ರಾಹುಲ್ ಗಾಂಧಿ 'ಅಂಬಾನಿ, ಅದಾನಿ' ನಿಂದನೆ ನಿಲ್ಲಿಸಿದ್ದೇಕೆ?: ಕಾಂಗ್ರೆಸ್‌ಗೆ ಕಂತೆ ಕಂತೆ ಹಣ ಬಂದಿದೆಯೇ?: ಪ್ರಧಾನಿ ಪ್ರಶ್ನೆ
ತೆಲಂಗಾಣ, ಮೇ 08: ಭಾರತದ ಸಾರ್ವತ್ರಿಕ ಚುನಾವಣೆ ಮೂರು ಹಂತದ ಚುನಾವಣೆಗೆ ಮತದಾನ ಪೂರ್ಣಗೊಂಡಿದೆ. ಇದರ ಬೆನ್ನಲ್ಲೆ ತೆಲಂಗಾಣ ಚುನಾವಣಾ ರ‍್ಯಾಲಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿಯವರು 'ಅಂಬಾನಿ-ಅದಾನಿ' ಮೇಲಿನ ನಿಂದನೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಖಾರವಾಗಿ ಪ್ರಶ್ನಿಸಿದ್ದಾರೆ.
ಬುಧವಾರ ತೆಲಂಗಾಣದ ಕರೀಂನಗರದಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ಚುನಾವಣಾ ಮೆರವಣಿಗೆ ನಡೆಸಿ ನಂತರ ಮಾತನಾಡಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸದರಿ 2024 ರ ಲೋಕಸಭೆ ಚುನಾವಣೆ ಘೋಷಣೆ ಬಳಿಕ ದೊಡ್ಡ ದೊಡ್ಡ ಉದ್ಯಮಿಗಳ ಮೇಲಿನ ನಿಂದನೆ ನಿಲ್ಲಿಸಿದ್ದಾರೆ. ನಿಂದನೆ ನಿಲ್ಲಿಸಲು ಅವರು ಉದ್ಯಮಿಗಳೊಂದಿಗಿನ "ಡೀಲ್" ಮಾಡಿಕೊಂಡಿದ್ದಾರೆಯೇ? ಎಂದು ಪ್ರಧಾನಿ ವ್ಯಂಗ್ಯವಾಡಿದರು.

ನಾಲ್ಕೈದು ವರ್ಷಗಳಿಂದ ದೇಶದ ಬೃಹತ್ ಉದ್ಯಮಿಗಳಾದ ಅಂಬಾನಿ-ಅದಾನಿಗಳ ಮೇಲೆ ನಿಂದನೆ, ವಾಗ್ದಾಳಿ ನಡೆಸುತ್ತಿದ್ದ ಕಾಂಗ್ರೆಸ್‌ನ ರಾಜಕುಮಾರ (ಶೆಹಜಾದಾ) ಏಕಾಏಕಿ ನಿಲ್ಲಿಸಿಬಿಟ್ಟಿದ್ದಾರೆ. ಏಕೆ, ಅವರಿಂದ ಭಾರಿ ಮೊತ್ತದ ಹಣ ಪಡೆದಿದ್ದೀರಿಯೇ? ನಿಮ್ಮ ಅವರ ಮಧ್ಯೆ ಡೀಲ್ ನಡೆದಿದೆಯೇ ಎಂದು ಅವರು ಖಾರವಾಗಿ ಕೇಳಿದ್ದಾರೆ.
'ರಾಗಾ' ನಿಲ್ಲಿಸಲು ಕಪ್ಪು ಹಣ ಬಂದಿದೆಯೇ?
ರಾಹುಲ್ ಗಾಂಧಿ ನಿತ್ಯ ಬೆಳಗ್ಗೆ ಎದ್ದ ತಕ್ಷಣ ಬಿಜೆಪಿ-ಅಂಬಾನಿ, ಅದಾನಿ ವಿರುದ್ಧ ಜಪ ಮಾಡುತ್ತಿದ್ದರು. ರಫೇಲ್ ವಿವಾದವು ಉಲ್ಟಾ ಹೊಡೆದ ತಕ್ಷಣ ಅವರು ಹೊಸ ಜಪ ಆರಂಭಿಸಿದರು. ಸದರಿ ಚುನಾವಣೆ ಘೋಷಣೆ ಬಳಿಕ ಉದ್ಯಮಿಗಳಿಗೆ ಬೈಯೋದನ್ನು ನಿಲ್ಲಿಸಲು ಎಷ್ಟು ಚೀಲ ಕಪ್ಪು ಹಣ ಪಡೆದಿದ್ದೀರಿ ಎಂದರು.
ರಾಹುಲ್ ಗಾಂಧಿ ಅಂಬಾನಿ-ಅದಾನಿಯಿಂದ ಎಷ್ಟು ತೆಗೆದುಕೊಂಡಿದ್ದಾರೆ. ಆತನ ಬಳಿ ಎಷ್ಟು ಚೀಲ ಕಪ್ಪು ಹಣವಿದೆ? ನೋಟು ತುಂಬಿದ ಚೀಗಳು ಕಾಂಗ್ರೆಸ್ ಗೆ ತಲುಪಿವೆಯೇ? ಬೈಯುವುದನ್ನು ಬಿಡಲು ರಾತ್ರೋರಾತ್ರಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದರು. ಈ ಕುರಿತು ನೀವು ದೇಶದ ಜನರಿಗೆ ಉತ್ತರ ಕೊಡಿ ಎಂದು ಹೇಳಿದರು.

