Telangana Poll 2023: ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಿಂದ ಈ 'ಮಹಾನಟಿ'ಗೆ ಗೇಟ್‌ಪಾಸ್: ಕಾಂಗ್ರೆಸ್ ಸೇರ್ತಾರಾ ಲೇಡಿ ಸೂಪರ್‌ಸ್ಟಾರ್
ನವದೆಹಲಿ, ನವೆಂಬರ್ 09: ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ಕಾವು ಹೆಚ್ಚಾಗಿದೆ. ಒಂದೊಂದೇ ಪಕ್ಷಗಳು ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿವೆ. ಈ ಪೈಕಿ ಬಿಜೆಪಿ ಅಂತಿಮಗೊಂಡ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಇತ್ತೀಚೆಗೆ ಬಿಡುಗಡೆ ಮಾಡಿತು. ಆದರೆ ಪಟ್ಟಿಯಲ್ಲಿ ಪಕ್ಷದ ಹಿರಿಯ ನಾಯಕಿ, ಮಾಜಿ ಸಂಸದೆಯ ಹೆಸರನ್ನು ಕೈ ಬಿಡಲಾಗಿದೆ. ಇದು ಮುಂದಿನ ರಾಜಕೀಯ ಬೆಳವಣಿಗೆಗಳತ್ತ ಕೌತುಕ ಮೂಡಿಸಿದೆ.
ಇದೇ ನವೆಂಬರ್ 30 ರಂದು ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಭಾರತೀಯ ಜನತಾ ಪಕ್ಷವು 12 ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದೆ. ಈ ಮೂಲಕ ಬಿಜೆಪಿಯ ಒಟ್ಟು 100 ಅಭ್ಯರ್ಥಿಗಳು ಕಣದಲ್ಲಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ.

ಸದ್ಯ ಬಿಜೆಪಿಯಿಂದ ಉಳಿದ 19 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವುದು ಬಾಕಿ ಇದೆ. ಇದಕ್ಕೆ ನಟ-ರಾಜಕಾರಣಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷವು ದೊಂದಿಗೆ ಚರ್ಚಿಸಿ ನಂತರ 8-9 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ.
ಬಿಜೆಪಿಯು ಇದುವರೆಗೂ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಮಾಜಿ ಸಂಸದೆ ಹಿರಿಯ ನಾಯಕಿ ವಿಜಯಶಾಂತಿ (Vijayashanthi) ಅವರಿಗೆ ಟಿಕೆಟ್ ನೀಡಲಾಗಿಲ್ಲ. ಹೀಗಾಗಿ ಅವರ ಹೆಸರು ಯಾವ ಪಟ್ಟಿಯಲ್ಲಿ ಇಲ್ಲ. ಇದರಿಂದ ಅವರ ಮುಂದಿನ ನಡೆ ಏನು? ಅವರು ಕಾಂಗ್ರೆಸ್ ಪಕ್ಷ ಸೇರುತ್ತಾರೆಯೆ? ಎಂಬ ಊಹಾಪೂಹಗಳು ಎದ್ದಿವೆ. ಇತ್ತ ಪಕ್ಷದ ನಡೆ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಾರಣ ಕೆಲವು ಸ್ಥಾನಗಳ ಆಯ್ಕೆ ಬಾಕಿ ಇದೆ.
ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಹೆಸರಿಲ್ಲ
ಬಿಜೆಪಿಯ ಹಿರಿಯ ನಾಯಕಿ ಹಾಗೂ ಮಾಜಿ ಸಂಸದೆ ವಿಜಯಶಾಂತಿ ಹೆಸರು. ಅವರು ಕಾಮರೆಡ್ಡಿಯಿಂದ ಕಣಕ್ಕಿಳಿಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಕೆಲವು ಕಾರಣಗಳಿಂದಾಗಿ ಅವರ ಹೆಸರು ಪಟ್ಟಿಯಲ್ಲಿ ಸೇರಲಿಲ್ಲ. ಅಲ್ಲದೇ ಸೋಮವಾರ ಘೋಷಣೆಯಾದ ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿಯೂ ಸಹ ವಿಜಯಶಾಂತಿ ಅವರು ಹೆಸರು ಕಾಣೆಯಾಗಿದೆ. ಇದೆಲ್ಲ ಬೆಳವಣಿಗೆ ಮತ್ತು ಬಿಜೆಪಿ ನಿರ್ಧಾರಗಳಿಂದ ಜನಪ್ರಿಯ ನಟಿ ವಿಜಯಶಾಂತಿಯವರ ವಿಚಾರ ಮುನ್ನೆಲೆಗೆ ಬಂದಿದೆ.

ಸದ್ಯ ತೆಲಂಗಾಣದಲ್ಲಿ ಪ್ರಮುಖ ವಿಚಾರಗಳ ಪೈಕಿ ಹೆಚ್ಚು ಕಾಲ ಬಿಜೆಪಿಯಲ್ಲಿರುವ ವಿಜಯಶಾಂತಿ ಅವರು ಅದೇ ಪಕ್ಷದಲ್ಲಿ ಮುಂದುವರಿಯುತ್ತಾರೆಯೇ? ಅಥವಾ ಕಾಂಗ್ರೆಸ್ ತೆಕ್ಕೆಗೆ ಮತ್ತೆ ಮರಳುತ್ತಾರಾ? ಎಂಬುದರ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ. ಆದರೆ ಈ ಕುರಿತು ವಿಜಯಶಾಂತಿ ಅವರು ಎಲ್ಲಿಯೂ ಪ್ರತಿಕ್ರಿಯಿಸಿಲ್ಲ.
ಪಕ್ಷದ ವಿರುದ್ಧ ಹೇಳಿಕೆ ನೀಡದ ವಿಜಯಶಾಂತಿ
ಬದಲಾಗಿ ಒಂದೆರಡು ಸಲ ಪಕ್ಷದ ನಾಯಕತ್ವ ಕುರಿತು ಪರೋಕ್ಷ ವಾಗ್ದಾಳಿ ನಡೆಸಿದ್ದರು. ಇದರ ಹೊರತಾಗಿ ಅವರು ಬಿಜೆಪಿಯಿಂದ ತಮಗೆ ಅನ್ಯಾಯವಾಗಿದೆ, ಅತೃಪ್ತಿ ಇದೆ ಎಂದು ಹೇಳಿಕೆ ನೀಡಿಲ್ಲ. ಅಲ್ಲದೇ ಅವರ X ಖಾತೆಯಲ್ಲಿ ಈಗಲೂ ಕೇಸರಿ ಬಣ್ಣವಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವಿದೆ.
ಬಿಜೆಪಿ ನಾಲ್ಕನೇ ಪಟ್ಟಿಯಲ್ಲಿ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷೆ ತುಲಾ ಉಮಾ (ವೇಮುಲವಾಡ) ಮತ್ತು ಬೊಮ್ಮ ಶ್ರೀರಾಮ ಚಕ್ರವರ್ತಿ (ಹುಸ್ನಾಬಾದ್), ವಿ ಸುಭಾಷ್ ರೆಡ್ಡಿ (ಯಲ್ಲರೆಡ್ಡಿ) ಮತ್ತು ಚಲಮಲಾ ಕೃಷ್ಣಾ ರೆಡ್ಡಿ ಅವರು ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದವರಿಗೂ ಟಿಕೆಟ್ ನೀಡಲಾಗಿದೆ.












Click it and Unblock the Notifications