Telangana: ತೆಲಂಗಾಣದಲ್ಲಿ ಸಿಎಂ ಕೆಸಿಆರ್ ವಿರುದ್ಧ ತೊಡೆತಟ್ಟಿ ಗೆದ್ದ ರೇವಂತ್ ರೆಡ್ಡಿ ಹಿನ್ನೆಲೆ ಏನು?
ತೆಲಂಗಾಣದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಸರ್ಕಾರ ರಚಿಸುವ ಹೊಸ್ತಿಲಲ್ಲಿದೆ. ಎರಡು ಬಾರಿ ಭರ್ಜರಿ ಜಯ ಸಾಧಿಸಿ ಸರ್ಕಾರ ರಚನೆ ಮಾಡಿದ್ದ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಬಿಆರ್ ಎಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ.
ಕಾಂಗ್ರೆಸ್‌ನ ಗೆಲುವಿನ ಹಿಂದೆ ಹಲವು ಅಂಶಗಳಿದ್ದರೂ ಹೆಚ್ಚಾಗಿ ಕೇಳಿಬರುತ್ತಿರುವುದು ರೇವಂತ್ ರೆಡ್ಡಿ ಎನ್ನುವ ಹೆಸರು. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರೇವಂತ್ ರೆಡ್ಡಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರು ಈಗ ತೆಲಂಗಾಣ ಸಿಎಂ ರೇಸ್‌ನಲ್ಲಿದ್ದಾರೆ.

ತೆಲಂಗಾಣದಲ್ಲಿ ಅನುಮುಲಾ ರೇವಂತ್ ರೆಡ್ಡಿ ನಿಧಾನವಾಗಿ ಕಾಂಗ್ರೆಸ್‌ನ ಮುಖವಾಗಿ ಕಾಣಿಸಿಕೊಂಡಿದ್ದಾರೆ. 2009 ಮತ್ತು 2014 ರ ನಡುವೆ ತೆಲುಗು ದೇಶಂ ಪಕ್ಷ (ಟಿಡಿಪಿ)ದ ಶಾಸಕರಾಗಿ ಕೊಡಂಗಲ್ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ನಂತರ 2014ರಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯವಾದ ಬಳಿಕ ಕೂಡ ಶಾಸಕರಾಗಿದ್ದ ಅವರು, 2017ರಲ್ಲಿ ಟಿಡಿಪಿ ತೊರೆದು ಕಾಂಗ್ರೆಸ್ ಸೇರಿದ್ದರು.
ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮ
ಪಕ್ಷಕ್ಕಾಗಿ ಅವರು ಮಾಡಿದ ಕೆಲಸವು ಅವರನ್ನು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲು ಕಾರಣವಾಯಿತು. ರಾಜ್ಯದಲ್ಲಿ ಕಾಂಗ್ರೆಸ್‌ನ ಪ್ರಸ್ತುತ ಕಾರ್ಯಕ್ಷಮತೆಯ ಯಶಸ್ಸಿಗೆ ಈಗ ಪಕ್ಷದ ವಲಯಗಳಲ್ಲಿ ಮತ್ತು ತಳಮಟ್ಟದಲ್ಲಿ ಅವರ ರಾಜಕೀಯ ಪರಾಕ್ರಮ ಕಾರಣ ಎಂದು ಹೇಳಲಾಗುತ್ತಿದೆ.
ಸ್ವತಂತ್ರ ಅಭ್ಯರ್ಥಿಯಾಗಿ ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದಾಗ, ನಂತರ ಅವರು ಎನ್ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾದ ನಂತರ ತೆಲುಗು ದೇಶಂ ಪಕ್ಷಕ್ಕೆ ಸೇರಿದರು. ಅವರು 2018 ರ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದಾಗ ಸೋಲು ಕಂಡರು. ನಂತರ 2019 ರ ಲೋಕಸಭಾ ಚುನಾವಣೆಯಲ್ಲಿ ಅವರ ಮಲ್ಕಾಜ್‌ಗಿರಿಯ ಲೋಕಸಭಾ ಕ್ಷೇತ್ರದಲ್ಲಿ 10,919 ಮತಗಳ ಅಂತರದಿಂದ ಗೆದ್ದಿದ್ದರು.
ರಾಜ್ಯದಲ್ಲಿ ಪಕ್ಷವು ಅತ್ಯಂತ ಕೆಳಮಟ್ಟದಲ್ಲಿದ್ದ ಸಮಯದಲ್ಲಿ ಕಾಂಗ್ರೆಸ್ ಮುಖ್ಯಸ್ಥರಾಗಿ ಉನ್ನತ್ ರೆಡ್ಡಿ ನೇಮಕವಾದರು. 2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 19 ವಿಧಾನಸಭಾ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು ಇದರಲ್ಲಿ ಸುಮಾರು 12 ಶಾಸಕರು ಕೆಸಿಆರ್ ಅವರ ಪಕ್ಷಕ್ಕೆ ವಲಸೆ ಹೋಗಿದ್ದರು.
