ಲಕ್ನೋ–ಆಗ್ರಾ ಎಕ್ಸ್‌ಪ್ರೆಸ್‌ ಹೈವೇಗೆ ಇಳಿದ ಯುದ್ಧ ವಿಮಾನಗಳು

Posted By:
Subscribe to Oneindia Kannada

ಲಕ್ನೋ, ಅಕ್ಟೋಬರ್ 24: ಕಾರ್ಯಾಚರಣೆಯ ತಾಲೀಮಿಗಾಗಿ ಭಾರತೀಯ ವಾಯುಪಡೆಗೆ ಸೇರಿದ 20 ಯುದ್ಧ ವಿಮಾನಗಳು ಮಂಗಳವಾರ ಲಲಕ್ನೋ-ಆಗ್ರಾ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಇಳಿದವು.

ಸೇನಾ ತುರ್ತು ಸಂದರ್ಭಗಳಲ್ಲಿ ಸೇನಾಪಡೆಯ ರನ್ ವೇ ಗಳಿಗಾಗಿ ಕಾಯದೇ ರಾಷ್ಟ್ರೀಯ ಹೆದ್ದಾರಿಗಳಲ್ಲೇ ಯುದ್ಧ ವಿಮಾನಗಳನ್ನು ಇಳಿಸುವ ಮತ್ತು ಟೇಕ್ ಆಫ್ ಮಾಡುವ ಸಂಬಂಧ ಈ ಹಿಂದೆ ಸೇನಾಧಿಕಾರಿಗಳು ಯೋಜನೆ ರೂಪಿಸಿದ್ದರು. ಅದರಂತೆ ಸುಖೋಯ್, ಎಎನ್ 32 ಯುದ್ಧ ವಿಮಾನಗಳು ಸೇರಿದಂತೆ 20 ವಿಮಾನಗಳನ್ನು ಉನ್ನೊ ಜಿಲ್ಲೆ ಹೆದ್ದಾರಿಯಲ್ಲಿ ಯಶಸ್ವಿಯಾಗಿ ಇಳಿಸಲಾಯಿತು.

The Indian Air Force began drill to touchdown 20 aircraft on the Lucknow-Agra Expressway

ಭವಿಷ್ಯದಲ್ಲಿ ತುರ್ತು ಸಂದರ್ಭಗಳಲ್ಲಿ ವಿಮಾನಗಳನ್ನು ಹೆದ್ದಾರಿಗಳ ಮೇಲೆ ಇಳಿಸುವುದಕ್ಕೆ ಈ ಪ್ರಯೋಗ ಸಹಕಾರಿಯಾಗಲಿದೆ. ಕೆಲ ನಿಮಿಷಗಳ ಕಾಲ ರಸ್ತೆಯ ಮೇಲಿಂದ 15 ರಿಂದ 20 ಮೀಟರ್‌ ಎತ್ತರದಲ್ಲಿ ಹಾರಾಟ ನಡೆಸಿದ ವಿಮಾನಗಳು ನಂತರ ಯಶಸ್ವಿಯಾಗಿ ರಸ್ತೆಯ ಮೇಲೆ ಇಳಿದವು. ಇದಕ್ಕಾಗಿ ಕೆಲವು ಗಂಟೆಗಳ ಕಾಲ ಹೆದ್ದಾರಿಯನ್ನು ಬಂದ್‌ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Indian Air Force on Tuesday began its drill to touchdown 20 aircraft on the Lucknow-Agra Expressway.This was the first time that any transport aircraft landed and then took off from an expressway.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