ಕಾಂಡೋಮ್ ವಿಚಾರದಲ್ಲೂ ಹೊಸ ದಾಖಲೆ ಸೃಷ್ಟಿ! ಏನು ಗೊತ್ತಾ?

ಆರೋಗ್ಯ ಕಾಪಾಡಿಕೊಳ್ಳುವ ಉದ್ದೇಶದಿಂದ, 'ಕಾಂಡೋಮ್' ಬಳಕೆ ಬಗ್ಗೆ ಸರ್ಕಾರಗಳೇ ಜಾಗೃತಿ ಮೂಡಿಸುತ್ತವೆ. ಭಾರತದಲ್ಲಿ ಕೆಲವು ವರ್ಷಗಳಿಂದ ಕಾಂಡೋಮ್ ಬಳಕೆ ಕುರಿತು ಜನರು ಕೂಡ ಜಾಗೃತರಾಗುತ್ತಿದ್ದಾರೆ. ಹೀಗೆ, ದೇಶದಲ್ಲಿ ಸುರಕ್ಷಿತ ಲೈಂಗಿಕ ಕ್ರಿಯೆಗೆ ಬಳಸುವ ವಸ್ತುಗೆ ಭರ್ಜರಿ ಡಿಮ್ಯಾಂಡ್ ಇದೆ. ಅದರಲ್ಲೂ ಆನ್‌ಲೈನ್ ಮೂಲಕ ಕಾಂಡೋಮ್‌ಗಳನ್ನ ಆರ್ಡರ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಹೌದು ಆನ್‌ಲೈನ್ ಡೆಲಿವರಿ ಆ್ಯಪ್‌ 'ಸ್ವಿಗ್ಗಿ', ಫುಡ್ ಸೇರಿದಂತೆ ಹಲವು ವಸ್ತುಗಳನ್ನ ಈಗ ಜನರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಅದರಲ್ಲೂ 'ಸ್ವಿಗ್ಗಿ' ತನ್ನ ಇನ್‌ಸ್ಟಾಮಾರ್ಟ್ ಸೇವೆ ಮೂಲಕ ಜನರ ಮನೆ ಬಾಗಿಲಿಗೆ, ದಿನದ 24 ಗಂಟೆ ಕಾಲ ಯಾವಾಗ ಬೇಕಾದರೂ ಯಾವುದೇ ವಸ್ತುವನ್ನ ತಲುಪಿಸುವ ಸೇವೆ ನೀಡುತ್ತಿದೆ. ಅದೇ ರೀತಿ ಸುರಕ್ಷಿತ ಲೈಂಗಿಕ ಕ್ರಿಯೆಗೆ ಅಗತ್ಯ ಎನಿಸುವ 'ಕಾಂಡೋಮ್' ಡೆಲಿವರಿ ಕೂಡ ಮಾಡುತ್ತಿದೆ. ಆದರೆ ಗ್ರಾಹಕರು, ಹೀಗೆ ಸ್ವಿಗ್ಗಿ ಮೂಲಕ ಯಾವ ತಿಂಗಳಲ್ಲಿ ಅತಿಹೆಚ್ಚು 'ಕಾಂಡೋಮ್' ಆರ್ಡರ್ ಮಾಡಿದ್ದಾರೆ ಗೊತ್ತಾ?

These are 2 months when people order the highest number of condoms in 2023 from Swiggy Instamart

ಯಾವ ತಿಂಗಳು ಹೆಚ್ಚು 'ಕಾಂಡೋಮ್' ಆರ್ಡರ್?

ಇದೀಗ ಸ್ವಿಗ್ಗಿ ತನ್ನ 2023ನೇ ಸಾಲಿನ ಅಂಕಿ & ಅಂಶ ಬಿಡುಗಡೆ ಮಾಡಿ, ಯಾವ ವಸ್ತುನ ಹೆಚ್ಚು ಜನರು ಆರ್ಡರ್ ಮಾಡಿದ್ದಾರೆ ಅಂತಾ ತಿಳಿಸಿದೆ. ಆ ಪ್ರಕಾರ, ಸ್ವಿಗ್ಗಿ ಈಗ ಸೇವೆಯ ನೀಡುತ್ತಿರುವ 99 ವಸ್ತುಗಳ ಪೈಕಿ ಕಾಂಡೋಮ್ ಅನ್ನ ಜನರು ದಿನದಿಂದ ದಿನಕ್ಕೆ ಹೆಚ್ಚಾಗಿ ಆರ್ಡರ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಸ್ವಿಗ್ಗಿ ನೀಡಿದ ಮಾಹಿತಿ ಪ್ರಕಾರ 2023ರ ಫೆಬ್ರವರಿ & ಸೆಪ್ಟೆಂಬರ್ ತಿಂಗಳಲ್ಲಿ ಜನ ಹೆಚ್ಚಾಗಿ ಕಾಂಡೋಮ್ ಆರ್ಡರ್ ಮಾಡಿದ್ದಾರಂತೆ. ಹೀಗೆ ಆ 2 ತಿಂಗಳು ಕಾಂಡೋಮ್‌ಗೆ ಭಾರಿ ಡಿಮ್ಯಾಂಡ್ ಇತ್ತು ಅನ್ನುತ್ತಿದೆ ಸ್ವಿಗ್ಗಿ ಅಂಕಿ ಅಂಶ.

ಕಾಂಡೋಮ್ ಬಳಸುವ ನಂ. 1 ದೇಶ?

ಇನ್ನು ಜಗತ್ತಿನಲ್ಲೇ ಅತಿಹೆಚ್ಚು ಕಾಂಡೋಮ್ ಬಳಸುವ ದೇಶಗಳ ಪಟ್ಟಿ ನೋಡುವುದಾದ್ರೆ, ಭಾರತ 5ನೇ ಸ್ಥಾನದಲ್ಲಿ ಇದೆ. ಹಾಗೇ 1ನೇ ಸ್ಥಾನದಲ್ಲಿ ಅಮೆರಿಕ ಇದ್ದರೆ, 2ನೇ ಸ್ಥಾನಕ್ಕೆ ಯುನೈಟೆಡ್ ಕಿಂಗ್‌ಡಮ್ ಅಂದ್ರೆ ಯುಕೆ ತೃಪ್ತಿಪಟ್ಟುಕೊಂಡಿದೆ. ಹಾಗೇ 3ನೇ ಸ್ಥಾನದಲ್ಲಿ ಜಪಾನ್ ಇದ್ದು, 4ನೇ ಸ್ಥಾನ ಚೀನಾ ಪಾಲಾಗಿದೆ. ಇಷ್ಟೂ ದೇಶಗಳು ಜಗತ್ತಿನಲ್ಲೇ ಅತಿಹೆಚ್ಚು ಕಾಂಡೋಮ್ ಬಳಸುವ ಜನರನ್ನ ಹೊಂದಿರುವ ರಾಷ್ಟ್ರಗಳಾಗಿವೆ. ಭಾರತದಲ್ಲಿ ಕೂಡ ಈ ವ್ಯತ್ಯಾಸ ವರ್ಷದಿಂದ ವರ್ಷಕ್ಕೆ ವ್ಯತ್ಯಾಸ ಕಾಣುತ್ತಿದೆ. ಹೀಗೆ ಸುರಕ್ಷಿತ ಲೈಂಗಿಕ ಕ್ರಿಯೆಗಾಗಿ ಕಾಂಡೋಮ್ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+