ದೀಪಾವಳಿಯಂದು ಬೆಳಕಿನ ಸಾಲು ಎಳೆದಂತೆ ಕಂಡ ಭಾರತ
ಭೂಮಿಯಿಂದ ನೋಡಿದರೆ ಆಕಾಶದಲ್ಲಿನ ನಕ್ಷತ್ರ ಪುಂಜಗಳು ಹೇಗೆ ಗೆರೆ ಎಳೆದ ರಂಗೋಲಿಯಂತೆ, ವಿವಿಧ ಆಕಾರಗಳಲ್ಲಿ ಕಾಣುತ್ತವೋ ಅದೇ ರೀತಿ ಕಾಣುತ್ತಿದೆ ಈ ಚಿತ್ರ. ಆದರೆ ಈ ಚಿತ್ರದ ವಿಶೇಷವೆಂದರೆ, ಬಾಹ್ಯಾಕಾಶದಿಂದ ನೋಡಿದಾಗ ದೀಪಾವಳಿಯಂದು ಭಾರತ ಕಾಣಿಸಿದ ಬಗೆ ಇದು.
ಭಾರತದಲ್ಲಿ ದೀಪಾವಳಿ ಆಚರಿಸಿದ ದಿನದ ಚಿತ್ರವನ್ನು ಅಂತರಿಕ್ಷ ಯಾತ್ರಿಯೊಬ್ಬರು ಹಂಚಿಕೊಂಡಿದ್ದಾರೆ. ಈ ಚಿತ್ರವು ಬಾಹ್ಯಾಕಾಶದಿಂದ ತೆಗೆದಿದ್ದು, ಪವಾಲೋ ನೆಸ್ ಪೋಲಿ ತೆಗೆದ ಈ ಚಿತ್ರ ಈಗ ಎಲ್ಲೆಡೆ ವೈರಲ್ ಆಗಿದೆ.

ಇಟಲಿಯ ಅಂತರಿಕ್ಷ ಯಾತ್ರಿ ಪವಾಲೋ ನೆಸ್ ಪೋಲಿಗೆ ಅರವತ್ತು ವರ್ಷ ವಯಸ್ಸು. ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಇರುವ ಅವರು, ದೀಪಾವಳಿಗೆ ಶುಭಾಶಯವನ್ನು ಕೋರಿ, ಬಾಹ್ಯಾಕಾಶದಿಂದ ದೀಪಾವಳಿಯಂದು ಭಾರತ ಹೇಗೆ ಕಾಣುತ್ತಿತ್ತು ಎಂಬುದರ ಚಿತ್ರ ಕಳಿಸಿದ್ದಾರೆ.
ಅಂದಹಾಗೆ ಈ ಚಿತ್ರ ತೆಗೆದಿರುವುದು ಅಕ್ಟೋಬರ್ ಹತ್ತೊಂಬತ್ತರಂದು. ಹಿಂದೂಗಳ ಬೆಳಕಿನ ಹಬ್ಬವಾದ ದೀಪಾವಳಿಗೆ ಎಲ್ಲರಿಗೂ ಶುಭಾಶಯಗಳು ಎಂದು ಕೂಡ ಅವರು ಹೇಳಿದ್ದಾರೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿಯ ಅದ್ಭುತ ಚಿತ್ರಗಳನ್ನು ಸೆರೆ ಹಿಡಿಯುವುದು ಇದೇ ಮೊದಲೇನಲ್ಲ.












Click it and Unblock the Notifications