Tesla Car Showroom: ಭಾರತದಲ್ಲಿ ಮೊದಲ ಟೆಸ್ಲಾ ಶೋರೂಂ; ಬಾಡಿಗೆ ಎಷ್ಟು ಗೊತ್ತಾ?

ಜಗತ್ತಿನ ಅತಿ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿಯ ಕಾರುಗಳು ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿವೆ. ಹಲವು ವರ್ಷಗಳಿಂದ ಟೆಸ್ಲಾ ಕಾರುಗಳನ್ನು ಭಾರತಕ್ಕೆ ತರಲು ಪ್ರಯತ್ನ ನಡೆಸಲಾಗಿತ್ತು, ಇತ್ತಿಚೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿ ಸಂದರ್ಭದಲ್ಲಿ ಎಲಾನ್ ಮಸ್ಕ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಟೆಸ್ಲಾ ಇದೀಗ ಎರಡು ಮಹಾನಗರಗಳಲ್ಲಿ ಶೋರೂಂ ಸ್ಥಾಪಿಸಲು ಮುಂದಾಗಿದೆ. ಮೊದಲನೆಯದಾಗಿ ಮುಂಬೈನಲ್ಲಿ ಶೋರೂಂಗಾಗಿ ಜಾಗ ಗುರುತಿಸಲಾಗಿದೆ ಎಂದು ಎಚ್‌ಟಿ.ಕಾಂ ವರದಿ ಮಾಡಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಮೇಕರ್ ಮ್ಯಾಕ್ಸಿಟಿಯಲ್ಲಿ ಸ್ಥಳ ಗುರುತಿಸಲಾಗಿದ್ದು ಇದಕ್ಕೆ ತಿಂಗಳಿಗೆ 35 ಲಕ್ಷ ರೂಪಾಯಿ ಬಾಡಿಗೆ ನೀಡಲಿದೆ ಎಂದು ವರದಿ ತಿಳಿಸಿದೆ.

Tesla india first showroom maker maxity bkc mumbai

3000 ಚದರ ಅಡಿ ವಿಸ್ತೀರ್ಣದಲ್ಲಿ ಕಾರ್ ಶೋ ರೂಂ ನಿರ್ಮಾಣವಾಗಲಿದೆ. ಇದು ಮೇಕರ್ ಮ್ಯಾಕ್ಸಿಟಿಯಲ್ಲಿರುವ ವಾಣಿಜ್ಯ ಕಟ್ಟಡದ ನೆಲ ಮಹಡಿಯಲ್ಲಿದೆ. ಇದಕ್ಕಾಗಿ ಟೆಸ್ಲಾ ತಿಂಗಳಿಗೆ 35 ಲಕ್ಷ ರೂಪಾಯಿ ಬಾಡಿಗೆ ಪಾವತಿ ಮಾಡಲಿದೆ ಎಂದು ವರದಿಯಲ್ಲಿ ತಿಳಿಸಿದೆ. ಬಾಂದ್ರಾ ಕುರ್ಲಾ ಸೆಂಟರ್ ದೇಶದಲ್ಲೇ ಅತ್ಯಂತ ದುಬಾರಿ ವಾಣಿಜ್ಯ ರಿಯಲ್ ಎಸ್ಟೇಟ್ ಕೇಂದ್ರ ಎನ್ನುವ ಖ್ಯಾತಿ ಪಡೆದಿದೆ.

ಆಟೋ ಉದ್ಯಮದಲ್ಲಿ ಈವರೆಗೆ ಶೋರೂಂಗಾಗಿ ಇಷ್ಟೊಂದು ಪಾವತಿ ಮಾಡುತ್ತಿರುವುದು ಇದೇ ಮೊದಲು ಎಂದು ಮೂಲಗಳು ತಿಳಿಸಿರುವುದಾಗಿ ಹಿಂದೂಸ್ತಾನ ಟೈಮ್ಸ್ ವರದಿ ಮಾಡಿದೆ. ಈ ಬಗ್ಗೆ ಕಂಪನಿಯಾಗಲಿ ಅಥವಾ ಮೇಕರ್ ಮ್ಯಾಕ್ಸಿಟಿಯಾಗಲಿ ಅಧಿಕೃತವಾಗಿ ಮಾಹಿತಿ ನೀಡಿಲ್ಲ, ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ.

ದೆಹಲಿಯಲ್ಲೂ ತಲೆ ಎತ್ತಲಿದೆ ಶೋರೂಂ

ಮುಂಬೈ ಹೊರತುಪಡಿಸಿ ದೆಹಲಿಯಲ್ಲಿ ಕೂಡ ಟೆಸ್ಲಾ ಶೋರೂಂ ಆರಂಭವಾಗಲಿದೆ. ಇದಕ್ಕಾಗಿ 4000 ಚದರ ಅಡಿ ಸ್ಥಳವನ್ನು ಗುರುತಿಸಿದ್ದು ತಿಂಗಳಿಗೆ 25 ಲಕ್ಷ ರೂಪಾಯಿ ಬಾಡಿಗೆ ಪಾವತಿಗೆ ಒಪ್ಪಂದವಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (IGI) ಬಳಿಯ ಬ್ರೂಕ್‌ಫೀಲ್ಡ್ ಬಳಿ ಇರುವ ಏರೋಸಿಟಿ ಪ್ರದೇಶದಲ್ಲಿ ಶೋರೂಮ್ ನಿರ್ಮಾಣಕ್ಕೆ ಟೆಸ್ಲಾ ಜಾಗವನ್ನು ಅಂತಿಮಗೊಳಿಸಿದೆ.

ಅಮೆರಿಕ ಕಾರು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿರುವ ಟೆಸ್ಲಾ ಇದೀಗ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಎಲೆಕ್ಟ್ರಿಕ್ ಕಾರುಗಳ ಆಮದು ಸುಂಕದ ಬಗ್ಗೆ ಅಮೆರಿಕ ತಕರಾರು ಮಾಡಿದ ಬಳಿಕ ಸುಂಕವನ್ನು 110% ರಿಂದ 15%ಕ್ಕೆ ಇಳಿಕೆ ಮಾಡುವ ಸಾಧ್ಯತೆ ಇದ್ದು ಕಾರಿನ ಬೆಲೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+