Earthquake: ತೆಲಂಗಾಣದ ವಾರಂಗಲ್‌ನಲ್ಲಿ 3.6 ತೀವ್ರತೆಯ ಭೂಕಂಪ!
ತೆಲಂಗಾಣ, ಆಗಸ್ಟ್ 25: ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭೂಕಂಪದ ಕಂಪನಗಳು ನಿರಂತರವಾಗಿ ಅನುಭವವಾಗುತ್ತಿದ್ದು, ತೆಲಂಗಾಣದ ವಾರಂಗಲ್ ಸಂಭವಿಸಿದೆ.
ಹೌದು, ತೆಲಂಗಾಣದ ವಾರಂಗಲ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿ ನೀಡಿದೆ. ಶುಕ್ರವಾರ ಬೆಳಗ್ಗೆ 4.43 ರ ಸುಮಾರಿಗೆ ಭೂಕಂಪ ಸಂಭವಿಸಿದೆ ಮತ್ತು 30 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಸದ್ಯಕ್ಕೆ ಯಾವುದೇ ಸಾವು ನೋವು ಸಂಭವಿಸಿದ ಕುರಿತು ವರದಿಯಾಗಿಲ್ಲ.

ಆಗಸ್ಟ್ 23 ರಂದು ಟಿಬೆಟ್ನ ಕ್ಸಿಜಾಂಗ್ನಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿತ್ತು. 10 ಕಿ.ಮೀ ಆಳದಲ್ಲಿ ಸಂಭವಿಸಿತ್ತು. ಆಗಸ್ಟ್ 19, ಸಣ್ಣ ಪ್ರಮಾಣದ ಭೂಕಂಪನ ಸಂಭವಿಸಿದ ಕೇವಲ ದಿನಗಳ ನಂತರ ಈ ಭೂಕಂಪ ಸಂಭವಿಸಿದ್ದು, ಸ್ಥಳೀಯ ನಿವಾಸಿಗಳು ಆತಂಕದಲ್ಲಿದ್ದಾರೆ.
ಭೂಕಂಪದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಇಲ್ಲಿವೆ
ಭೂಕಂಪದ ಸಮಯದಲ್ಲಿ ಶಾಂತವಾಗಿರಬೇಕು ಹಾಗೂ ಭೂಕಂಪ ಸಂದರ್ಭದಲ್ಲಿ ಭಯ ಬಿಳುವುದು ಸಹಜ ಆದರೆ, ಈ ಸಂಧರ್ಭದಲ್ಲಿ ನಿಮ್ಮ ಜೊತೆಗಿರುವವರಿಗೆ ಧೈರ್ಯ ತುಂಬುವ ಕೆಲಸವನ್ನ ಮಾಡಬೇಕು
ಭೂಕಂಪ ಸಂಭವಿಸಿದಾಗ ಹಲವು ಹಾನಿಗಳಾಗುತ್ತವೆ. ಹೀಗಾಗಿ ಭೂಕಂಪನ ಸಮಯದಲ್ಲಿ ಕಟ್ಟಡಗಳಿಂದ ದೂರವಿರುವ ತೆರೆದ ಸ್ಥಳದಂತಹ ಸುರಕ್ಷಿತ ಸ್ಥಳವನ್ನು ಹುಡುಕಿ. ಬಯಲು ಪ್ರದೇಶಳತ್ತ ತೆರಳುವುದು ಉತ್ತಮ.
ಭೂಕಂಪ ಸಂಭವಿಸಿದ ಸಮಯದಲ್ಲಿ ನೀವು ಒಳಾಂಗಣದಲ್ಲಿದ್ದರೆ ಗಾಜಿನ ಕಿಟಕಿಗಳ ಬಾಗಿಲುಗಳನ್ನು ಹಾಕಿ.
ಇನ್ನೂ ಭೂಕಂಪ ಸಂಭವಿಸಿದ ಸಮಯದಲ್ಲಿ ಭಯದಿಂಧ ಕಟ್ಟಡದಿಂದ ಎಲ್ಲರೂ ಒಟ್ಟಿಗೆ ಹೊರಗೆ ಓಡುವುದನ್ನು ತಪ್ಪಿಸಿ, ಇದರಿಂದ ಕಾಲ್ತುಳಿತಕ್ಕೆ ಕಾರಣವಾಗಬಹುದು. ಇದರಿಂದ ಇನ್ನಷ್ಟು ಸಮಸ್ಯೆಗೂ ಕಾರಣವಾಗಬಹುದು.
ಭೂಕಂಪ ಸಂಭವಿಸಿದ ಸಂದರ್ಭದಲ್ಲಿ ಹೊರಾಂಗಣದಲ್ಲಿದ್ದರೆ, ಕಟ್ಟಡಗಳು, ತಂತಿಗಳಿಂದ ದೂರ ಇರಿ ಮತ್ತು ಚಲಿಸುತ್ತಿರುವ ವಾಹನಗಳನ್ನು ತಕ್ಷಣವೇ ನಿಲ್ಲಿಸಿ. ಅಲ್ಲದೇ ಮನೆಯಲ್ಲಿ ಕಟ್ಟಿ ಹಾಕಿರುವ ಸಾಕು ಪ್ರಾಣಿಗಳನ್ನು ತಕ್ಷಣವೇ ಬಿಟ್ಟು ಕಳುಹಿಸಬೇಕು.












Click it and Unblock the Notifications