GST ವಿರೋಧಿಸಿ ಸೂರತ್ ಬಟ್ಟೆ ವ್ಯಾಪಾರಿಗಳಿಂದ ಭಾರೀ ಪ್ರತಿಭಟನೆ

ಸೂರತ್‌, ಜುಲೈ 3: ಜಿಎಸ್ಟಿ ಜಾರಿ ವಿರೋಧಿಸಿ ನಡೆಯುತ್ತಿರುವ ಬಟ್ಟೆ ವ್ಯಾಪಾರಿಗಳ ಪ್ರತಿಭಟನೆಗೆ ಸೂರತ್ ಹೊಸದಾಗಿ ಸೇರ್ಪಡೆಯಾಗಿದೆ.

ಜಿಎಸ್ಟಿ ಜಾರಿ ವಿರೋಧಿಸಿ ನಮ್ಮ ಹುಬ್ಬಳ್ಳಿಯಲ್ಲೂ ಶುಕ್ರವಾರ ಬಟ್ಟೆ ವರ್ತಕರು ಪ್ರತಿಭಟನೆ ನಡೆಸಿದ್ದರು. ಇದೀಗ ಬಟ್ಟೆಗಳಿಗೆ ಜನಪ್ರಿಯವಾಗಿರುವ ಸೂರತ್ ನಗರದ ವರ್ತಕರು ಭಾರೀ ಪ್ರತಿಭಟನೆ ನಡೆಸಿ ಸುದ್ದಿಯಾಗಿದ್ದಾರೆ.

Textile traders held protest against GST in Surat

ಪ್ರಧಾನಿ ತವರು ರಾಜ್ಯ ಗುಜರಾತಿನ ಸೂರತ್ ಬಟ್ಟೆ ವ್ಯಾಪಾರಿಗಳು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ವಿರೋಧಿಸಿ ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಯದ್ವಾ ತದ್ವಾ ಲಾಠಿ ಬೀಸಿದ್ದಾರೆ. ಪೊಲೀಸರ ಲಾಠಿಚಾರ್ಚ್ ದೃಶ್ಯಾವಳಿಗಳು ಚರ್ಚೆಗೆ ಗ್ರಾಸವಾಗಿವೆ.

ಬಟ್ಟೆಯ ಮೇಲೆ ಜಿಎಸ್‌ಟಿಯಲ್ಲಿ ಶೇ. 12 ತೆರಿಗೆ ವಿಧಿಸಿರುವುದನ್ನು ಬಟ್ಟೆ ವ್ಯಾಪಾರಿಗಳು ವಿರೋಧಿಸಿದ್ದಾರೆ.

ಇದರಿಂದ ಗ್ರಾಹಕರಿಗೆ ತೀವ್ರ ತೊಂದರೆಯಾಗಲಿದ್ದು, ಜವಳಿ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಪ್ರತಿಭಟನಾ ನಿರತರು ಆತಂಕ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+