ಬಿಜೆಪಿ ಅಧಿಕಾರ ಬಂದಾಗಿನಿಂದ 'ರಾಗಾ' ಟೀಕೆ
ಕೇಂದ್ರದಲ್ಲಿ ಬಿಜೆಪಿಯ ಎರಡನೇ ಭಾರಿಗೆ ಅಧಿಕಾರಕ್ಕೆ ಬಂದ ಬಳಿಕ, ಪ್ರಧಾನಿ ಮೋದಿಯವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಹಾಗೂ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಜತೆಗಿನ ಸಂಬಂಧದ ಬಗ್ಗೆ ರಾಹುಲ್ ಗಾಂಧಿ ಕಟುವಾಗಿ ಟೀಕಿಸಿದ್ದರು.
ಪ್ರಧಾನಿ ಮೋದಿಯವರು ಕಾರ್ಪೊರೇಟ್ ಗುಂಪುಗಳಿಗೆ, ದೊಡ್ಡ ದೊಡ್ಡ ಉದ್ಯಮಿಗಳ ಪರ ಇದ್ದಾರೆ. ಬಡವರನ್ನು ಬಿಟ್ಟು ಅವರನ್ನು ಅಭಿವೃದ್ಧಿ ಮಾಡುತ್ತಾರೆ ಎಂದೆಲ್ಲ ರಾಹುಲ್ ಗಾಂಧಿ ನಿಂದಿಸಿದ್ದರು. ಸಂಸತ್ ಅಧಿವೇಶನ ಸೇರಿದಂತೆ ಇನ್ನಿತರ ತಮ್ಮ ಭಾಷಣಗಳಲ್ಲಿ ಇದೇ ರೀತಿ ದಾಳಿ ನಡೆಸಿದ್ದರು. ಅನೇಕ ಆರೋಪಗಳನ್ನು ಪ್ರಧಾನಿ ವಿರುದ್ಧ ಮಾಡಿದ್ದರು.
ಮೋದಿ ಬಾಯಲ್ಲಿ ಅಂಬಾನಿ-ಅದಾನಿ ಹೆಸರು: ಷೇರು ಏರಿಕೆ
ವಿಶೇಷವೆಂದರೆ ಇಂದು ಮಧ್ಯಾಹ್ನ 12:56ಕ್ಕೆ ಪ್ರಧಾನಿ ಮೋದಿ ತೆಲಂಗಾಣದಲ್ಲಿ ಅಂಬಾನಿ, ಅದಾನಿ ಕುರಿತು ಮಾತನಾಡಿದ್ದೇ ತಡ, ಇಬ್ಬರು ಉದ್ಯಮಿಗಳ ಷೇರುಗಳಲ್ಲಿ ಏರಿಕೆ ಆಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇ1.68 ರಷ್ಟು ಏರಿಕೆಯಾಗಿ 2,851.05 ರೂಗಳಲ್ಲಿ ವಹಿವಾಟು ನಡೆಸಿವೆ. ಇತ್ತ ಅದಾನಿ ಎಂಟರ್‌ಪ್ರೈಸಸ್ ಶೇ.1.40 ರಷ್ಟು ಏರಿಕೆಯಾಗಿ ಪ್ರತಿ ಷೇರಿಗೆ 2,875 ರೂ. ವಹಿವಾಟು ನಡೆಸಿವೆ ಎಂದು ತಿಳಿದು ಬಂದಿದೆ.












Click it and Unblock the Notifications