ರೈತ ಪ್ರತಿಭಟನೆಯಲ್ಲಿ ಭಾಗಿಯಾದ ತೆಲಂಗಾಣ ಬಿಜೆಪಿ ಮುಖ್ಯಸ್ಥ: ಪೊಲೀಸ್ ವಶಕ್ಕೆ
ಹೈದರಾಬಾದ್, ಜ. 06: ಕಾಮರೆಡ್ಡಿ ಪಟ್ಟಣದ ಕಲೆಕ್ಟರೇಟ್ ಕಚೇರಿಯ ಹೊರಗೆ ರೈತರ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾದ ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಅವರನ್ನು ಶುಕ್ರವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಮ್ಮ ಕೃಷಿ ಭೂಮಿಯನ್ನು ಕೈಗಾರಿಕಾ ವಲಯದಲ್ಲಿ ಸೇರಿಸಲಾಗಿದೆ ಎಂದು ಆರೋಪಿಸಿ ಸ್ಥಳೀಯ ರೈತರು ಪ್ರತಿಭಟನೆ ನಡೆಸುತ್ತಿದ್ದು, ರೈತರು ಬಂದ್‌ಗೆ ಕರೆ ನೀಡಿದ್ದಾರೆ. ಇದರ ನಡುವೆಯೇ ಈ ಬೆಳವಣಿಗೆಗಳು ನಡೆದಿವೆ.
ಟ್ವಿಟರ್‌ನಲ್ಲಿ, ಬಿಜೆಪಿಯ ರಾಜ್ಯ ಘಟಕವು ಪೊಲೀಸರು ಮತ್ತು ರೈತರ ನಡುವಿನ ಘರ್ಷಣೆಯ ಚಿತ್ರಗಳನ್ನು ಹಂಚಿಕೊಂಡಿದೆ.

"ಪೊಲೀಸರು ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ" ಎಂದು ಆರೋಪಿಸಿದೆ. ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಬಂಧನಕ್ಕೆ ಪ್ರತಿಭಟನಾಕಾರರು ಆವೇಶಭರಿತರಾಗಿ ಪ್ರತಿಭಟಿಸಿದ್ದಾರೆ ಎಂದು ಎಂದು ಪಕ್ಷವು ಹೇಳಿದೆ.
#WATCH | Telangana BJP president Bandi Sanjay and farmers protest outside the Collectorate office in Kamareddy against the municipal master plan and the TRS government. pic.twitter.com/SwY758cgC1
— ANI (@ANI) January 6, 2023
ಬಂಡಿ ಸಂಜಯ್ ಬಂಧನದ ಮೊದಲು ಇತರ ಫೋಟೋಗಳಲ್ಲಿ, ಬಂಡಿ ಸಂಜಯ್ ಪ್ರತಿಭಟನಾಕಾರರೊಂದಿಗೆ ಸಂವಹನ ನಡೆಸುತ್ತಿರುವುದನ್ನು ಕಾಣಬಹುದು. "ಕೈಗಾರಿಕಾ ವಲಯಕ್ಕೆ ತಮ್ಮ ಭೂಮಿಯನ್ನು ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ರೈತರು ನಿರ್ಧರಿಸಿದ್ದಾರೆ. ಟಿಆರ್‌ಎಸ್ ಸರ್ಕಾರದ ನಿರ್ಧಾರಗಳಿಂದ ಅವರು ಕೋಪಗೊಂಡಿದ್ದಾರೆ" ಎಂದು ಬಿಜೆಪಿ ಹೇಳಿದೆ.
"ಇಲ್ಲಿ ನಡೆದಿರುವ ಘರ್ಷಣೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್‌ರನ್ನು ಬಂಧಿಸಲಾಗಿದ್ದು ಜಿಲ್ಲೆಯಿಂದ ಹೊರಗೆ ಕಳುಹಿಸುತ್ತೇವೆ" ಎಂದು ಕಾಮರೆಡ್ಡಿ ಎಸ್‌ಪಿ ಬಿ ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ರೈತರ ಪ್ರತಿಭಟನೆಯು ಆಡಳಿತಾರೂಢ ಟಿಆರ್‌ಎಸ್ ಮತ್ತು ಬಿಜೆಪಿ ನಡುವಿನ ಇತ್ತೀಚಿನ ದೊಡ್ಡ ಬಿಕ್ಕಟ್ಟಾಗಿದೆ. 2024 ರ ರಾಷ್ಟ್ರೀಯ ಚುನಾವಣೆಯಲ್ಲಿ ಹೋರಾಟಕ್ಕೆ ತಯಾರಿ ನಡೆಸುತ್ತಿರುವ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ವಿರುದ್ಧ ವಿವಿಧ ವಿಷಯಗಳ ಮೇಲೆ ಬಿಜೆಪಿ ವಾಗ್ದಾಳಿ ನಡೆಸುತ್ತಿದೆ.
ಇನ್ನು, ಕಾಮರೆಡ್ಡಿ ಪಟ್ಟಣದಲ್ಲಿ ರೈತರ ಬಂದ್ ಕರೆಗೆ ಬಿಜೆಪಿಯ ಹೊರತಾಗಿ ಕಾಂಗ್ರೆಸ್ ಕೂಡ ಬೆಂಬಲ ನೀಡಿತು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ರೈತರು ಮತ್ತು ಕಾರ್ಮಿಕರು ಮತ್ತು ವಿರೋಧ ಪಕ್ಷಗಳ ಮುಖಂಡರು ಸೇರಿದಂತೆ ಸುಮಾರು 100 ಜನರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.












Click it and Unblock the Notifications