Air India: ಪೈಲಟ್ ಬಚಾವ್ ಮಾಡಿದ್ದೆಂಗೆ 141 ಜನರನ್ನ, ಭಾರತಕ್ಕೆ ಬ್ಯ್ಲಾಕ್ ಬದಲು ಲಕ್ಕಿ ಫ್ರೈಡೆ!
ಭಾರತಕ್ಕೆ ಹಾಗೂ ತಮಿಳುನಾಡಿಗೆ ಶುಕ್ರವಾರ ಲಕ್ಕಿಫ್ರೈಡೆ ಎಂದೇ ಹೇಳಬಹುದು. ಭಾರತದಲ್ಲಿ ಸಂಭವಿಸಬಹುದಾಗಿದ್ದ ಭಾರೀ ದೊಡ್ಡ ದುರಂತವೊಂದನ್ನು ಏರ್ ಇಂಡಿಯಾ ಪೈಲೆಟ್ ತಪ್ಪಿಸಿದ್ದಾರೆ. ಏರ್ ಇಂಡಿಯಾ ಪೈಲೆಟ್ ಅವರ ಹಾಗೂ ಏರ್‌ಇಂಡಿಯಾ ಸಿಬ್ಬಂದಿಯ ನಡೆಗೆ ಇದೀಗ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಬೋಬ್ಬರಿ 141 ಜನರಿಗೆ ಏರ್ ಇಂಡಿಯಾ ಪೈಲೆಟ್ ಮರುಜೀವ ನೀಡಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಅಷ್ಟಕ್ಕೂ ಏರ್ ಇಂಡಿಯಾ ಪೈಲೆಟ್ ಅಂತಹ ತುರ್ತು ಸಂದರ್ಭದಲ್ಲೂ ಮಾಡಿದ್ದು ಏನು, ಹೇಗೆ ರಕ್ಷಣಾ ಕಾರ್ಯಾಚರಣೆ ನಡೆಯಿತು ಎನ್ನುವ ವಿವರ ಇಲ್ಲಿದೆ.

ಶುಕ್ರವಾರ ಭಾರತ ಹಾಗೂ ತಮಿಳುನಾಡಿಗೆ ಲಕ್ಕಿ ಡೇ ಎಂದೇ ಹೇಳಬಹುದು. ಬರೋಬ್ಬರಿ 141 ಜನ ಮರುಜೀವ ಪಡೆದಿದ್ದಾರೆ. 141 ಜನ ವಿಮಾನದಲ್ಲಿದ್ದ ಪ್ರಯಾಣಿಕರು ಹಾಗೂ ಪೈಲೆಟ್, ವಿಮಾನದ ಸಿಬ್ಬಂದಿಗೆ ಸಾವನ್ನು ಗೆದ್ದು ಬಂದ ಸಂಭ್ರಮ. ಏರ್ ಇಂಡಿಯಾದ ವಿಮಾನ IX613 ಶುಕ್ರವಾರ 141 ಜನ ಪ್ರಯಾಣಿಕರನ್ನು ಹೊತ್ತು ಸಾಗಿತ್ತು.
ತಮಿಳುನಾಡಿನ ತಿರುಚ್ಚಿ ವಿಮಾನ ನಿಲ್ದಾಣದ ಶುಕ್ರವಾರ ತಡರಾತ್ರಿ ಆತಂಕ, ದುಗುಡ ಹಾಗೂ ಸಂಭ್ರಮಗಳಿಗೆ ಏಕಕಾಲಕ್ಕೆ ಸಾಕ್ಷಿಯಾಯಿತು. ಪ್ರಯಾಣಿಕರು ಹಾಗೂ ಅವರ ಕುಟುಂಬದ ಸಾವಿರಾರು ಜನ ನಿಟ್ಟುಸಿರುವ ಬಿಡುವುದಕ್ಕೆ ಕಾರಣವಾಗಿದ್ದು ಪೈಲೆಟ್ ಅವರ ಜಾಣ್ಮೆಯ ನಡೆ ಎಂದೇ ಹೇಳಲಾಗುತ್ತಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಬೆನ್ನಲ್ಲೇ ವಿಮಾನದ ಪೈಲೆಟ್ ಹಾಗೂ ಸಹಾಯಕ ಸಿಬ್ಬಂದಿ ಅಲರ್ಟ್ ಆಗಿದ್ದರು.
