ಮನೆಗೆ ಹೋಗು, ಅಡುಗೆ ಮಾಡು ಎಂದಿದ್ದರು: ಬಿಜೆಪಿಗೆ ನೆನಪಿಸಿದ ಸುಪ್ರಿಯಾ ಸುಳೆ

ನವದೆಹಲಿ, ಸೆಪ್ಟೆಂಬರ್‌ 20: ಮಹಿಳಾ ಮೀಸಲಾತಿ ಮಸೂದೆ ಮೇಲಿನ ಚರ್ಚೆ ವೇಳೆ ಮಹಾರಾಷ್ಟ್ರದ ಮಾಜಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖ್ಯಸ್ಥರೊಬ್ಬರು ತಮಗೆ ಮನೆಗೆ ಹೋಗು ಅಡುಗೆ ಮಾಡು ಎಂದಿದ್ದನು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸಂಸದೆ ಸುಪ್ರಿಯಾ ಸುಳೆ ಅವರು ಬುಧವಾರ ಲೋಕಸಭೆಯಲ್ಲಿ ನೆನಪಿಸಿಕೊಂಡರು.

ಸದನದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಸುಳೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಮಹಿಳೆಯರ ಕುರಿತು ಅವಹೇಳನಕಾರಿಯಾಗಿ ಮಾತನಾಡಿ, ಮಹಾರಾಷ್ಟ್ರದಲ್ಲಿ ಬಿಜೆಪಿ ಮುಖ್ಯಸ್ಥರಿದ್ದರು. ಅವರು ನಾನು ಮನೆಗೆ ಹೋಗಿ ಅಡುಗೆ ಮಾಡಬೇಕು ಎಂದು ನನಗೆ ಹೇಳಿದ್ದರು ಎಂದು ನೆನಪಿಸಿಕೊಂಡರು.

supriya-sule-reminded-bjp

ಮಹಾರಾಷ್ಟ್ರದ ಮಾಜಿ ಬಿಜೆಪಿ ಮುಖ್ಯಸ್ಥರನ್ನು ಉಲ್ಲೇಖಿಸಿ "ಅವರು ಸುಪ್ರಿಯಾ ಸುಲೇ ಘರ್ ಜಾವೋ, ಖಾನಾ ಬನಾವೋ, ದೇಶ್ ಕೋಯಿ ಔರ್ ಚಲಾ ಲೆಗಾ ಎಂದು ಹೇಳಿದ್ದರು. ಹಮ್ ಲೋಗ್ ಚಲಾಯೇಂಗೆ (ಸುಪ್ರಿಯಾ ಸುಳೆ ಮನೆಗೆ ಹೋಗಿ ಅಡುಗೆ ಮಾಡಿ, ನಾವೆಲ್ಲರೂ ದೇಶವನ್ನು ನಡೆಸುತ್ತೇವೆ). ಇದು ಬಿಜೆಪಿಯ ಮನಸ್ಥಿತಿ ಎಂದು ಅವರು ಹೇಳಿದರು.

ಬಿಜೆಪಿ ನಾಯಕರು ಮಹಿಳಾ ಶಾಸಕರ ಬಗ್ಗೆ ವೈಯಕ್ತಿಕ ಟೀಕೆಗಳನ್ನು ಮಾಡುತ್ತಾರೆ, ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ನಾನು ಕೇವಲ ವೈಯಕ್ತಿಕ ಅನುಭವವನ್ನು ಉಲ್ಲೇಖಿಸುತ್ತಿದ್ದೇನೆ ಎಂದರು. ಹಿಂದಿನ ದಿನ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಮೇಲಿನ ಚರ್ಚೆ ಪ್ರಾರಂಭವಾಗುತ್ತಿದ್ದಂತೆ, ಆಡಳಿತಾರೂಢ ಬಿಜೆಪಿ ಕಾಂಗ್ರೆಸ್ ಅನ್ನು ಟೀಕಿಸಿತು. ಪಕ್ಷ ರಾಜಕೀಯವನ್ನು ಆಡಲು ಪ್ರಯತ್ನಿಸುತ್ತಿದೆ ಮತ್ತು ಪ್ರತಿಪಕ್ಷಗಳು ಏನನ್ನೂ ಮಾಡಿಲ್ಲ ಎಂದು ಏಕೆ ಹೇಳುತ್ತಿವೆ ಎಂದು ಆಶ್ಚರ್ಯವ್ಯಕ್ತಪಡಿಸಿತ್ತು.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಲು ಮಸೂದೆ ಅವಕಾಶ ಕಲ್ಪಿಸಿದೆ. ಜನಗಣತಿ ಮತ್ತು ಡಿಲಿಮಿಟೇಶನ್ ನಂತರವೇ ಮೀಸಲಾತಿ ಜಾರಿಗೆ ಬರಲಿದೆ. ಮಸೂದೆಯನ್ನು ಕುರಿತು ಮಾತನಾಡಿದ ಬಿಜೆಪಿ ಸದಸ್ಯ ನಿಶಿಕಾಂತ್ ದುಬೆ, ಮಸೂದೆಯನ್ನು ಮೊದಲೇ ತರದಿರುವ ಬಗ್ಗೆ ಕೆಲವು ವಲಯಗಳಲ್ಲಿ ಟೀಕೆಗಳ ನಡುವೆ ಸಂವಿಧಾನದ ಪ್ರಕಾರ ಕೆಲಸಗಳು ನಡೆಯುತ್ತವೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+