ಪ್ರಣಯ್ ಹತ್ಯೆ ಭೇದಿಸಿದ ಪೊಲೀಸ್! ಕೊಲೆಗಾರನಿಗೆ 1 ಕೋಟಿ ರು. ಸುಪಾರಿ!
ನಲ್ಗೊಂಡ(ತೆಲಂಗಾಣ), ಸೆಪ್ಟೆಂಬರ್ 18: ತೆಲಂಗಾಣದಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣದ ಆರೋಪಿಯನ್ನು ಬಿಹಾರದಲ್ಲಿ ಬಂಧಿಸಲಾಗಿದೆ ಎಂದು ಬಿಹಾರದ ಪೊಲೀಸರು ಹೇಳಿದ್ದು, ಆರೋಪಿಯಿಂದ ಕೆಲವು ಆಘಾತಕಾರಿ ಮಾಹಿತಿಗಳು ಲಭ್ಯವಾಗಿವೆ..
ಈ ಕೊಲೆಗಾಗಿ ಸುಪಾರಿ ಕಿಲ್ಲರ್ ಜೊತೆ ಕೊಲೆಯ ರೂವಾರಿಗಳು ಮಾಡಿಕೊಂಡಿದ್ದ ಒಪ್ಪಂದ 1 ಕೋಟಿ ರೂ. ಎಂದು ಪೊಲೀಸರು ಬೆಚ್ಚಿ ಬೀಳಿಸುವ ಸಂಗತಿಯನ್ನು ಹೊರಹಾಕಿದ್ದಾರೆ. ಬಿಹಾರ ಮೂಲದ ರೌಡಿಗಳ ತಂಡವೊಂದನ್ನು ಈ ಹತ್ಯೆಗಾಗಿ ಕರೆಸಿಕೊಳ್ಳಲಾಗಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.
ಬಿಹಾರ ಪೊಲೀಸರ ಬಲೆಗೆ ಬಿದ್ದ ಓರ್ವ ಆರೋಪಿಗೂ ಪಾಕಿಸ್ತಾನದ ಐಎಸ್ ಐಗೂ ಸಂಬಂಧವಿದೆ ಎಂಬ ಆಘಾತಕರ ಮಾಹಿತಿ ಪೊಲಿಸರಿಗೆ ಲಭ್ಯವಾಗಿದೆ.
ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಪ್ರಣಯ್ ಹತ್ಯೆ ಇಡೀ ರಾಜ್ಯವನ್ನೇ ಅಲ್ಲೋಕಲ್ಲೋಲ ಮಾಡಿದೆ. ಈ ಹತ್ಯೆಯ ಹಿಂದೆ ತನ್ನ ತಂದೆಯ ಕೈವಾಡವೇ ಇದೆ ಎಂದು ಪ್ರಣಯ್ ಹೆಂಡತಿ ಅಮೃತಾ ಆರೋಪಿಸಿದ್ದಾಳೆ. ಅಲ್ಲದೆ, ಇಡೀ ರಾಜ್ಯದಾದ್ಯಂತ ಪ್ರಣಯ್ ಸಾವಿನ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಪ್ರಣಯ್ ನಿಗೆ ನ್ಯಾಯ ಸಿಗಬೇಕು ಎಂದು ಹೋರಾಟ ಆರಂಭವಾಗಿದೆ.

ಹರೇನ್ ಪಾಂಡ್ಯ ಹತ್ಯೆ ಮಾಡಿದ್ದೂ ಇವರೇ!
2003 ರಲ್ಲಿ ಹತ್ಯೆಯಾದ ಗುಜರಾತ್ ಗೃಹಮಂತ್ರಿಯಾಗಿದ್ದ ಹರೇನ್ ಪಾಂಡ್ಯ ಅವರನ್ನು ಹತ್ಯೆ ಮಾಡಿದ್ದೂ ಇದೇ ವ್ಯಕ್ತಿ ಎಂಬ ಬಗ್ಗೆಯೂ ಪೊಲಿಸರು ಅನುಮಾನ ವ್ಯಕ್ತಪಡಿಸಿದ್ದಾರೆ. 2003ರ ಮಾರ್ಚ್ 26ರಂದು ಬೆಳಗಿನ ವಾಕಿಂಗ್ ಮುಗಿಸಿ ತಮ್ಮ ಕಾರಿನಲ್ಲಿ ಹರೇನ್ ಪಾಂಡ್ಯ ಅವರು ಕುಳಿತಿದ್ದಾಗ ಇಬ್ಬರು ಅಪರಿಚಿತರು ಗುಂಡಿನ ಸುರಿಮಳೆಗೈದಿದ್ದರು. ಅವರನ್ನು 5 ಗುಂಡುಗಳು ಹೊಕ್ಕಿದ್ದವು.

