ದಿ ಕ್ಯೂರಿಯಸ್ ಕೇಸ್ ಆಫ್ 'ಐಸಿಸ್' ಶಮಿ ವಿಟ್ನೆಸ್!
ಬೆಂಗಳೂರು, ಡಿಸೆಂಬರ್, 15: ಶಮಿ ವಿಟ್ನೆಸ್ ಟ್ವಿಟ್ಟರ್ ಖಾತೆ ಮೂಲಕ ಉಗ್ರರಿಗೆ ನೆರವು ನೀಡುತ್ತ, ಯುವಕರನ್ನು ತಪ್ಪು ದಾರಿಗೆ ಎಳೆಯುತ್ತಿದ್ದ ಮೆಹದಿ ಬಿಸ್ವಾಸ್ ನನ್ನು ಬಂಧಿಸಿ ಒಂದು ವರ್ಷವೇ ಕಳೆದಿದೆ. ಆದರೆ ತನಿಖೆ ಮಾತ್ರ ಇನ್ನು ಸರಿಯಾದ ರೀತಿಯಲ್ಲಿ ಆರಂಭವಾಗದಿರುವುದು ದುರ್ದೈವ.
ಪ್ರಕರಣಕ್ಕೆ ಸಂಬಂಧಿಸಿ ಸ್ಪೆಶಲ್ ಪ್ರಾಸಿಕ್ಯೂಟರ್ ಒಬ್ಬರ ನೇಮಕ ಮಾಡಿಕೊಳ್ಳಬೇಕು ಎಂಬ ಸಂಗತಿಯೂ ನನೆಗುದಿಗೆ ಬಿದ್ದಿದೆ. ಮೆಹದಿ ಕಳಿಸಿದ್ದ ಇ ಮೇಲ್ ಗೆ ಸಂಬಂಧಿಸಿದ ತನಿಖೆಗಳು ಅರ್ಧದಲ್ಲೇ ದಾರಿ ತಪ್ಪುತ್ತಿವೆ.[ಮೆಹದಿ ವಿರುದ್ಧ 36,986 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ]

ಒನ್ ಇಂಡಿಯಾ ಈ ಹಿಂದೆಯೇ ಶಮಿವಿಟ್ನೆಸ್ ಪ್ರಕರಣ ದಾರಿ ತಪ್ಪುತ್ತಿರುವ ಬಗ್ಗೆ ವರದಿ ಮಾಡಿತ್ತು. ಇ ಮೆಲ್ ಗೆ ಸಂಬಂಧಿಸಿದ ಮಾಹಿತಿ ನೀಡಲು ಗೂಗಲ್ ಬಳಿ ಕೇಳಿಕೊಂಡಿದ್ದರೂ ನಂತರ ಪೊಲೀಸರು ಅದನ್ನು ಮರೆತಿದ್ದರು,
ಪೊಲೀಸರ ವಿಶ್ವಾಸವೇನು?
ಈ ಪ್ರಕರಣಕ್ಕೆ ಅನೇಕ ಡಿಜಿಟಲ್ ಸಾಕ್ಷಿಗಳು ಅಗತ್ಯವಾಗಿದೆ. ಅವುಗಳನ್ನು ಪೂರೈಕೆ ಮಾಡುವುದು ಸುಲಭದ ಕೆಲಸವಲ್ಲ. ಸರಿಯಾದ ಸಾಕ್ಷಾಧಾರಗಳು ಇಲ್ಲದೇ ಅದೆಷ್ಟೋ ಪ್ರಕರಣಗಳು ಬಿದ್ದು ಹೋದ ದಾಖಲೆಗಳು ಇವೆ.[ಬೆಂಗಳೂರು ಪೊಲೀಸರ ಕೈಗೆ ಮೆಹದಿ ಸಿಕ್ಕಿಬಿದ್ದಿದ್ದು ಹೇಗೆ?]
ಬಿಸ್ವಾಸ್ ಪ್ರಕರಣದಲ್ಲಿ ಪೊಲೀಸರು ಕಾರ್ಯಕ್ಷಮತೆ ಮೆರೆದಿದ್ದರು. ಮೆಹದಿ ವಿರುದ್ಧ 36,986 ಪುಟಗಳ ಚಾರ್ಜ್ ಶೀಟ್ ನ್ನು ಪೊಲೀಸರು ಬೆಂಗಳೂರಿನ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದರು. ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆಗೂ ಸಹ ಸಿದ್ಧತೆ ಮಾಡಿಕೊಂಡಿದ್ದಾರೆ.
ಇಂಥ ಪ್ರಕರಣಗಳಲ್ಲಿ ಪ್ರಾಸಿಕ್ಯೂಶನ್ ವಾದ ನಿಲ್ಲುವುದು ತುಂಬಾ ಕಷ್ಟ. ಐಎಸ್ ಐಎಸ್ ಸಂಬಂಧಿಸಿದ ಇ ಮೇಲ್ ಖಾತೆಯ ದಾಖಲೆಗಳನ್ನು ಕಲೆಹಾಕುವುದು ತುಂಬಾ ಕ್ಲಿಷ್ಟಕರ ಸಂಗತಿ.
ನಾವು ನಮ್ಮ ಕೈಯಲ್ಲಿ ಸಾಧ್ಯವಿರುವ ಎಲ್ಲ ಕೆಲಸಗಳನ್ನು ಮಾಡಿ ಮುಗಿಸಿದ್ದೇವೆ. ಇನ್ನೇನಿದ್ದರೂ ಕಾನೂನು ಇಲಾಖೆ ಮುಂದಿನ ಕ್ರಮ ತೆಗೆದುಕೊಳ್ಳಬೇಕಿದೆ ಎಂಬುದು ಪೊಲೀಸ್ ಇಲಾಖೆಯ ಅಭಿಪ್ರಾಯ.
ವಿಶೇಷ ಪ್ರಾಸಿಕ್ಯೂಟರ್ ಅವರನ್ನು ಸದ್ಯವೇ ನೇಮಕ ಮಾಡಲಾಗುವುದು ಎಂದು ಕಾನೂನು ಇಲಾಖೆ ಹೇಳುತ್ತಿದೆ. ಒಟ್ಟಿನಲ್ಲಿ ಪ್ರಕರಣ ನಡೆದು ಒಂದು ವರ್ಷವಾದರೂ ತನಿಖೆ ಮಾತ್ರ ಇನ್ನು ಸರಿಯಾದ ಆರಂಭ ಪಡೆದುಕೊಂಡಿಲ್ಲ.












Click it and Unblock the Notifications