• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾದಕ ವಸ್ತು ಸಾಗಣೆ ನೆಪದಲ್ಲಿ ಒಳನುಸುಳುವ ಉಗ್ರರು

By ವಿಕ್ಕಿ ನಂಜಪ್ಪ
|

ನವದೆಹಲಿ, ಜ. 5: ಸ್ಫೋಟಕಗಳಿಂದ ತುಂಬಿದ್ದ ಪಾಕಿಸ್ತಾನದ ದೋಣಿ ಅರಬ್ಬಿ ಸಮುದ್ರದಲ್ಲಿ ಬೆಂಕಿಗೆ ಆಹುತಿಯಾಗಿರುವ ಘಟನೆಗೆ ಕಾರಣವೇನು ಎಂಬುದರ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಸ್ಫೋಟದ ಸಂದರ್ಭದ ವಿಡಿಯೋವನ್ನು ಸೂಕ್ತವಾಗಿ ಪರಿಶೀಲಿಸಿರುವ ರಕ್ಷಣಾ ಇಲಾಖೆಯ ಪ್ರಯೋಗಾಲಯದ ವರದಿ ನಿಖರ ಮಾಹಿತಿಯನ್ನು ನೀಡಬಲ್ಲದು ಎಂದು ಹೇಳಲಾಗಿದೆ.

ಬದಲಾದ ಕರಾವಳಿ ಕಾವಲು ಪಡೆ ಅಭಿಪ್ರಾಯ

ದೇಶ ಆಂತರಿಕ ಭದ್ರತೆಯಲ್ಲಿ ಲೋಪ ಎದುರಿಸುತ್ತಿರುವಾಗ ವೈರಿಗಳ ವಿರುದ್ಧ ಮೃದು ಧೋರಣೆ ಸರಿಯಲ್ಲ. ಆದರೆ ಈ ಪ್ರಕರಣದಲ್ಲಿ ಉಗ್ರಗಾಮಿಗಳು ಅದೃಷ್ಟವಂತರೆಂದೇ ಹೇಳಬಹುದು. 26/11 ಮಾದರಿ ದಾಳಿ ಮಾಡಲು ಬಂದಿದ್ದವರು ಕೈ ಗೆ ಸಿಕ್ಕಿ ಬೀಳುವುದರಿಂದ ಬಚಾವಾದರು ಎಂದು ಕರಾವಳಿ ಕಾವಲು ಪಡೆ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.[ಬೋಟ್ ಸ್ಫೋಟ ಉಗ್ರರದ್ದೇ ಕೈವಾಡ: ಪರಿಕ್ಕರ್]

ಜಿಹಾದಿ ಹೆಸರಿನಲ್ಲಿ ಪಾಕಿಸ್ತಾನದಿಂದ ಭಾರತದೆಡೆ ಧಾವಿಸುವ ಪ್ರತಿಯೊಂದು ಬೋಟ್ ಉಗ್ರರನ್ನು ಹೊತ್ತುಕೊಂಡೆ ಬರುತ್ತಿದೆ. ಆದರೆ ಇದನ್ನು ಗುರುತಿಸುವುದು ಅಷ್ಟೇ ಕಷ್ಟಸಾಧ್ಯವಾದ ಮಾತು ಎಂದು ತಿಳಿಸುತ್ತಾರೆ.

ಸಮುದ್ರ ಕಾವಲು ಸುಲಭದ ಕೆಲಸವಲ್ಲ

ಸಮುದ್ರದ ಪ್ರತಿಯೊಂದು ಮೂಲೆಯ ಮೇಲೆ ಸದಾ ಕಣ್ಣಿಡುವುದು ಸುಲಭದ ಕೆಲಸವಲ್ಲ. ಒಂದು ವೇಳೆ ಬೋಟ್ ನಲ್ಲಿದ್ದ ನಾಲ್ಕು ಜನ ಕರಾವಳಿ ಪಡೆ ಕೈಗೆ ಸಿಕ್ಕಿಹಾಕಿಕೊಂಡಿದ್ದರೂ ವಿಚಾರಣೆಯ ನಂತರವಷ್ಟೇ ಅವರ ನಿಜ ಬಣ್ಣ ಗೊತ್ತಾಗುತ್ತಿತ್ತು.

