ಹರಿಯಾಣದಲ್ಲಿ ಬಿಜೆಪಿ ಅಭೂತ ಪೂರ್ವ ಗೆಲುವಿಗೆ ಇದೇ 'ತ್ರಿಮೂರ್ತಿ' ನಾಯಕರು ಕಾರಣ
ನವದೆಹಲಿ, ಅಕ್ಟೋಬರ್ 10: ಹರಿಯಾಣದ ಸದರಿ ವಿಧಾನಸಭಾ ಚುನಾವಣೆಯಲ್ಲಿ ಅನೇಕ ಸವಾಲುಗಳ ಮಧ್ಯೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಪ್ರಯಾಸದಾಯಕವಾಗಿ ಈಜಿ ದಡ ಸೇರಿದೆ. ದಶಕಗಳ ಆಡಳಿತ ವಿರೋಧಿ ಅಲೆ ನಡುವೆ ಪ್ರಚಂಡ ಬಹುಮತ ಗಳಿಸಲು ಈ 'ತ್ರಿಮೂರ್ತಿ'ಗಳ ಪಾತ್ರ ಮಹತ್ವದ್ದಾಗಿದೆ. ಇಲ್ಲಿನ ಗೆಲುವು ಬಿಜೆಪಿಗೆ ಮಹಾರಾಷ್ಟ್ರ, ಝಾರ್ಖಂಡ್ ಚುನಾವಣೆ ಮೇಲೂ ಪರಿಣಾಮ ಭೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿ ಹರಿಯಾಣದಲ್ಲಿ ಅಚ್ಚರಿಯ ರೀತಿಯಲ್ಲಿ ಕಾಂಗ್ರೆಸ್ ವಿರುದ್ಧ ಗೆದ್ದು ಬೀಗಿದೆ. ನಿರುದ್ಯೋಗ, ರೈತರ ಪ್ರತಿಭಟನೆ, ಶಾಸಕರ ಅಸಮಾಧಾನ, ಕುಸ್ತಿಪಟುಗಳ ಧರಣಿಯಂತ ಹಲವು ಸವಾಲುಗಳನ್ನು ಸಮರ್ಥವಾಗಿ ಬಿಜೆಪಿ ನಿಭಾಯಿಸಿದೆ. ಆಡಳಿತ ವಿರೋಧಿ ಅಲೆ ಇದ್ದ ಕಾರಣ ಕಾಂಗ್ರೆಸ್ ತಾನು ಅಧಿಕಾರಕ್ಕೆ ಬರಲಿದೆ ಎಂದುಕೊಂಡಿತ್ತು. ಆದರೆ ಈ ತ್ರಿಮೂರ್ತಿಗಳ ನಿರಂತರ ಶ್ರಮದಿಂದ ಕಾಂಗ್ರೆಸ್ ಲೆಕ್ಕಾಚಾರ ತಲೆಕೆಳಗಾಯಿತು.

ಹೌದು, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಿರಿಯ ನಾಯಕರಾದ ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್, ಸತೀಶ್ ಪೂನಿಯಾ ಮತ್ತು ಬಿಪ್ಲಬ್ ದೇವ್. ಈ ಮೂವರು ಹರಿಯಾಣದಲ್ಲಿ ಬಿಜೆಪಿ ಮೂರನೇ ಭಾರಿಗೆ ಅಧಿಕಾರ ಹಿಡಿಯಲು ಕಾರಣಿಭೂತರಾಗಿದ್ದಾರೆ.
ಸೂಕ್ತ ಸಮಯಕ್ಕೆ ನಾಯಕತ್ವ ಬದಲಾವಣೆ
ರಾಜಕೀಯ ಬೆಳವಣಿಗೆ ಆಧರಿಸಿ ಸೂಕ್ತ ಸಮಯದಲ್ಲಿ ನಾಯಕತ್ವ ಬದಲಾವಣೆ ಮಾಡಲಾಯಿತು. ಪಕ್ಷವನ್ನು ತಳಮಟ್ಟದ ಸಂಘಟನೆಗೆ ಮುಂದಾಯಿತು. ಆರ್ಎಸ್‌ಎಸ್ ಕಾರ್ಯಕರ್ತರನ್ನು ಒಗ್ಗೂಡಿಸಿ ಗ್ರಾಮೀಣ ಭಾಗದ ಜನರನ್ನು ಸಂಪರ್ಕಿಸಲಾಯಿತು. ಎಲ್ಲ ಸಮುದಾಯದವರನ್ನು ಟಾರ್ಗೆಟ್ ಮಾಡಲಾಯಿತು. ಗ್ರಾಮೀಣ ಭಾಗದಲ್ಲಿ ನಿರಂತರ ಸಭೆ ನಡೆಸಿ ಸರ್ಕಾರ ಯೋಜನೆ ತಲುಪಿಸಲಾಯಿತು.
ಸವಾಲುಗಳ ಯಶಸ್ವಿ ನಿರ್ವಹಣೆ
ಹೀಗೆ ತಳಮಟ್ಟದಲ್ಲಿ ಪಕ್ಷ ಸಂಘಟಿಸುವಲ್ಲಿ ಯಶಸ್ವಿಯಾದ ಬಿಜೆಪಿಯು ತನ್ನ ಮೇಲಿನ ಆರೋಪಗಳಿಂದ ಮುಕ್ತಗೊಳಿಸುವಲ್ಲಿ ಒಂದ ಹಂತದಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಧರ್ಮೇಂದ್ರ ಪ್ರಧಾನ್ ಅವರು ಓಡಿಶಾ ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಅವರು ಇಲ್ಲೂ ಸಹ ಪ್ರಮುಖ ಕೊಡುಗೆ ನೀಡಿದ್ದಾರೆ.
ಚುನಾವಣೆ ವೇಳೆ ಟಿಕೆಟ್ ಹಂಚಿಕೆ, ಪಕ್ಷ ಸೇರ್ಪಡೆ, ಜಾತಿ ಆಧಾರಿತ ಪ್ರಭಾವಿ ನಾಯಕರು, ಅದರಲ್ಲೂ ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಣ್ಣಕ್ಕಿಳಿಸಿತು. ರೈತರ ಸಮಸ್ಯೆಗಳ ವಿಚಾರದಲ್ಲಿ ಹೆಚ್ಚು ಸೂಕ್ಷ್ಮವಾಗಿ ನಡೆದುಕೊಂಡು ಪರಿಣಾಮ ಇಂದು ಬಿಜೆಪಿ ಮರಳಿ ಅಧಿಕಾರ ಹಿಡಿಯುವಲ್ಲಿ ಸಫಲವಾಗಿದೆ.
ಚುನಾವಣೆಗೂ ಮೊದಲು ಕೇಂದ್ರ ಬಿಜೆಪಿಯು ಈ ಮೂವರನ್ನು ರಾಜ್ಯಕ್ಕೆ ಸೀಮಿತವಾಗಿ, ಗೆಲುವಿನ ಹಾದಿ ಸುಗಮ ಮಾಡಲು ಒಂದಷ್ಟು ಟಾಸ್ಕ್ ನೀಡಲಾಯಿತು. ತಮಗೆ ದೊರೆತ ಸವಾಲುಗಳನ್ನು ಲೀಲಾಜಾಲವಾಗಿ ನಿರ್ವಹಿಸಿದ ಪರಿಣಾಮವೇ ಇಂದು ಮೂರನೇ ಭಾರಿಗೆ ಬಿಜೆಪಿ ಹ್ಯಾಟ್ರಿಕ್ ಭಾರಿಸಿದೆ.












Click it and Unblock the Notifications