ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನಾ ಪಡೆಗಳ ಎದುರು ಹತರಾದ ಮೂವರು ಉಗ್ರರು

|
Google Oneindia Kannada News

ಶ್ರೀನಗರ, ನವೆಂಬರ್, 25: 2008ರ ನವೆಂಬರ್ 26 ರ ಉಗ್ರರ ಕರಾಳ ದಾಳಿ ನೆನಪು ಎದುರಾಗುತ್ತಿರುವ ಹೊತ್ತಿನಲ್ಲೇ ಭಾರತೀಯ ಸೇನಾ ತುಕಡಿಗಳ ಮೇಲೆ ಉಗ್ರರು ದಾಳಿ ಮಾಡಿದ್ದಾರೆ.

ಭಾರತದ ಒಬ್ಬ ವೀರ ಯೋಧ ಪ್ರಾಣ ತ್ಯಾಗ ಮಾಡಿದ್ದರೆ ಮೂವರು ಉಗ್ರರನ್ನು ಸೇನಾ ಪಡೆ ಹೊಡೆದುರುಳಿದೆ. ಜಮ್ಮು ಮತ್ತು ಕಾಶ್ಮೀರದ ತಂಗ್ಧಾರ್ ಸೇನಾ ಶಿಬಿರದ ಮೇಲೆ ಎಕೆ 47 ಮತ್ತು ರಾಕೆಟ್ ಲಾಂಚರ್ ಗಳನ್ನು ಹೊಂದಿದ್ದ ಮೂರಕ್ಕೂ ಹೆಚ್ಚು ಮಂದಿ ಉಗ್ರರು ಏಕಾಏಕಿ ದಾಳಿ ಮಾಡಿದ್ದಾರೆ.[26/11 ದಾಳಿ ಪಕ್ಕಕ್ಕಿಟ್ಟು ತಾಜ್‌ ನಲ್ಲಿ ಚಾ ಕುಡಿಯೋಣ ಬನ್ನಿ]

army

ಉಗ್ರರನ್ನು ಹಿಮ್ಮೆಟ್ಟಿಸಿರುವ ಸೇನೆ ಮೂವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಸೇನಾಧಿಕಾರಿಗಳು ಭೇಟಿ ನೀಡಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿದ್ದಾರೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸ್ಥಳೀಯ ನಾಗರಿಕರೊಬ್ಬರು ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿಗೆ ಸೇನೆಯ ಕೆಲ ವಾಹನಗಳು ಜಖಂಗೊಂಡಿದ್ದು, ಯೋಧರ ಕೊಠಡಿಗಳು ಹಾನಿಗೊಳಗಾಗಿವೆ.[ಆರಕ್ಷಕರಿಗೊಂದು ಶುಭಾಶಯ ಹೇಳಲು ನಮ್ಮೊಂದಿಗೆ ಬನ್ನಿ]

ತಂಗ್ಧಾರ್ ಸೆಕ್ಟರ್ ಕುಪ್ವಾರ ಜಿಲ್ಲೆಗೆ ಅತ್ಯಂತ ಸಮೀಪದಲ್ಲಿದ್ದು, ಭಾರತದ ಗಡಿಯೊಳಗೆ ನುಸುಳಲು ಇದು ಉತ್ತಮ ದಾರಿ ಎಂದು ಭಾವಿಸಿದ ಉಗ್ರರು ತಮ್ಮ ಕುತಂತ್ರ ತೋರಿಸಲು ಬಂದ ವೇಳೆ ಸೇನಾ ಪಡೆಗಳ ಕಣ್ಣಿಗೆ ಬಿದ್ದಿದ್ದಾರೆ ಎಂದು ಸೇನಾಧಿಕಾರಿ ಎಸ್​ಎಸ್​ಪಿ ಅಜಾಜ್ ಅಹಮ್ಮದ್ ತಿಳಿಸಿದ್ದಾರೆ.

English summary
Indian aemy Official sources said a group of three to five militants barged inside the camp in Tangdhar sector of Kupwara district, about 110 kms from region's summer capital Srinagar. An oil depot inside the camp has caught fire in the ensuing gunbattle, reports said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X