ಪೊಲೀಸ್ ಪಾರ್ಟಿ ಮೇಲೆ ಗ್ರೆನೇಡ್ ದಾಳಿ: ಹತ್ತು ಮಂದಿಗೆ ಗಾಯ
ಶೋಪಿಯಾನ್, ಜೂನ್ 4: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದ ಗ್ರೆನೇಡ್ ದಾಳಿಯಲ್ಲಿ ಎಂಟು ಮಂದಿ ನಾಗರಿಕರು ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ.
ಕಳೆದ ನಾಲ್ಕು ದಿನಗಳಲ್ಲಿ ಇದು 10ನೇ ಈ ರೀತಿಯ ದಾಳಿಯಾಗಿದೆ. ಈ ದಾಳಿಗೆ ತಾನೇ ಹೊಣೆಯೆಂದು ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ಹೇಳಿಕೊಂಡಿದೆ.
ಶೋಪಿಯಾನ್ ಪಟ್ಟಣದ ಬಟಾಪೋರಾ ಚೌಕದಲ್ಲಿನ ಪೊಲೀಸ್ ಪಾರ್ಟಿಯನ್ನು ಗುರಿಯಾಗಿರಿಸಿಕೊಂಡು ಉಗ್ರರು ಈ ದಾಳಿ ನಡೆಸಿದ್ದಾರೆ. ಆದರೆ ಗ್ರೆನೇಡ್ ಗುರಿ ತಪ್ಪಿ, ರಸ್ತೆಯ ಮೇಲೆ ಸಿಡಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟಣದೆಲ್ಲೆಡೆ ವ್ಯಾಪಕ ಹುಡುಕಾಟ ಕಾರ್ಯಾಚರಣೆ ನಡೆಸಲಾಗಿದೆ.
ಶ್ರೀನಗರದಲ್ಲಿ ಪ್ರತಿಭಟನಾಕಾರನೊಬ್ಬನ ಮೇಲೆ ಸಿಆರ್‌ಪಿಎಫ್ ಜೀಪ್ ಹರಿದ ಘಟನೆ ಬಳಿಕ ಶ್ರೀನಗರದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ವಾಹನಗಳನ್ನು ಗುರಿಯಾಗಿರಿಸಿಕೊಂಡು ಮೂರು ಗ್ರೆನೇಡ್ ದಾಳಿಗಳು ನಡೆದಿವೆ.
ಶನಿವಾರ ನಡೆದ ಮೂರು ದಾಳಿಗಳಲ್ಲಿ ಗಾಯಗೊಂಡು ಎಂಟು ಮಂದಿಯಲ್ಲಿ ನಾಲ್ವರು ಸಿಆರ್‌ಪಿಎಫ್ ಸಿಬ್ಬಂದಿ ಸೇರಿದ್ದಾರೆ.
ಇದಕ್ಕೂ ಮುನ್ನ ಮೇ 29ರಂದು ಶೋಪಿಯಾನ್‌ನಲ್ಲಿ ಆಧುನಿಕ ಸ್ಫೋಟಕ ಸಾಧನ ಬಳಸಿ ನಡೆಸಿದ ದಾಳಿಯಲ್ಲಿ ಸೇನಾ ಪಡೆಯ ಮೂವರು ಯೋಧರು ಗಾಯಗೊಂಡಿದ್ದರು.












Click it and Unblock the Notifications