ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಸೇರಿ ನಾಲ್ಕು ರಾಜ್ಯಗಳ ಚುನಾವಣೆ ಮೇಲೆ ಕಣ್ಣಿಟ್ಟೇ ಕೇಂದ್ರ ಬಜೆಟ್!

|
Google Oneindia Kannada News

ನವದೆಹಲಿ, ಜನವರಿ 17 : 2018-19ನೇ ಸಾಲಿನ ಕೇಂದ್ರ ಬಜೆಟ್ ಫೆಬ್ರವರಿ 1ರ ಮಧ್ಯಾಹ್ನದ ಹೊತ್ತಿಗೆ ಮಂಡನೆ ಆಗುತ್ತದೆ. ಕಳೆದ ವರ್ಷದಿಂದ ಬದಲಾಗಿರುವ ಬಜೆಟ್ ಮಂಡಿಸುವ ದಿನಾಂಕವೇ ಈ ಬಾರಿಯೂ ಮುಂದುವರಿಯಲಿದೆ. ಈ ಬಾರಿ ಕೇಂದ್ರದಿಂದ ಮಂಡನೆಯಾಗುವ ಬಜೆಟ್ ನರೇಂದ್ರ ಮೋದಿ ನೇತೃತ್ವದಲ್ಲಿ ಜನರ ಮುಂದೆ ಬರುತ್ತಿರುವ ಐದನೇ ಬಜೆಟ್.

ಅಷ್ಟೇ ಅಲ್ಲ, 2019ಕ್ಕೆ ಲೋಕಸಭೆ ಚುನಾವಣೆ ಇರುವುದರಿಂದ ಈ ಬಾರಿ ಮಂಡನೆ ಆಗುವುದು ಪೂರ್ಣ ಪ್ರಮಾಣದ ಬಜೆಟ್. ಜನವರಿ ಇಪ್ಪತ್ತೊಂಬತ್ತರಿಂದ ಫೆಬ್ರವರಿ ಒಂಬತ್ತರವರೆಗೆ ಸಂಸತ್ ನ ಬಜೆಟ್ ಮೊದಲ ಹಂತದ ಅಧಿವೇಶನ ನಡೆಯುತ್ತದೆ. ಎರಡನೇ ಅಧಿವೇಶನವು ಮಾರ್ಚ್ ಐದರಿಂದ ಏಪ್ರಿಲ್ ಆರರವರೆಗೆ ಇದೆ.

ತೆರಿಗೆ ಮಿತಿ 3 ಲಕ್ಷಕ್ಕೆ, 80C ಸೆಕ್ಷನ್ ಹೂಡಿಕೆ 2 ಲಕ್ಷಕ್ಕೆ ಏರಿಕೆ?ತೆರಿಗೆ ಮಿತಿ 3 ಲಕ್ಷಕ್ಕೆ, 80C ಸೆಕ್ಷನ್ ಹೂಡಿಕೆ 2 ಲಕ್ಷಕ್ಕೆ ಏರಿಕೆ?

ಕಳೆದ ಒಂದೂವರೆ ವರ್ಷದಲ್ಲಿ ಅಪನಗದೀಕರಣ ಹಾಗೂ ಜಿಎಸ್ ಟಿ ಜಾರಿಯಂಥ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡ ನಂತರದಲ್ಲಿ ಕೇಂದ್ರದಿಂದ ಮಂಡನೆ ಆಗುತ್ತಿರುವ ಈ ಬಾರಿಯ ಬಜೆಟ್ ಗೆ ಭಾರೀ ಮಹತ್ವ ಇದೆ. ಆದ್ದರಿಂದ ಕೇಂದ್ರ ಹಣಕಾಸು ಸಚಿವರು ಎಂಥ ಬಜೆಟ್ ಮಂಡಿಸಬಹುದು ಎಂಬ ಕುತೂಹಲವಂತೂ ಇದ್ದೇ ಇದೆ.

This time populist union budget, do you know why?

ಈಗಾಗಲೇ ಜೇಟ್ಲಿ ಅವರು ಸಂದರ್ಶನವೊಂದರಲ್ಲಿ ತಿಳಿಸಿದಂತೆ, ಕೃಷಿ ವಲಯಕ್ಕೆ ಈ ಬಾರಿಯ ಬಜೆಟ್ ನಲ್ಲಿ ಮೊದಲ ಪ್ರಾಶಸ್ತ್ಯ ಸಿಗಲಿದೆ. ಉತ್ಪಾದನೆ ಹೆಚ್ಚಾಗಿ, ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂಬ ಸಮಸ್ಯೆ ಬಗ್ಗೆ ಕೂಡ ಕೇಂದ್ರಕ್ಕೆ ಗಮನವಿದೆ. ಈ ಸ್ಥಿತಿಯಿಂದ ರೈತರನ್ನು ಹೊರ ತರುವುದಕ್ಕೆ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದು ಜೇಟ್ಲಿ ಹೇಳಿದ್ದಾರೆ.

ಎಲ್ಲರಿಗೂ ಮನೆಯೇನೋ ಸರಿ, ಬಜೆಟ್ ನಲ್ಲಿ ಇದಕ್ಕೆಲ್ಲ ಏನು ಮಾಡ್ತೀರಿ?ಎಲ್ಲರಿಗೂ ಮನೆಯೇನೋ ಸರಿ, ಬಜೆಟ್ ನಲ್ಲಿ ಇದಕ್ಕೆಲ್ಲ ಏನು ಮಾಡ್ತೀರಿ?

ಈ ಸಲದ್ದು ಖಂಡಿತವಾಗಿಯೂ ಜನಪ್ರಿಯ ಬಜೆಟ್ ಆಗಿರುತ್ತದೆ. ಏಕೆಂದರೆ ಕರ್ನಾಟಕ, ರಾಜಸ್ತಾನ, ಛತ್ತೀಸ್ ಗಢ ಹಾಗೂ ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಗಳು ಈ ವರ್ಷ ಇವೆ. ಆದ್ದರಿಂದ ಚುನಾವಣೆ ಮೇಲೆ ಕಣ್ಣಿಟ್ಟೇ ಬಜೆಟ್ ರೂಪಿಸಲಾಗುತ್ತದೆ ಎಂಬ ಅಭಿಪ್ರಾಯ ತಜ್ಞರಿಂದ ಕೇಳಿಬರುತ್ತಿದೆ.

English summary
Certainly we can expect populist budget from central government. Because Karnataka, Rajastan, Chattisgarh, Madhya Pradesh assembly elections will follow the budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X