ಕೂಡಲೇ ಅನೌನ್ಸಮೆಂಟ್ ನೀಡಲಾಯಿತು. ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಯಾರೂ ಆತಂಕಕ್ಕೆ ಒಳಗಾಗಬೇಡಿ. ಪೈಲೆಟ್ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲು ಬೇಕಾದ ಎಲ್ಲಾ ಸಾಧ್ಯತೆಗಳನ್ನೂ ಪರಿಶೀಲನೆ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ವಿಮಾನದ ಪ್ರಯಣಿಕರು ಈ ಸಂದರ್ಭದಲ್ಲಿ ಆತಂಕಕ್ಕೆ ಒಳಗಾಗಬೇಡಿ. ಸೀಟ್‌ನಿಂದ ಎದ್ದೇಳ ಬಾರದು. ತುರ್ತು ಸಂದರ್ಭ ಹಾಗೂ ವ್ಯತಿರಿಕ್ತ ಪರಿಣಾಮ ಇರುವುದರಿಂದಾಗಿ ದಯವಿಟ್ಟು ಈ ಸಂದರ್ಭದಲ್ಲಿ ಶೌಚಾಲಯಕ್ಕೆ ಹೋಗಬಾರದು ಎಂದು ಸೂಚನೆ ನೀಡಲಾಯಿತು.
ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಆದರೆ, ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ವಿಮಾನದ ಕಿಟಕಿಗಳನ್ನು ಸಂಪೂರ್ಣವಾಗಿ ಮುಚ್ಚಿ. ಸೀಟ್ ಬೆಲ್ಟ್‌ಗಳನ್ನು ಯಾವುದೇ ಕಾರಣಕ್ಕೂ ಕಳಚ ಬೇಡಿ. ಇದು ಪೈಲಟ್ ಅವರ ಸಂದೇಶ ಎಂದು ಕ್ರೂಮೆಂಬರ್ಸ್ ಅನೌನ್ಸ್ ಮಾಡುತ್ತಲ್ಲೇ ಇದ್ದರು. ಮತ್ತೊಂದು ಕಡೆ ಪೈಲಟ್ ಜಾಣ್ಮೆಯಿಂದ ಇಂಧನ ಖಾಲಿ ಮಾಡುತ್ತಿದ್ದರು.
ಇಂಧನ ಖಾಲಿ ಮಾಡಲು ಕಾರಣವೇನು: ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಹಾಗೂ ಅನಾಹುತದ ಎಚ್ಚರಿಕೆ ಕಂಡು ಬಂದರೆ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗುತ್ತದೆ. ಈ ರೀತಿ ತುರ್ತು ಲ್ಯಾಂಡಿಂಗ್ ಮಾಡುವುದಕ್ಕೂ ಮುಂಚೆ ಪೈಲಟ್ ವಿಮಾನದಲ್ಲಿ ಇರುವ ಇಂಧನವನ್ನು ಖಾಲಿ ಮಾಡುತ್ತಾರೆ. ಭೂಮಿಗೆ ಇಳಿಯಲು ಅವಶ್ಯವಿರುವಷ್ಟು ಮಾತ್ರ ಇಂಧನವನ್ನು ಉಳಿಸಿಕೊಂಡು ಬಾಕಿ ಖಾಲಿ ಮಾಡಲಾಗುತ್ತದೆ. ಆಕಾಶದಲ್ಲಿ ಹಾರಾಟ ಮಾಡುವ ಮೂಲಕ ಇಂಧನವನ್ನು ಖಾಲಿ ಮಾಡಲಾಗುತ್ತದೆ.
ಇದಕ್ಕೆ ಮುಖ್ಯ ಕಾರಣ ಒಂದೊಮ್ಮೆ ತುರ್ತು ಭೂಸ್ಪರ್ಶ ಮಾಡುವ ಸಂದರ್ಭದಲ್ಲಿ ಎದುರಾಗುವ ಅನಾಹುತವನ್ನು ತಪ್ಪಿಸುವುದು. ಇಂಧನ ಹೆಚ್ಚಾಗಿ ಇದ್ದರೆ ಭಾರೀ ಅವಘಡ ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ, ಈ ಕ್ರಮವನ್ನು ಅನುಸರಿಸಲಾಗುತ್ತದೆ. ಇದೇ ಕಾರಣಕ್ಕಾಗಿ ಏರ್ ಇಂಡಿಯಾ ವಿಮಾನ ಬರೋಬ್ಬರಿ 3 ತಾಸು ಆಕಾಶದಲ್ಲೇ ಹಾರಾಟ ನಡೆಸಿ ಸೇಫ್ ಲ್ಯಾಂಡ್ ಮಾಡಲಾಗಿದೆ.
