Get Updates
Get notified of breaking news, exclusive insights, and must-see stories!

Telanagana: ಸೋತರು ಬಿಜೆಪಿಗೆ ಒಲಿದ ಅದೃಷ್ಟ, ಗೆಲುವಿನ ಭರವಸೆ ಮೂಡಿಸಿದ ಕೇಸರಿ ಪಡೆ

ಬೆಂಗಳೂರು, ಡಿಸೆಂಬರ್ 05: ತೆಲಂಗಾಣದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದು ಬೀಗಿದೆ. ಎರಡು ಬಾರಿ ಆಡಳಿತ ನೀಡಿದ್ದ ಬಿಆರ್‌ಎಸ್ ಪಕ್ಷ ಸೋಲು ಕಂಡಿದೆ. ಬಿಜೆಪಿಗೆ ಇಲ್ಲಿ ಸೋಲಾದರೂ ಸಹಿತ ಕಳೆದ ಬಾರಿಗಿಂತ ಈ ಬಾರಿ ತನ್ನ ಶಾಸಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.

ಹೌದು, ಕಳೆದ ತೆಲಂಗಾಣ ವಿಧಾನಸಭೆಯಲ್ಲಿ (2018) ಭಾರತೀಯ ಜನತಾ ಪಕ್ಷವು (ಬಿಜೆಪಿ) ಕೇವಲ ಮೂರು ಸದಸ್ಯರ ಸಂಖ್ಯೆ ಹೊಂದಿತ್ತು. ಈ ಬಾರಿ ಎಂಟು ಕ್ಷೇತ್ರಗಳಿಗೆ ಅದನ್ನು ಹೆಚ್ಚಿಸಿಕೊಳ್ಳುವ ಮೂಲಕ ತೆಲಂಗಾಣದಲ್ಲಿ ಭವಿಷ್ಯದ ಗೆಲುವಿನ ಭರವಸೆ ಮೂಡಿಸಿದೆ. ಅದೃಷ್ಟ ಪರೀಕ್ಷೆಯಲ್ಲಿ ಪಾಸಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Telangana Election 2023: BJP Increased Seats, Setback of 2 sitting MLA and 3 MPs defeat

ತೆಲಂಗಾಣದಲ್ಲಿ ಈ ಬಾರಿ ಸದಸ್ಯರ ಸಂಕ್ಯೆ ಹೆಚ್ಚಿಸಿಕೊಂಡರು ಸಹಿತ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಇಬ್ಬರು ಹಾಲಿ ಶಾಸಕರು ಮತ್ತು ಮೂವರು ಸಂಸದರು ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಸೋಲಿನ ರುಚಿಯನ್ನು ಅನುಭವಿಸಬೇಕಾಯಿತು. ಹೀಗಾಗಿ ಈ ಬಾರಿಯು ಬಿಜೆಪಿಗೆ ಹಿನ್ನಡೆ ಆಯಿತು. ಆದರೆ ಕಳೆದ ಬಾರಿ ಒಂದು ಸ್ಥಾನ ಗಳಿಸಿದ್ದ ಬಿಜೆಪಿ ಈ ಸಾರಿ ಹೆಚ್ಚು ಸ್ಥಾನ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಏಳು ಬಾರಿ ಗೆದ್ದು ಈ ಸಲ ಸೋತರು

ಬಿಜೆಪಿ ರಾಜ್ಯ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಏಳು ಬಾರಿ ಶಾಸಕರಾಗಿದ್ದ ಮಾಜಿ ಸಚಿವ ಈಟಾಳ ರಾಜೇಂದರ್ ಅವರು ಹುಜೂರಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪ್ರತಿಸ್ಪರ್ಧಿ ಬಿಆರ್‌ಎಸ್‌ನ ಪಿ.ಕೌಶಿಕ್ ರೆಡ್ಡಿ ವಿರುದ್ಧ 16,873 ಮತಗಳ ಅಂತರದಿಂದ ಸೋತಿದ್ದಾರೆ.

