ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಹತ್ತು ಜಿಲ್ಲೆಗಳಲ್ಲಿದೆ ಅತಿ ಹೆಚ್ಚು ಸಕ್ರಿಯ ಕೊರೊನಾ ಪ್ರಕರಣ

|
Google Oneindia Kannada News

ನವದೆಹಲಿ, ಮಾರ್ಚ್ 30: ದೇಶದಲ್ಲಿ ಫೆಬ್ರವರಿ ನಂತರ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗಿದ್ದು, ಹೆಚ್ಚು ಕೊರೊನಾ ಸೋಂಕಿನ ಪ್ರಕರಣಗಳಿರುವ ಹತ್ತು ಪ್ರಮುಖ ಜಿಲ್ಲೆಗಳನ್ನು ಮಂಗಳವಾರ ಕೇಂದ್ರ ಆರೋಗ್ಯ ಇಲಾಖೆ ಪಟ್ಟಿ ಮಾಡಿದೆ.

ಆ ಪಟ್ಟಿಯಲ್ಲಿ ಮುಂಬೈ, ಬೆಂಗಳೂರು, ದೆಹಲಿ ಕೂಡ ಸೇರಿವೆ. ಪುಣೆ, ಮುಂಬೈ, ನಾಗಪುರ, ಥಾಣೆ, ನಾಸಿಕ್, ಔರಂಗಾಬಾದ್, ಬೆಂಗಳೂರು ನಗರ, ನಾಂದೆಡ್, ದೆಹಲಿ ಹಾಗೂ ಅಹಮದಾಬಾದ್ ಈ ಹತ್ತು ಜಿಲ್ಲೆಗಳಲ್ಲಿ ಹೆಚ್ಚಿನ ಕೊರೊನಾ ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ವರದಿ ಮಾಡಿದೆ. ಮುಂದೆ ಓದಿ...

 ಭಾರತದಲ್ಲಿ ಏರಿದ ಕೊರೊನಾ ಪ್ರಕರಣ

ಭಾರತದಲ್ಲಿ ಏರಿದ ಕೊರೊನಾ ಪ್ರಕರಣ

ಭಾರತದಲ್ಲಿ ಒಟ್ಟಾರೆ ಕೊರೊನಾ ಪ್ರಕರಣವು 1,20,95,855 ಆಗಿದ್ದು, ಇದುವರೆಗೂ ಸೋಂಕಿನಿಂದ 1,62,114 ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಸದ್ಯಕ್ಕೆ 5,40,720 ಸಕ್ರಿಯ ಪ್ರಕರಣಗಳಿರುವುದಾಗಿ ತಿಳಿದುಬಂದಿದೆ. ಫೆಬ್ರವರಿ ತಿಂಗಳಿನ ನಂತರ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗಿದೆ.

ಬೆಂಗಳೂರಲ್ಲಿ ಯಾವ ವಯಸ್ಸಿನವರಿಗೆ ಕೊರೊನಾದಿಂದ ಹೆಚ್ಚು ಅಪಾಯ?ಬೆಂಗಳೂರಲ್ಲಿ ಯಾವ ವಯಸ್ಸಿನವರಿಗೆ ಕೊರೊನಾದಿಂದ ಹೆಚ್ಚು ಅಪಾಯ?

 ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣ

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣ

ಮಹಾರಾಷ್ಟ್ರದಲ್ಲಿ ಪ್ರತಿನಿತ್ಯ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದ್ದು, ಸೋಮವಾರ ಒಂದೇ ದಿನ 31,643 ಪ್ರಕರಣಗಳು ಪತ್ತೆಯಾಗಿವೆ. ಪಂಜಾಬ್‌ನಲ್ಲಿ 2,868 ಪ್ರಕರಣಗಳು ಹಾಗೂ ಕರ್ನಾಟಕದಲ್ಲಿ 2,792 ಕೊರೊನಾ ಪ್ರಕರಣಗಳು ದಾಖಲಾಗಿರುವುದಾಗಿ ತಿಳಿದುಬಂದಿದೆ.

 ಈ ಹತ್ತು ರಾಜ್ಯಗಳಲ್ಲಿ ಅತಿ ಹೆಚ್ಚು ಪ್ರಕರಣ ದಾಖಲು

ಈ ಹತ್ತು ರಾಜ್ಯಗಳಲ್ಲಿ ಅತಿ ಹೆಚ್ಚು ಪ್ರಕರಣ ದಾಖಲು

ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಮಧ್ಯಪ್ರದೇಶ, ದೆಹಲಿ, ತಮಿಳು ನಾಡು, ಛತ್ತೀಸ್‌ಗಡ, ಕರ್ನಾಟಕ, ಹರಿಯಾಣ, ರಾಜಸ್ಥಾನ ರಾಜ್ಯಗಳಲ್ಲಿ ದಿನನಿತ್ಯದ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕೊರೊನಾ ಏರಿಕೆ; ಕರ್ನಾಟಕದಲ್ಲಿ 15 ದಿನಗಳವರೆಗೆ ಪಾರ್ಟಿ, ಜಾಥಾಗೆಲ್ಲಾ ಬ್ರೇಕ್ಕೊರೊನಾ ಏರಿಕೆ; ಕರ್ನಾಟಕದಲ್ಲಿ 15 ದಿನಗಳವರೆಗೆ ಪಾರ್ಟಿ, ಜಾಥಾಗೆಲ್ಲಾ ಬ್ರೇಕ್

Recommended Video

ಎಲ್ಲೆಲ್ಲೂ GO BACK MODI ಘೋಷಣೆ! | Oneindia Kannada
 ಕೊರೊನಾ ಪ್ರಕರಣದ ಪಾಸಿಟಿವಿಟಿ ದರ

ಕೊರೊನಾ ಪ್ರಕರಣದ ಪಾಸಿಟಿವಿಟಿ ದರ

ವಾರದ ಕೊರೊನಾ ಪ್ರಕರಣ ದಾಖಲೆಯಲ್ಲಿ ಪಾಸಿಟಿವಿಟಿ ದರವು ದೇಶದಲ್ಲಿ 5.65% ಇದೆ. ಮಹಾರಾಷ್ಟ್ರದಲ್ಲಿ 23%, ಪಂಜಾಬ್ 8.82%, ಛತ್ತೀಸ್‌ಗಡ 8%, ಮಧ್ಯಪ್ರದೇಶ 7.82%, ತಮಿಳುನಾಡು 2.50%, ಕರ್ನಾಟಕ 2.45%, ಗುಜರಾತ್ 2.2% ಹಾಗೂ ದೆಹಲಿಯಲ್ಲಿ 2.04% ಇದೆ.

English summary
The health ministry on Tuesday listed out the 10 most-affected districts in India with the highest number of active COvid-19 cases, including Mumbai, Bengaluru and Delhi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X