ಕೇರಳದಲ್ಲೂ ಇದೇ ರೀತಿ ಸಂಭವಿಸಿತ್ತು: ಮೂರು ವರ್ಷಗಳ ಹಿಂದೆ ಕೇರಳದಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಅದು ಸಹ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕಂಪನಿಯ ವಿಮಾನ. ಆ ವಿಮಾನದಲ್ಲಿ 190 ಜನ ಪ್ರಯಾಣಿಕರು ಇದ್ದರು. ಏರ್‌ಇಂಡಿಯಾ ಎಕ್ಸ್‌ಪ್ರೆಸ್ ದುಬೈನಿಂದ ಕೇರಳದ ಕೋಯಿಕೋಡ್ ಬಂದು ಲ್ಯಾಂಡಿಂಗ್ ಮಾಡುವಾಗ ಈ ಅವಘಡ ಸಂಭವಿಸಿತ್ತು. 2021ರಲ್ಲಿ ಈ ದುರಂತ ಸಂಭವಿಸಿತ್ತು. ಆ ವಿಮಾನದಲ್ಲಿ ಒಟ್ಟು 190 ಜನ ಪ್ರಯಾಣಿಕರು ಇದ್ದರು.
ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೈಲೆಟ್ ಹಲವು ನಿಮಿಷಗಳ ಕಾಲ ವಿಮಾನವನ್ನು ಲ್ಯಾಂಡ್ ಮಾಡದೆ ಆಕಾಶದಲ್ಲೇ ಹಾರಾಟ ನಡೆಸಿದ್ದರು. ಆದರೆ, ನೂರಾರು ಜನ ಜೀವ ಉಳಿಸಿದ್ದ ಪೈಲೆಟ್ ಕೊನೆಗೆ ಉಳಿಯಲಿಲ್ಲ. ಈ ದುರಂತದಲ್ಲಿ ಹುತಾತ್ಮರಾದರು. ಕೇರಳದ ಕೋಯಿಕೋಡ್ ವಿಮಾನ ದುರಂತದಲ್ಲಿ ಪೈಲೆಟ್ ಸೇರಿದಂತೆ 21 ಜನ ಮೃತಪಟ್ಟಿದ್ದರು.
ಈಗ ಏರ್ ಇಂಡಿಯಾ ಪ್ಲೈಟ್ ಸಮಸ್ಯೆಗೆ ಕಾರಣವೇನು
ಶುಕ್ರವಾರ ಏರ್ ಇಂಡಿಯಾದ ವಿಮಾನ IX613 ಶುಕ್ರವಾರ ಸಂಜೆ ನಿಖರವಾಗಿ 5:45ಕ್ಕೆ 141 ಜನ ಪ್ರಯಾಣಿಕರನ್ನು ಹೊತ್ತು ಪಯಣ ಪ್ರಾರಂಭಿಸಿತ್ತು. ತಮಿಳುನಾಡಿನ ತಿರುಚ್ಚಿ ವಿಮಾನ ನಿಲ್ದಾಣದಿಂದ ತನ್ನ ಟೇಕಾಫ್ ಪ್ರಾರಂಭವಾಗಿತ್ತು. ಆದರೆ, ವಿಮಾನ ಹಾರಾಟ ಪ್ರಾರಂಭವಾದ ನಂತರ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದು ತಿಳಿದು ಬಂದಿದೆ.
ತಾಂತ್ರಿಕ ದೋಷದಿಂದ ವಿಮಾನದ ಸಿಬ್ಬಂದಿ ತುರ್ತು ಎಮರ್ಜನ್ಸಿ ಘೋಷಿಸಲಾಯಿತು. ಆದರೆ, ಈ ತಾಂತ್ರಿಕ ದೋಷಕ್ಕೆ ನಿಖರ ಕಾರಣ ತನಿಖೆಯಿಂದಷ್ಟೇ ಬಹಿರಂಗವಾಗಬೇಕಿದೆ. ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಬರೋಬ್ಬರಿ ಮೂರು ಗಂಟೆಗೂ ಹೆಚ್ಚು ಕಾಲ ವಿಮಾನ ಆಕಾಶದಲ್ಲೇ ಹಾರಾಟ ನಡೆಸಿರುವುದು ವರದಿಯಾಗಿದೆ.












Click it and Unblock the Notifications