ಬಿಹಾರದ ಶಾಲೆಯಲ್ಲಿ ಶಿಕ್ಷಕರಿಂದಲೇ ಸಾಮೂಹಿಕ ಅತ್ಯಾಚಾರ

Posted By:
Subscribe to Oneindia Kannada

ಬಿಹಾರ (ಜಹಾನಾಬಾದ್) ಜನವರಿ 16: 12 ವರ್ಷದ ಬಾಲಕಿಯ ಮೇಲೆ ಸರ್ಕಾರಿ ಶಾಲೆಯ ಹೆಡ್ ಮಾಸ್ಟರ್ ಮತ್ತು ಮೂವರು ಶಿಕ್ಷಕರು ಸೇರಿ ಸಾಮೂಹಿಕ ಅತ್ಯಾಚಾರ ವೆಸಗಿದ್ದಾರೆ ಎಂದು ಜಹಾನಾಬಾದ್ ಪೊಲೀಸರು ತಿಳಿಸಿದ್ದಾರೆ.

ಜಹಾನಾಬಾದಿನ ಪ್ರೌಢಶಾಲೆಯಲ್ಲಿ ಭಾನುವಾರ ಬಾಲಕಿ ಒಬ್ಬಳೇ ಇದ್ದ ಸಮಯದಲ್ಲಿ ಶಾಲಾ ಮುಖ್ಯ ಶಿಕ್ಷಕ ಅಜು ಅಹ್ಮದ್ ಹಾಗೂ ಶಿಕ್ಷಕರಾದ ಅತುಲ್ ರಹಮಾನ್, ಅಬ್ದುಲ್ ಮತ್ತು ಎಂ.ಡಿ.ಷಕೌತ್ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಎಂದು ಪೊಲೀಸ್ ಅಧಿಕಾರಿ ಪಿ.ಕೆ.ಶ್ರೀವಾಸ್ತವ್ ತಿಳಿಸಿದರು.[ಚಿಕ್ಕಬಳ್ಳಾಪುರ : ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ]

The school teacher's gang- raped his 12 year student in jahanabad, Bihar

ಶುಕ್ರವಾರ ರಜೆ ಘೋಷಿಸಿ ಭಾನುವಾರ ಶಾಲೆ ಕಾರ್ಯನಿರ್ವಹಿಸುವ ಕುರಿತು ಮೌಖಿಕವಾಗಿ ಮುಖ್ಯಶಿಕ್ಷಕ ಪ್ರಕಟಣೆ ಹೊರಡಿಸಿದ್ದರು. ಭಾನುವಾರ ಎಲ್ಲರು ಮನೆಗೆ ತೆರಳಿದ ಮೇಲೆ ಶಾಲೆಯಲ್ಲಿ ಒಬ್ಬಳೇ ಇದ್ದ ಆಕೆಯನ್ನು ಶಾಲೆಯ ಮೇಲ್ಚಾವಣಿಗೆ ಕರೆದೊಯ್ದು ಕೃತ್ಯ ವೆಸಗಿದ್ದಾರೆ ಎಮದು ಬಾಲಕಿ ತಾಯಿ ನೀಡಿರುವ ದೂರಿನಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.

ಕೂದಲು ಮತ್ತು ಬಟ್ಟೆ ಕೆದರಿದ ಸ್ಥಿತಿಯಲ್ಲಿ ಬಿದ್ದಿದ್ದ ಬಾಲಕಿಯನ್ನು ಶಾಲೆಯ ಶಿಕ್ಷಕರೊಬ್ಬರು ಹಾಗೂ ತಾಯಿ ಪತ್ತೆ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The School teacher's gang- raped his 12 year student in Jamanabad, Bihar. Mass rape by four teachers, including head master doing this.
Please Wait while comments are loading...