LPG Price Hike: ತಿಂಗಳ ಮೊದಲ ದಿನವೇ ಎಲ್‌ಪಿಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆ!

ಡಿಸೆಂಬರ್‌ 1 ಅಂದರೆ ಇಂದು ತಿಂಗಳ ಮೊದಲ ದಿನವೇ ಬೆಲೆ ಏರಿಕೆ ಬಿಸಿ ತಟ್ಟಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆ ಕಂಡಿದ್ದು, ತೈಲ ಕಂಪನಿಗಳು ಸಿಲಿಂಡರ್ ದರವನ್ನು 16.5 ರೂಪಾಯಿ ಹೆಚ್ಚಳ ಮಾಡಿರುವುದಾಗಿ ವರದಿಯಾಗಿದೆ.

ಆದರೆ, ಗೃಹ ಬಳಕೆಯ ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಎಂದಿನಂತೆಯೇ ಮುಂದುವರಿಯಲಿದೆ ಎಂದು ಹೇಳಲಾಗಿದೆ. ಈಗ ಹೊಸ ದರ ಪರಿಷ್ಕರಣೆಯಾಗಿದ್ದು 19 ಕೆ.ಜಿ ತೂಕದ ವಾಣಿಜ್ಯ ಬಳಕೆಯ ಸಿಲಿಂಡರ್ ದರ ಇಂದಿನಿಂದ 1,818.50 ರೂಪಾಯಿ ಆಗಿರಲಿದೆ.

The Price Of A Cylinder For Commercial Use Has Increased By Rs 16 5 From Today

ವಾಣಿಜ್ಯ ಬಳಕೆಯ 5 ಕೆ.ಜಿ ತೂಕದ ಸಿಲಿಂಡರ್ ದರದಲ್ಲೂ 4 ರೂಪಾಯಿ ಹೆಚ್ಚಾಗಿದ್ದು, 14.2 ಕೆ.ಜಿ ತೂಕದ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇನ್ನು ಕಳೆದ ತಿಂಗಳು ಸಹ 19 ಕೆ.ಜಿ ತೂಕದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಬರೋಬ್ಬರಿ 62 ರೂಪಾಯಿ ಏರಿಕೆ ಕಂಡಿತ್ತು. ಇದೀಗ ಡಿಸೆಂಬರ್‌ ತಿಂಗಳಲ್ಲೂ ಬೆಲೆ ಏರಿಕೆ ಮುಂದುವರಿದಿದೆ.

ಪ್ರತಿ ತಿಂಗಳ ಮೊದಲ ದಿನವೇ ವಾಣಿಜ್ಯ ಉದ್ದೇಶಕ್ಕೆ ಬಳಸುವ ಎಲ್‌ಪಿಜಿ ಸಿಲಿಂಡರ್‌ಗಳ ದರ ನಿರಂತರವಾಗಿ ಏರಿಕೆ ಕಾಣುತ್ತಿದೆ. ಇದರಿಂದ ವಾಣಿಜ್ಯ ಸಂಸ್ಥೆಗಳು, ವ್ಯಾಪಾರಿಗಳ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಅಲ್ಲದೆ ಬಹುತೇಕ ಹೋಟೆಲ್‌ಗಳಲ್ಲೂ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನೇ ಹೆಚ್ಚಾಗಿ ಬಳಕೆ ಮಾಡುವುದರಿಂದಾಗಿ ಅವರಿಗೂ ಇದರ ಬಿಸಿ ತಟ್ಟಿದೆ ಎಂದು ಹೇಳಲಾಗುತ್ತಿದೆ. ಇದು ಕ್ರಮೇಣ ಹೋಟೆಲ್‌ಗಳಲ್ಲೂ ಆಹಾರದ ದರ ಕೂಡ ಏರಿಸುವ ಸಾಧ್ಯತೆಯೂ ಇದೆ.