ದೊಡ್ಡ ಸಮುದ್ರದಲ್ಲಿ ಚಿಕ್ಕ ದೋಣಿಯೊಂದನ್ನು ಬೆನ್ನಟ್ಟಿ ಹಿಡಿಯುವುದು ಸುಲಭವಲ್ಲ. ಕೇವಲ ಎರಡು ಜನ ಕಾವಲು ಪಡೆ ಸೈನಿಕರು ನಾಲ್ಕಾರು ಜನ ಭಯೋತ್ಪಾದಕರನ್ನು ಬೆನ್ನು ಹತ್ತಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಕಾವಲು ಪಡೆ ಯೊಧರು ಮಾಡಿರುವ ಕಾರ್ಯವನ್ನು ಎಂದಿಗೂ ಸ್ಮರಿಸಿಕೊಳ್ಳಬೇಕಾಗುತ್ತದೆ ಎಂದು ಕಾವಲು ಪಡೆಯ ಸಂಶೋಧನಾ ವಿಭಾಗದ ಮಾಜಿ ಅಧಿಕಾರಿ ವಿ. ಬಾಲಚಂದರನ್ ಹೇಳುತ್ತಾರೆ.[ಭಾರತದೊಳು ನುಗ್ಗುವ ಉಗ್ರರ ಯತ್ನ ವಿಫಲ, ಬೋಟ್ ಸ್ಫೋಟ]

ಜೀವ ಪಣಕ್ಕಿಡುವ ಕೆಲಸ

ಕರಾವಳಿ ಕಾವಲು ಪಡೆಯ ಸೈನಿಕರದ್ದು ಜೀವ ಪಣಕ್ಕಿಡುವ ಕೆಲಸವೊಂದೇ ಅಲ್ಲದೇ ಜನರಿಂದ ಸಿಗುವ ಕ್ರತಜ್ಞತೆಯೂ ಅಷ್ಟಕಷ್ಟೇ. 26/11 ದಾಳಿ ವೇಳೆ ಜನ ಮತ್ತು ಮಾಧ್ಯಮಗಳಿಂದ ಇವರು ಟೀಕೆಗೆ ಒಳಗಾಗಿದ್ದು ಇದೆ.

ಮಾದಕ ವಸ್ತು ಕಳ್ಳ ಸಾಗಣೆ ಕೇವಲ ಒಂದು ದಂಧೆಯಲ್ಲ!

ಭಯೋತ್ಪಾದನೆಯೇ ಇರಲಿ ಮಾದಕ ವಸ್ತು ಕಳ್ಳ ಸಾಗಣೆಯೇ ಇರಲಿ ಎರಡೂ ದೇಶದ್ರೋಹದ ಚಟುವಟಿಕೆಗಳೇ. ಅಪರಾಧ ಪ್ರಕರಣಗಲ ಮೂಲ ಬೀಜ ಇರುವುದನ್ನು ಮೊದಲು ಪತ್ತೆ ಹಚ್ಚಿ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ.

ಮಾದಕ ವಸ್ತು ಸಾಗಣೆದಾರರು ಸಮುದ್ರದಲ್ಲಿ ಹೊಸ ಮಾರ್ಗ ಅವರು ಉಗ್ರಗಾಮಿಗಳಲ್ಲ ಎಂದು ಸುಮ್ಮನೆ ಕುಳಿತುಕೊಳ್ಳುವುದರಲ್ಲಿ ಯಾವ ಅರ್ಥವಿದೆ ಎಂಬ ಪ್ರಶ್ನೆಯೂ ನಾಗರಿಕರಲ್ಲಿ ಮೂಡುತ್ತದೆ.

1993ರ ಮುಂಬೈ ಸ್ಫೋಟಕ್ಕೆ ಸಾಮಗ್ರಿಗಳು ಮಾದಕ ವಸ್ತು ಸಾಗಣೆ ಮಾರ್ಗದಲ್ಲಿಯೇ ಬಂದಿತ್ತು ಎಂಬುದನ್ನು ಭಾರತೀಯರು ಮರೆಯುವಂತಿಲ್ಲ. ಒಟ್ಟಿನಲ್ಲಿ ದೇಶದ ಭದ್ರತೆ ದೃಷ್ಟಿಯಿಂದ ಮೊದಲು ಮಾದಕ ವಸ್ತು ಸಾಗಾಟದ ದಾರಿಗಳನ್ನು ಮೊದಲು ಬಂದ್ ಮಾಡಬೇಕಾಗಿದೆ.

ವಿಚಾರಣೆಯ ವ್ಯಂಗ್ಯ!

ನಾವು ಮೊದಲು ಉಗ್ರರನ್ನು ದಸ್ತಗಿರಿ ಮಾಡಿ ವಿಚಾರಣೆ ಮಾಡಲು ಬಯಸಿದ್ದೆವು. ಆದರೆ ಕಣ್ಣು ತಪ್ಪಿಸಿಕೊಂಡ ಅವರು ಬೋಟ್ ನ್ನೇ ಸ್ಫೋಟಿಸಿದರು. ಬೆನ್ನಟಿದ ನಾವು ಅವರ ಸಮೀಪಕ್ಕೆ ಹೋಗಿದ್ದರೆ ಪ್ರಾಣ ಕಳೆದುಕೊಳ್ಳಬೇಕಾಗಿತ್ತು ಎಂದು ಕರವಾಳಿ ಕಾವಲು ಪಡೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
While there are several theories doing the rounds regarding the boat of terror from Pakistan, there is no denying the fact that the coast guard has just done its duty. The video evidence is being analysed by the defence lab and the clear picture will emerge once those details are out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more