಗಾಳ ಸೇರಿದಂತೆ ದಕ್ಷಿಣ ಹಾಗೂ ಪಶ್ಚಿಮ ಭಾಗದ ರಾಜ್ಯಗಳಲ್ಲಿ ಚುರುಕಾಗಿದೆ. ಬದಲಾದ ಹವಾಮಾನ ವೈಪರೀತ್ಯಗಳ ಪ್ರಭಾವದಿಂದಾಗಿ ಮುಂದಿನ 5 ದಿನ ಒಡಿಶಾ ಮತ್ತಿತರ ರಾಜ್ಯಗಳು ಹಾಗೂ ಕರಾವಳಿ ಭಾಗದಲ್ಲಿ ಅತ್ಯಧಿಕ ಮಳೆ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಾಶ್ಮೀರ, ಪಂಜಾಬ್, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ, ಮಧ್ಯ ಪ್ರದೇಶಗಳಲ್ಲಿ ನಿರಂತರ ಮಳೆ ಆಗಿತ್ತು. ಇದೀಗ ಆ ಭಾಗಗಳಲ್ಲಿ ಮಳೆ ಕಡಿಮೆ ಆಗಿದೆ. ಸೆಪ್ಟೆಂಬರ್ 10ರಿಂದ 16ರವರೆಗೆ ಈಶಾನ್ಯ ರಾಜ್ಯಗಳಲ್ಲಿ ಮಳೆ ಮುಂದುವರಿಯುವ ನಿರೀಕ್ಷೆ ಇದೆ.ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರದಲ್ಲಿ ಹಗುರದಿಂದ ಮಧ್ಯಮ ಮಟ್ಟದ ಮಳೆ ಹಾಗೂ ಗುಡುಗು ಸಹಿತ ಮಳೆಯಾಗಬಹುದು. ಸೆಪ್ಟೆಂಬರ್ 12ರಿಂದ 16ರ ನಡುವೆ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ ಭಾರೀ ಮಳೆ ಆಗಲಿದೆ.

ಪೂರ್ವ ಮತ್ತು ಮಧ್ಯ ಭಾರತದ ಹಲವೆಡೆ ಮಳೆ ಚುರುಕಾಗಿದೆ. ಪಶ್ಚಿಮ ಮಧ್ಯಪ್ರದೇಶ, ಅಂಡಮಾನ್-ನಿಕೋಬಾರ್ ದ್ವೀಪಗಳು, ಪೂರ್ವ ಮಧ್ಯಪ್ರದೇಶ, ಛತ್ತೀಸ್‌ಗಢ, ಬಿಹಾರ, ಜಾರ್ಖಂಡ್, ಉಪ-ಹಿಮಾಲಯ ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಒಡಿಶಾದಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಸೆಪ್ಟೆಂಬರ್ 10-14ರ ಮಧ್ಯದಲ್ಲಿ ಛತ್ತೀಸ್‌ಗಢ ಮತ್ತು ಬಿಹಾರದಲ್ಲಿ ಹೆಚ್ಚು ಮಳೆಯಾಗಲಿದೆ.
ವಾಯುವ್ಯ ಭಾರತದ ಉತ್ತರ ಪ್ರದೇಶ, ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಕೊಂಚ ಮಳೆ ಆಗಲಿದೆ. ಸೆ.12ರಂದು ಉತ್ತರ ಪ್ರದೇಶದಲ್ಲಿ, 13ರಂದು ಜಮ್ಮು-ಕಾಶ್ಮೀರದಲ್ಲಿ, 13 ಮತ್ತು 14ರಂದು ಹಿಮಾಚಲ ಪ್ರದೇಶದಲ್ಲಿ ಹಾಗೂ 12ರಿಂದ 15ರವರೆಗೆ ಉತ್ತರಾಖಂಡದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಗಳು ಇವೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ಹವಾಮಾನದಲ್ಲಿ ಬದಲಾವಣೆ ಅಪ್ಡೇಟ್ಸ್
ಅರಬ್ಬಿ ಸಮುದ್ರ ಭಾಗದಿಂದ ದಕ್ಷಿಣ ಪಾಕಿಸ್ತಾನ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಪ್ರತಿ ಗಂಟೆಗೆ 20-40 ಕಿಲೋ ಮೀಟರ್ ವೇಗದಲ್ಲಿ ಭಾರೀ ಗಾಳಿ ಬೀಸಲಿದೆ. ಅಲ್ಲಿಂದ ಗುಜರಾತ್, ಹೈದರಾಬಾದ್ ದಿಕ್ಕಿನಲ್ಲಿ ಗಂಟೆಗೆ 360 ಕಿಲೋ ಮೀಟರ್ ವೇಗದಲ್ಲಿ ಬೀಸಲಿದೆ.
ಇನ್ನು ಒಡಿಶಾ ಕರಾವಳಿ ಭಾಗದ, ಆಂಧ್ರ ಪ್ರದೇಶ ಕರಾವಳಿ ಭಾಗದ ಸಮೀಪದಲ್ಲಿ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಪ್ರಸರಣೆ ಉಂಟಾಗಿದೆ. ಇದು ಸಮುದ್ರ ಮೇಲ್ಮೈನಿಂದ 3.1 ಕಿಲೋ ಮೀಟರ್ ಎತ್ತರದಲ್ಲಿದೆ. ಕರಾವಳಿ ಕರ್ನಾಟಕ, ಮನ್ನಾರ್, ತಮಿಳನಾಡು ಭಾಗದ ಮೇಲೂ ಚಂಡಮಾರುತ ಪ್ರಸರಣದ ಎಫೆಕ್ಟ್ ಉಂಟಾಗಿದೆ. ಇದೆಲ್ಲ ಕಾರಣಗಳಿಂದ ಈ ಭಾಗದ ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ ನೀಡಲಾಗುತ್ತಿದೆ.












Click it and Unblock the Notifications