ಕಾಂಗ್ರೆಸ್ ತೆಲಂಗಾಣ ರಾಷ್ಟ್ರ ಸಮಿತಿ ಈಗಿನ ಭಾರತ್ ರಾಷ್ಟ್ರ ಸಮಿತಿ ಮುಖ್ಯಸ್ಥ ಕೆ ಚಂದ್ರಶೇಖರ ರಾವ್‌ಗೆ ಸವಾಲು ಹಾಕುವ ಹೊಸ ಮುಖವನ್ನು ತರಲು ನೋಡುತ್ತಿತ್ತು. ಆಗ ಕಾಂಗ್ರೆಸ್ ಆಯ್ಕೆ ಮಾಡಿದ್ದೇ ರೇವಂತ್ ರೆಡ್ಡಿಯವರನ್ನು.
ಮೊದಲಿನಿಂದಲೂ ರೇವಂತ್ ರೆಡ್ಡಿ ವಾಕ್ಚಾತುರ್ಯ ಹೊಂದಿದ್ದರು. "ಕೆಸಿಆರ್ ಡಿಸೆಂಬರ್ 3 ರಂದು ನಿವೃತ್ತರಾಗುತ್ತಾರೆ, ನಾವು ಅವರಿಗೆ ಡಬಲ್ ಬೆಡ್ ರೂಂ ಮನೆಯನ್ನು ನಿರ್ಮಿಸುತ್ತೇವೆ. ಎಲ್ಲಿ ಅಂತಾ ನಿನಗೆ ಗೊತ್ತಾ? ಚೆರ್ಲಪಲ್ಲಿ ಜೈಲಿನ ಒಳಗೆ. ಇದು ಅವರು ಮಾಡಿದ ಎಲ್ಲಾ ಭ್ರಷ್ಟಾಚಾರಕ್ಕೆ" ಎಂದು ರೇವಂತ್ ರೆಡ್ಡಿ ಹೇಳಿಕೆ ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದರು.
ಕೆಸಿಆರ್ ಮತ್ತು ಅವರ ಪುತ್ರ ಹಾಗೂ ಸಚಿವ ಕೆ ಟಿ ರಾಮರಾವ್ ಕೂಡ ರೆಡ್ಡಿ ವಿರುದ್ಧ ಸದಾ ದನಿಯೆತ್ತಿದ್ದಾರೆ. ರೇವಂತ್ ಅವರನ್ನು ಹಲವು ಸಂದರ್ಭಗಳಲ್ಲಿ ಕಳ್ಳ ಎಂದು ಕರೆದಿದ್ದಾರೆ ಮತ್ತು "ರೇಟ್-ಎಷ್ಟು ರೆಡ್ಡಿ" ಎಂದು ಲೇವಡಿ ಮಾಡಿದ್ದಾರೆ.
ರೇವಂತ್ ಅವರು ಸಾರ್ವಜನಿಕರ ಮನಸ್ಸಿನಲ್ಲಿ ಪ್ರಮುಖ ಸ್ಪರ್ಧಿಯಾಗಿ ತಮ್ಮ ಹೆಸರನ್ನು ಗಟ್ಟಿಗೊಳಿಸುವುದರ ಜೊತೆಗೆ, ಕಾಂಗ್ರೆಸ್ ಪಕ್ಷದಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ನಾಯಕತ್ವವನ್ನು ಒಗ್ಗೂಡಿಸಲು ಮತ್ತು ಎಲ್ಲಾ ಭಿನ್ನಮತೀಯರ ವಿಶ್ವಾಸ ಗಳಿಸಲು ಸಮರ್ಥರಾಗಿದ್ದರು.
ಅವರ ಸ್ಥಳೀಯ ಆಡುಮಾತಿನ ಬಳಕೆ, ಗ್ರಾಮೀಣ ತೆಲಂಗಾಣದಲ್ಲಿ ಪಕ್ಷದ ಕಾರ್ಯಕರ್ತರನ್ನು ಬಲಪಡಿಸುವುದು ಮತ್ತು ರಾಜ್ಯದ ಎಲ್ಲಾ ವಿಭಾಗಗಳು ಮತ್ತು ವಯೋಮಾನದವರ ಗಮನ ಸೆಳೆಯುವುದುಅಂತಿಮವಾಗಿ ರಾಜ್ಯದಲ್ಲಿ ಪಕ್ಷವನ್ನು ವಿಜಯಶಾಲಿಯಾಗಿ ಪರಿವರ್ತಿಸುವ ಅವರ ಮಿಷನ್ ಯಶಸ್ವಿಯಾಗಿದೆ.












Click it and Unblock the Notifications