3ನೇ ಮಹಾಯುದ್ಧ ಫಿಕ್ಸ್... ಪಾಕಿಸ್ತಾನ ಸರ್ವನಾಶ ಆಗುವುದು ಗ್ಯಾರಂಟಿ! India vs Pakistan
ಭಾರತ & ಪಾಕಿಸ್ತಾನ ನಡುವೆ ಯುದ್ಧ ಬೆಂಕಿ ಹೊತ್ತಿ ಉರಿಯುವಾಗಲೇ, ಪಾಪಿ ಪಾಕಿಸ್ತಾನದ ಬುಡ ನಲುಗಿ ಹೋಗುವಂತೆ ಭಾರತೀಯ ಸೇನೆ ಏಟು ಕೊಡುತ್ತಿದೆ. ಭಾರತದ ಒಂದೊಂದು ಏಟಿಗೂ ಪಾಪಿ ಪಾಕಿಸ್ತಾನದ ಮಿಲಿಟರಿ ಹೆದರಿ ಹೋಗುತ್ತಿದೆ. ಈಗಾಗಲೇ ಪಾಕಿಸ್ತಾನ ಹೆದರಿ ಮೂಲೆ ಸೇರುವ ಪರಿಸ್ಥಿತಿ ನಿರ್ಮಾಣ ಆಗಿದ್ದು, ಇಂತಹ ಸಮಯದಲ್ಲೇ ಪರಮಾಣು ಅಂದ್ರೆ ನ್ಯೂಕ್ಲಿಯರ್ ಅಸ್ತ್ರ ಬಳಸುವ ಬಗ್ಗೆ ಪಾಪಿ ಪಾಕಿಸ್ತಾನ ಪರೋಕ್ಷವಾಗಿ ಬೆದರಿಕೆ ಹಾಕುತ್ತಿದೆ. ಅಕಸ್ಮಾತ್ ಪಾಪಿ ಪಾಕಿಸ್ತಾನ ಈ ತಪ್ಪು ಮಾಡಿದರೆ ಅದೇ ದಿನ ಪಾಕಿಸ್ತಾನ ಕೂಡ ಭೂಮಿ ಮೇಲಿಂದ ನಾಶವಾಗಿ ಹೋಗಲಿದೆ!
ಹೌದು, ಭಾರತ ಕೂಡ ನ್ಯೂಕ್ಲಿಯರ್ ಪವರ್ ಇರುವ ದೇಶ. ಅದರಲ್ಲೂ ಪಾಕಿಸ್ತಾನ ಬಳಿ ಇರುವ ಪರಮಾಣು ಅಸ್ತ್ರಗಳಿಗಿಂತ ಭಾರತದ ಬಳಿ ಇರುವ ಪರಮಾಣು ಅಸ್ತ್ರಗಳು ತುಂಬಾ ಸ್ಟ್ರಾಂಗ್ ಎನ್ನಬಹುದು. ಇದೇ ಕಾರಣಕ್ಕೆ ಪಾಕಿಸ್ತಾನ ಕೂಡ, ಭಾರತವನ್ನು ಕಂಡರೆ ಭಯ ಪಡುವ ವಾತಾವರಣ ಇದೆ. ಅಕಸ್ಮಾತ್ ಭಾರತದ ಮೇಲೆ ಪಾಪಿ ಪಾಕಿಸ್ತಾನ ದಾಳಿ ನಡೆಸಿ, ಪರಮಾಣು ಅಸ್ತ್ರ ಬಳಸಿದರೆ ಮರು ಕ್ಷಣವೇ ಭಾರತ ಅದನ್ನ ನಾಶ ಮಾಡಲಿದೆ. ಅಲ್ಲದೇ, ಪಾಪಿ ಪಾಕಿಸ್ತಾನದ ಸರ್ವನಾಶಕ್ಕೆ ಭಾರತೀಯ ಸೇನೆ ಮುನ್ನುಡಿ ಬರೆಯಲಿದೆ. ಹೀಗಿದ್ದಾಗ, ಜಾಗತಿಕ ಮಟ್ಟದಲ್ಲೂ ಪಾಕಿಸ್ತಾನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ ಪಾಠ ಕಲಿಸುತ್ತಾ?
ವಿಶ್ವಸಂಸ್ಥೆ ಕೂಡ ಈಗಾಗಲೇ ಉಗ್ರರು & ಭಯೋತ್ಪಾದನೆ ವಿಚಾರವಾಗಿ ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದೆ. ಹೀಗಿದ್ದರೂ ಪಾಪಿ ಪಾಕಿಸ್ತಾನ ಮಾತ್ರ ತನ್ನ ಮೊಂಡಾಟ ಮುಂದುವರಿಸಿ ಇದೀಗ ದಾಳಿಗೆ ಮುಂದಾಗಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ತಿನ್ನಲು ಅನ್ನ ಇಲ್ಲ ಅಂತಾ ಭಿಕ್ಷೆ ಬೇಡುತ್ತಿರುವ ಪಾಪಿ ಪಾಕಿಸ್ತಾನ, ಪರಮಾಣು ಅಸ್ತ್ರ ಬಳಕೆ ಮಾಡಿದರೆ ಅದೇ ದಿನ ಇಡೀ ಪ್ರಪಂಚ ಪಾಕಿಸ್ತಾನ ವಿರುದ್ಧ ತಿರುಗಿ ಬೀಳುವುದು ಗ್ಯಾರಂಟಿ. ಇಷ್ಟೆಲ್ಲಾ ಗೊತ್ತಿದ್ದು ಕೂಡ ಪಾಪಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ದಿಢೀರ್ ಪರಮಾಣು ಅಧಿಕಾರಿಗಳ ಜೊತೆಗೆ ಸಭೆ ನಡೆಸಿರುವುದು ಭಾರತಕ್ಕೆ ಇನ್ನಷ್ಟು ಕೋಪ ತರಿಸಿದೆ. ಅಲ್ಲದೇ ಪಾಕ್ ವಿರುದ್ಧ ದಾಳಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಒಟ್ಟಾರೆ ಹೇಳುವುದಾದರೆ ಪಾಪಿ ಪಾಕಿಸ್ತಾನಕ್ಕೆ ಸರ್ವನಾಶ ಆಗುವ ತನಕ ಬುದ್ಧಿ ಬರೋದಿಲ್ಲ ಅನ್ನೋ ರೀತಿ ಕಾಣ್ತಾ ಇದೆ. ಈಗಾಗಲೇ ಹಲವು ಸಮಸ್ಯೆಗಳನ್ನ ಎದರಿಸುತ್ತಿರುವ ಪಾಪಿ ಪಾಕಿಸ್ತಾನ ಇದೀಗ ಮತ್ತೊಂದು ಸಮಸ್ಯೆ ಮೈಮೇಲೆ ಎಳೆದುಕೊಂಡಿದೆ. ಹೀಗಾಗಿ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications