ಸಾಮಾಜಿಕ ಜಾಲತಾಣದಲ್ಲಿ ಹಫೀಸ್ ಸಯೀದ್ ಪಕ್ಷದಿಂದ ಅಬ್ಬರದ ಪ್ರಚಾರ

By: ವಿಕಾಸ್ ನಂಜಪ್ಪ
Subscribe to Oneindia Kannada

ಇಸ್ಲಮಾಬಾದ್, ಆಗಸ್ಟ್ 8: 26/11 ಮುಂಬೈ ದಾಳಿಯನ್ನು ಸೂತ್ರದಾರ ಜಮಾತ್ ಉದ್ ದಾವಾ (ಜೆಯುಡಿ) ದ ನಾಯಕ ಹಫೀಸ್ ಸಯೀದ್ ಇದೀಗ ಅಧಿಕೃತವಾಗಿ ರಾಜಕೀಯ ಪಕ್ಷವನ್ನು ಹುಟ್ಟುಹಾಕಿದ್ದಾನೆ. ಹೊಸ ಪಕ್ಷಕ್ಕೆ ಮಿಲ್ಲಿ ಮುಸ್ಲಿಂ ಲೀಗ್ ಪಾಕಿಸ್ತಾನ್ ಎಂದು ಹೆಸರಿಟ್ಟಿದ್ದಾನೆ.

ಜೆಯುಡಿ ಲಷ್ಕರ್ ಇ ತಯ್ಯಬಾದ ಹಣಕಾಸು ವಿಭಾಗವಾಗಿದ್ದು ಅಮೆರಿಕಾದ ಒತ್ತಡದಿಂದ ಹಫೀಸ್ ಸಯೀದ್ ಲಷ್ಕರ್ ಹೆಸರನ್ನು ಬದಲಾಯಿಸಬೇಕಾಗಿ ಬಂದಿತ್ತು. ಇದರಿಂದ ಅನಿವಾರ್ಯವಾಗಿ ಮಿಲ್ಲಿ ಮುಸ್ಲಿಂ ಲೀಗ್ ಆರಂಭಿಸಿರುವ ಹಫೀಸ್ ಸಯೀದ್ ಇದನ್ನು ರಾಜಕೀಯ ಪಕ್ಷವಾಗಿ ಬೆಳೆಸಲು ಮುಂದಾಗಿದ್ದಾನೆ.

Terrorist Hafiz Saeed launches political outfit in Pakistan

ಈಗಾಗಲೇ ಪಾಕಿಸ್ತಾನದ ಸಮಾಜಿಕ ಜಾಲತಾಣಗಳಲ್ಲಿ ಹಫೀಸ್ ಸಯೀದ್ ಪಕ್ಷದ ಪೋಸ್ಟರ್ ಗಳು ಹರಿದಾಡುತ್ತಿವೆ. "ಮಾನವರ ಸೇವೆಗೆ ನಮ್ಮ ರಾಜಕೀಯ" ಎಂಬ ಟ್ಯಾಗ್ ಲೈನ್ ಗಳು ಭರ್ಜರಿಯಾಗಿ ಕಾಣಿಸಿಕೊಳ್ಳುತ್ತಿದೆ.

Nawaz Sharif has resigned as prime minister of Pakistan | Oneindia kannada

ಪನಾಮ ಪೇಪರ್ಸ್ ಪ್ರಕರಣದಲ್ಲಿ ಪಾಕಿಸ್ತಾನ ಪ್ರಧಾನಿ ಹುದ್ದೆಯಿಂದ ನವಾಜ್ ಶರೀಫ್ ಕೆಳಗಿಳಿದ ಬೆನ್ನಲ್ಲೇ ಹಫೀಸ್ ಸಯೀದ್ ತಮ್ಮ ಪಕ್ಷಕ್ಕೆ ಚಾಲನೆ ನೀಡುತ್ತಿದ್ದಾನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Jamaat-ud-Dawa which had funded the Mumbai 26/11 attack has officially launched its political outfit Milli Muslim League Pakistan. The JuD which is the financial wing of the Lashkar-e-Tayiba decided to effect the name change took the call due to extreme pressure from the United States.
Please Wait while comments are loading...