ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಹಾರ್ ಜೈಲಿನಲ್ಲಿ ಛೋಟಾ ರಾಜನ್ ದಿನಚರಿ, ಭದ್ರತೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಡಿಸೆಂಬರ್ 29 : ಇಂಡೋನೇಷಿಯಾದ ಬಾಲಿ ದ್ವೀಪದಲ್ಲಿ ಬಂಧಿತನಾಗಿದ್ದ ಭೂಗತ ಪಾತಕಿ ಛೋಟಾ ರಾಜನ್‌ನನ್ನು ಭಾರತಕ್ಕೆ ಕರೆತರಲಾಗಿದೆ. ಸದ್ಯ, ಆತ ಬಿಗಿಭದ್ರತೆಯ ತಿಹಾರ್ ಜೈಲಿನಲ್ಲಿದ್ದು, 10 ಶಸ್ತ್ರಧಾರಿ ಯೋಧರು ಆತನ ರಕ್ಷಣೆಗೆ ನಿಂತಿದ್ದಾರೆ.

ತಿಹಾರ್ ಜೈಲಿನಲ್ಲಿನಲ್ಲಿರುವ ರಾಜನ್‌ಗೆ ದಾವುದ್ ಇಬ್ರಾಹಿಂ ಬಲಗೈ ಬಂಟ ಛೋಟಾ ಶಕೀಲ್‌ನಿಂದ ಜೀವ ಬೆದರಿಕೆ ಇದೆ. ಛೋಟಾ ರಾಜನ್ ಭದ್ರತೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಅಧಿಕಾರಿಗಳು ದಿನಕ್ಕೆ ಎರಡು ಬಾರಿ ಸಭೆ ನಡೆಸಿ, ರಾಜನ್‌ ಭದ್ರತೆಯ ಬಗ್ಗೆ ಚರ್ಚೆ ನಡೆಸುತ್ತಾರೆ. [ಭಾರತಕ್ಕೆ ಬಂದ ಭೂಗತ ಪಾತಕಿ ಛೋಟಾ ರಾಜನ್]

chhota rajan

ಭದ್ರತೆಯ ಕಾರಣದಿಂದಾಗಿಯೇ ರಾಜನ್‌ನನ್ನು ಮುಂಬೈಗೆ ಸ್ಥಳಾಂತರ ಮಾಡದೇ ತಿಹಾರ್ ಜೈಲಿನಲ್ಲಿ ಇಡಲಾಗಿದೆ. ರಾಜನ್ ಕೊಲ್ಲುವ ಬಗ್ಗೆ ಹಲವು ಬಾರಿ ಶಕೀಲ್ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿದ್ದಾನೆ. ಆದ್ದರಿಂದ, ರಾಜನ್ ಭದ್ರತೆಯ ಬಗ್ಗೆ ಹೆಚ್ಚಿನ ನಿಗಾ ಇಡಲಾಗಿದೆ. [ಮುಂಬೈ ಪೊಲೀಸರನ್ನು ನಂಬಲ್ಲ, ದೆಹಲಿಗೆ ಕಳಿಸಿ: ಛೋಟಾರಾಜನ್]

ಹೇಗಿದೆ ರಾಜನ್ ಭದ್ರತೆ? : ಭೂಗತ ಪಾತಕಿಗಳು ಜೈಲಿನಲ್ಲಿ ತಮ್ಮ ವೈರಿಗಳನ್ನು ಹತ್ಯೆ ಮಾಡಿಸುವುದು ಹೊಸ ವಿಷಯವಲ್ಲ. ಆದ್ದರಿಂದಲೇ ಜೈಲಿನಲ್ಲಿ ರಾಜನ್‌ಗೆ ಬಿಗಿ ಭದ್ರತೆ ಒದಗಿಸಲಾಗಿದೆ. 10 ಶಸ್ತ್ರಧಾರಿ ಯೋಧರು ರಾಜನ್ ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. [ಸಂದರ್ಶನ : ಛೋಟಾ ರಾಜನ್ ಬಂಧನ ಕೇವಲ ಆಕಸ್ಮಿಕ]

ತಿಹಾರ್‌ ಜೈಲಿನಲ್ಲಿ ರಾಜನ್‌ಗೆ ನೀಡುವ ಆಹಾರವನ್ನು ಮೊದಲು ಪರಿಶೀಲಿಸಿ ನಂತರ ನೀಡಲಾಗುತ್ತಿದೆ. ಅನಾರೋಗ್ಯದಿಂದ ಬಳಲುತ್ತಿರುವ ರಾಜನ್‌ಗೆ ಜೈಲಿನಲ್ಲಿ ಹಲವು ವ್ಯಾಯಾಯಗಳನ್ನು ಮಾಡುವಂತೆಯೂ ಸಲಹೆ ನೀಡಲಾಗಿದೆ. ರಾಜನ್‌ ಪ್ರತಿದಿನ ಬೆಳಗ್ಗೆ ವಾಕಿಂಗ್ ಮತ್ತು ಯೋಗ ಮಾಡುವಾಗ ಭದ್ರತೆ ನೀಡಲಾಗುತ್ತಿದೆ.

ರಾಜನ್‌ ಭೇಟಿ ಮಾಡಲು ಬರುವವರನ್ನು ತಪಾಸಣೆ ಮಾಡಲಾಗುತ್ತಿದೆ. ರಾಜನ್ ಜೊತೆ ಮಾತನಾಡುವಾಗ ನಿಗದಿತ ಅಂತರ ಕಾಯ್ದುಕೊಳ್ಳುವಂತೆ ಅವರಿಗೆ ಸೂಚನೆ ನೀಡಲಾಗುತ್ತದೆ. ರಾಜನ್‌ ಜೊತೆ ಸಂದರ್ಶಕರು ಮಾತನಾಡುವಾಗ ಒಬ್ಬರು ಭದ್ರತಾ ಸಿಬ್ಬಂದಿ ಅಲ್ಲಿರುತ್ತಾರೆ.

ಬಾಲಿ ದ್ವೀಪದಲ್ಲಿ 2015ರ ಅಕ್ಟೋಬರ್ 26ರಂದು ರಾಜೇಂದ್ರ ಸದಾಶಿವ್ ನಿಕ್ಲಾಜೆ ಅಲಿಯಾಸ್ ಛೋಟಾ ರಾಜನ್‌ನನ್ನು ಇಂಡೋನೇಷಿಯಾದ ಪೊಲೀಸರು ಬಂಧಿಸಿದ್ದರು. ಬಾಲಿ ದ್ವೀಪಕ್ಕೆ ತೆರಳಿದ್ದ ಸಿಬಿಐ ಅಧಿಕಾರಿಗಳು ಮತ್ತು ಮುಂಬೈ ಪೊಲೀಸರ ತಂಡ ನವೆಂಬರ್ 6ರಂದು ರಾಜನ್‌ನನ್ನು ದೆಹಲಿಗೆ ಕರೆತಂದಿತ್ತು.

English summary
Guarding Chhota Rajan at the Tihar jail is no easy task. Lodged in a 5 by 10 feet prison cell, the jail authorities at Tihar are having a nightmare as they receive a communication almost every two days citing a major security threat to Rajan. He has to be guarded all the time says a Tihar jail official.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X