ಸ್ಥಳೀಯ ರಾಜಕಾರಣಿಗಳ ಕೈವಾಡ
ಪ್ರಣಯ್ ಕೊಲೆಯಲ್ಲಿ ತೆಲಂಗಾಣದ ಕೆಲವು ಸ್ಥಳೀಯ ರಾಜಕಾರಣಿಗಳ ಕೈವಾಡವೂ ಇದೆ ಎನ್ನಲಾಗುತ್ತಿದೆ. ಬಿಹಾರದ ಸುಪಾರಿ ಕಿಲ್ಲರ್ ತಂಡಕ್ಕೆ ಪ್ರಣಯ್ ನನ್ನು ಕೊಲೆ ಮಾಡಲು 1 ಕೋಟಿ ರೂ. ಒಪ್ಪಂದ ಮಾಡಿಕೊಂಡಿದ್ದರೆ, 18 ಲಕ್ಷ ರೂ. ಮುಂಗಡ ಹಣವನ್ನು ಈಗಾಗಲೇ ನೀಡಲಾಗಿತ್ತು ಎಂಬ ಮಾಹಿತಿಯೂ ಪೊಲೀಸರಿಗೆ ಲಭ್ಯವಾಗಿದೆ.

ಘಟನೆಯ ವಿವರ
ದಲಿತ ಕ್ರಿಶ್ಚಿಯನ್ ಆಗಿದ್ದ ಪ್ರಣಯ್ ಮತ್ತು ಹಿಂದೂ ವೈಶ್ಯ ಸಮುದಾಯಕ್ಕೆ ಸೇರಿದ್ದ ಅಮೃತಾ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಈ ಮದುವೆ ಇಬ್ಬರ ಕುಟುಂಬಕ್ಕೂ ಇಷ್ಟವಿರಲಿಲ್ಲ. ಪ್ರಣಯ್ ಕುಟುಂಬ ಕೆಲ ದಿನಗಳ ನಂತರ ದಂಪತಿಯನ್ನು ಒಪ್ಪಿಕೊಂಡರೂ ಅಮೃತಾ ಕುಟುಂಬ ಮಾತ್ರ ದ್ವೇಷ ಸಾಧಿಸುತ್ತಲೇ ಇತ್ತು. ಕಳೆದ ಜನವರಿಯಲ್ಲಿ ಮದುವೆಯಾಗಿದ್ದ ದಂಪತಿ, ಆಗಸ್ಟ್ ನಲ್ಲಿ ಆರತಕ್ಷತೆ ಸಹ ಆಚರಿಸಕೊಂಡಿದ್ದರು. ಗರ್ಭಿಣಿ ಪತ್ನಿಯನ್ನು ಕಳೆದ ಶುಕ್ರವಾರ ಮಿರ್ಯಾಲಗುಡದ ಜ್ಯೋತಿ ಆಸ್ಪತ್ರೆಗೆ ಪತಿ ಪ್ರಣಯ್ ಕರೆದೊಯ್ದಿದ್ದ ಸಮಯದಲ್ಲಿ ಅಪರಿಚಿತ ದುಷ್ಕರ್ಮಿಗಳು ಬಂದು ಪ್ರಣಯ್ ನನ್ನು ಪತ್ನಿಯೆದರೇ ಕೊಂದಿದ್ದರು.

ಜಾತಿ ಪದ್ಧತಿಯೇ ಕಾರಣ
ಈ ಘಟನೆ ದೇಶದೆಲ್ಲೆಡೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತನ್ನ ಪತಿಯ ಸಾವಿಗೆ ತನ್ನ ತಂದೆ ಮಾರುತಿ ರಾವ್ ಅವರೇ ಕಾರಣ ಎಂದು ಅಮೃತಾ ದೂರಿದ್ದಾರೆ. ಜಾತಿ ಪದ್ಧತಿಯಿಂದಾಗಿ ಇಂದು ಪ್ರಣಯ್ ಹತ್ಯೆಯಾಗಿದೆ, ಈ ದೇಶದಲ್ಲಿ ಮೊದಲು ಜಾತಿಪದ್ಧತಿಯನ್ನು ಬೇರು ಸಮೇತ ಕಿತ್ತೆಸಯಬೇಕು ಎಂದು ಅಮೃತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply












Click it and Unblock the Notifications