Telangana Exit Poll 2023: ಎಎಆರ್‌ಎಎ ಸಮೀಕ್ಷೆ, ತೆಲಂಗಾಣ ಅಧಿಕಾರ 'ಕೈ'ಗೆ, ಬಿಆರ್‌ಎಗೆ ಎಷ್ಟು?
ನವದೆಹಲಿ, ನವೆಂಬರ್ 30: ತೆಲಂಗಾಣದಲ್ಲಿ ಇಂದು ಎಲ್ಲ 119 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಫಲಿತಾಂಶವು ಡಿಸೆಂಬರ್ 3ರಂದು ಪ್ರಕಟವಾಗಲಿದೆ. ಮತದಾನ ಬಳಿಕ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ.
AARAA ಸಮೀಕ್ಷೆ ಪ್ರಕಾರ, ತೆಲಂಗಾಣದಲ್ಲಿ ಬಿಆರ್‌ಎಸ್ 41-49 ಸೀಟು ಪಡೆಯಬಹುದು, ಕಾಂಗ್ರೆಸ್ ಪಕ್ಷವು58-67 ಸೀಟು, ಬಿಜೆಪಿ 5-07 ಸ್ಥಾನ, ಇತರೆ ಪಕ್ಷಗಳಿಗೆ 7-9 ಸೀಟುಗಳು ಲಭಿಸಲಿವೆ ಎಂದು ಹೇಳಲಾಗುತ್ತಿದೆ.

ಚುನಾವಣೋತ್ತರ ಸಮೀಕ್ಷೆ ಹೇಳುವಂತೆ ತೆಲಂಗಾಣದಲ್ಲಿ 58-67 ಸೀಟು ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷ ಬಿಆರ್‌ಎಸ್ ವಿರುದ್ಧ ವಿಜಯ ಪತಾಕೆ ಹಾರಿಸಲಿದೆ. ಒಟ್ಟು 119 ಕ್ಷೇತ್ರಗಳ ಪೈಕಿ ಅತ್ಯಧಿಕ ಸ್ಥಾನ ಪಡೆದು ಅಧಿಕಾರ ಹಿಡಿಯುವ ಸಾಧ್ಯತೆ ಇದೆ ಎಂದು ಎಎಆರ್‌ಎಎ ತಿಳಿಸಿದೆ.
ತೆಲಂಗಾಣದಲ್ಲಿ ಆಡಳಿತ ಪಕ್ಷ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷವು ಮೂರನೇ ಭಾರಿ ಅಧಿಕಾರ ಹಿಡಿಯುವ ಧಾವಂತದಲ್ಲಿದೆ. ಆದರೆ ಇದಕ್ಕೆ ಕಾಂಗ್ರೆಸ್ ತನ್ನದೇ ಆದ ರೀತಿಯಲ್ಲಿ ಪೈಪೋಟಿ ನೀಡುವ ಮೂಲಕ ತಡೆಯೊಡ್ಡಿದೆ. ಈ ಬಾರಿ ಅಖಾಡದಲ್ಲಿ ಬಿಆರ್‌ಎಸ್ ಪಕ್ಷಕ್ಕೆ ಗ್ಯಾರಂಟಿ ಯೋಜನೆಗಳ ಸಹಿತ ಜನರ ಮುಂದೆ ಪ್ರಚಾರ ನಡೆಸಿರುವ ಕಾಂಗ್ರೆಸ್ ಪಕ್ಷವೇ ಸವಾಲಾಗಿ ಪರಿಣಮಿಸಿದೆ.
ಬಿಆರ್‌ಎಸ್ ಪಕ್ಷದ ಮುಖ್ಯಸ್ಥ ಸಿಎಂ ಕೆ.ಚಂದ್ರಶೇಕರ್ ರಾವ್ ಅವರು ಎರಡು ಕ್ಷೇತ್ರಗಳಲ್ಲಿ ಸ್ಫರ್ಧಿಸಿದ್ದರೆ. ಅವರಿಗೆ ಎದುರಾಗಿ ಕಾಮರೆಡ್ಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ತೆಲಂಗಾಣ ಮುಖ್ಯಸ್ಥ ರೇವಂತ್ ರೆಡ್ಡಿ ಅವರು ಸ್ಪರ್ಧೆಗಳಿದಿದ್ದರು. ಇದೀಗ ಮತದಾನ ನಡೆದಿದ್ದು, ಅವರು ಸಹ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ
ತೆಲಂಗಾಣದಲ್ಲಿ ಕರ್ನಾಟಕ ಮಾದರಿ ಪರಿಚಯಿಸಿರುವ ಕಾಂಗ್ರೆಸ್ 118 ಕ್ಷೇತ್ರಗಳಲ್ಲಿ ಸ್ಫಧಿಸಿದೆ. ಬಿಆರ್‌ಎಸ್ ಪಕ್ಷದ ಅಭ್ಯರ್ಥಿಗಳು ಒಟ್ಟು 119 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದು, ಇತ್ತ ಬಿಜೆಪಿಯವರು 111ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಉಳಿದ ಕ್ಷೇತ್ರಗಳನ್ನು ನಟ ಪವನ್ ಕಲ್ಯಾಣ್ ಅವರ ನೇತೃತ್ವದ ಪಕ್ಷಕ್ಕೆ ಬಿಟ್ಟು ಕೊಟ್ಟಿದೆ. ಈ ಮೂಲಕ ತೀವ್ರ ಪೈಪೋಟಿಗೆ ಕೇಸರಿ ಪಡೆ ಸಹ ತಂತ್ರ ರೂಪಿಸಿದೆ.
ಬಿಜೆಪಿ ಪವನ್ ಕಲ್ಯಾಣ್ ಅವರ ಜೊತೆಗೆ ಕೈ ಜೋಡಿಸುತ್ತಿದ್ದಂತೆ ಈ ಮೊದಲೇ ಅಸಮಾಧಾನ ಹೊಂದಿದ್ದ ಹಿರಿಯ ಸಂಸದ ನಟಿ ವಿಜಯಶಾಂತಿ ಅವರು ಕಾಂಗ್ರೆಸ್ ನತ್ತ ಮುಖಮಾಡಿದ್ದರು ಎನ್ನಲಾಯಿತು. ಆದರೆ ಅವರ ಬಗ್ಗೆ ಬಿಜೆಪಿ ಅಷ್ಟಾಗಿ ತಲೆ ಕೆಡಿಸಿಕೊಳ್ಳದೇ ಅಬ್ಬರ ಪ್ರಚಾರದಲ್ಲಿ ಮುಳುಗಿಹೊಗಿತ್ತು. ಎಲ್ಲವು ಅಂದುಕೊಂಡಂತೆ ಇಂದು ಸುಸೂತ್ರವಾಗಿ ಮತದಾನ ನಡೆದಿದೆ.












Click it and Unblock the Notifications