ಕಳೆದ ತಿಂಗಳ ಕೊನೆಯಲ್ಲಿ ದೀಪಾವಳಿ ಹಬ್ಬವಿತ್ತು. ಈ ವೇಳೆಯೂ ಬೆಲೆ ಏರಿಕೆಯಾಗಿತ್ತು. ದೀಪಾವಳಿ ಸಂಭ್ರಮದ ಹೊತ್ತಲ್ಲೇ ಕೇಂದ್ರ ಸರ್ಕಾರ ಬಿಗ್‌ ಶಾಕ್‌ ನೀಡಿತ್ತು. ವಾಣಿಜ್ಯ ಬಳಕೆಯ 19 ಕೆ.ಜಿ. ತೂಕದ ಸಿಲಿಂಡರ್‌ ದರವನ್ನು 62 ರೂಪಾಯಿ ಏರಿಕೆ ಮಾಡಿತ್ತು. ಆಗ ದೆಹಲಿಯಲ್ಲಿ ಸಿಲಿಂಡರ್‌ ದರ 1,802 ರೂಪಾಯಿ ಎಂದು ವರದಿಯಾಗಿತ್ತು.

The Price Of A Cylinder For Commercial Use Has Increased By Rs 16 5 From Today

5 ಕೆ.ಜಿ. ಫ್ರೀ ಟ್ರೇಡ್ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯೂ ಏರಿಕೆ ಕಂಡು, 15 ರೂಪಾಯಿ ಹೆಚ್ಚಿಸಲಾಗಿತ್ತು. 14.2 ಕೆ.ಜಿ. ಸಿಲಿಂಡರ್ ದರ ಯತಾಸ್ಥಿತಿಯಲ್ಲಿತ್ತು. ಆಗಲೂ ವಾಣಿಜ್ಯ ಬಳಕೆಯ ಸಿಲಿಂಡರ್‌ ದರಗಳನ್ನು ಮಾತ್ರವೇ ಹೆಚ್ಚಿಸಲಾಗಿದ್ದು, ಗೃಹ ಬಳಕೆ ಸಿಲಿಂಡರ್‌ಗಳ ದರ ಏರಿಕೆಯಾಗಿರಲಿಲ್ಲ. ಈಗಲೂ ಜನ ಇದರಿಂದ ರಿಲೀಫ್‌ ಆಗಿದ್ದಾರೆ.

ದೆಹಲಿ, ಮುಂಬೈ, ಕಲ್ಕತ್ತಾ, ಚೆನ್ನೈ ಸೇರಿದಂತೆ ಹಲವು ನಗರಗಳಲ್ಲಿ ಇಂದಿನಿಂದಲೇ ಈ ಪರಿಷ್ಕೃತ ದರ ಇರಲಿದೆ. ಕಳೆದ ಮೂರು ತಿಂಗಳಿನಿಂದಲೂ ವಾಣಿಜ್ಯ ಬಳಕೆ ಸಿಲಿಂಡರ್‌ ದರ ನಿರಂತರವಾಗಿ ಏರುತ್ತಿದೆ. ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ತಿಂಗಳಲ್ಲೂ ಮೊದಲ ದಿನದಂದೇ ದರಗಳು ಏರಿದ್ದವು. ಅದರಂತೆ ನವೆಂಬರ್‌ ತಿಂಗಳ ಮೊದಲ ದಿನವೂ ದರ ಏರಿಕೆ ಕಂಡು, ಡಿಸೆಂಬರ್‌ಗೂ ಬೆಲೆ ಏರಿಕೆ ಶಾಕ್‌ ಮುಂದುವರಿದಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ದರ ಹೆಚ್ಚಳ ಹಾಗೂ ವಿದೇಶಿ ವಿನಿಮಯ ದರಕ್ಕೆ ಅನುಗುಣವಾಗಿ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪ್ರತಿ ತಿಂಗಳು ಎಲ್‌ಪಿಜಿ ದರ ಪರಿಷ್ಕರಿಸುತ್ತಿವೆ. ಅದರಂತೆ ಈ ತಿಂಗಳು ಕೂಡ ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ಏರಿಕೆ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+