ಇನ್ನೂ ದುಬ್ಬಾಕ್ ಶಾಸಕ ಎಂ.ರಘುನಂದನ್ ರಾವ್ ಬಿಆರ್ ಎಸ್ ಅಭ್ಯರ್ಥಿ ಎದುರು ಸೋಲು ಎದುರಿಸಿದ್ದಾರೆ. ರಾಜ್ಯದ ಕರೀಂನಗರ ವಿಧಾನಸಭಾ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಉಂಟಾಗಿತ್ತು. ಚುನಾವಣಾ ಅಖಾಡದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರೀಂನಗರ ಸಂಸದ ಬಂಡಿ ಸಂಜಯ್ ಅವರು ಭಾರತ್ ರಾಷ್ಟ್ರ ಸಮಿತಿ (BRS)ಯ ನಾಮನಿರ್ದೇಶಿತ ಜಿ. ಕಮಲಾಕರ್ ವಿರುದ್ಧ 3,163 ಮತಗಳ ಅಲ್ಪ ಅಂತರದಿಂದ ಸೋತರು.

Telangana Election 2023: BJP Increased Seats, Setback of 2 sitting MLA and 3 MPs defeat

ಕೊರುಟ್ಲಾ ಮತ್ತು ಬೋತ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ಅದಿಲಾಬಾದ್ ಸಂಸದ ಸೋಯಂ ಬಾಪು ರಾವ್ ಮತ್ತು ನಿಜಾಮಾಬಾದ್ ಸಂಸದ ಅರವಿಂದ್ ಧರ್ಮಪುರಿ ಅವರು ಬಿಆರ್‌ಎಸ್ ಅಭ್ಯರ್ಥಿಗಳ ವಿರುದ್ಧ ಸೆಣಸಿ ಗೆಲ್ಲುವಲ್ಲಿ ವಿಫಲವಾದರು.

ರೇವಂತ್ ರೆಡ್ಡಿ ಸಿಎಂ ಆಗಿ ಡಿ.7ಕ್ಕೆ ಪ್ರಮಾಣ ವಚನ?

ತೆಲಂಗಾಣ ಫಲಿತಾಂಶ ಹೊರ ಬೀಳುತ್ತಿದ್ದಂತೆ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಕಾಂಗ್ರೆಸ್‌ ನಿಂದ ತೆಲಂಗಾಣದ ಅಧ್ಯಕ್ಷ ರೇವಂತ್ ರೆಡ್ಡಿ ಅವರು ಮುಂದಿನ ಸಿಎಂ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ಒಟ್ಟು 119 ಸ್ಥಾನಗಳ ಪೈಕಿ 64 ಸ್ಥಾನ ಪಡೆದ ಕಾಂಗ್ರೆಸ್‌ ನಲ್ಲಿ ಸರ್ಕಾರ ರಚನೆಯ ಚಟುವಟಿಕೆಗಳು ಗರಿಗೆದರಿವೆ.

ವಿದ್ಯಾರ್ಥಿ ಪರಿಷತ್ (ABVP) ಸದಸ್ಯನಾಗಿದ್ದ ರೇವಂತ್ ರೆಡ್ಡಿ ಅವರು ರಾಜಕೀಯ ಪ್ರವೇಶಿಸಿ ನಂತರ ಕಾಂಗ್ರೆಸ್ ಸೇರಿದರು. ತಮ್ಮದೇ ಆದ ನಾಯಕತ್ವದಿಂದ ಪಕ್ಷದ ಪ್ರಮುಖ ಹುದ್ದೆಗಳನ್ನು ಅಲಂಕರಿಸುತ್ತಾ ಹಿರಿಯ ನಾಯಕರ ಜತೆಗೆ ಉತ್ತಮ ಭಾಂಧವ್ಯ ಸಹ ಹೊಂದಿದ್ದರು. ನಂತರ ತೆಲಂಗಾಣದ ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆ ಆದರು. ಇದೀಗ ಇವರೇ ಮುಂದಿನ ತೆಲಂಗಾಣ ಸಿಎಂ ಎನ್ನಲಾಗುತ್ತಿದೆ. ಡಿಸೆಂಬರ್ 7ರಂದು ಅವರು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆಗಳು ಇವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+