Get Updates
Get notified of breaking news, exclusive insights, and must-see stories!

Telangana opinion poll 2023: ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾದ ಬಿಜೆಪಿ, ಕೆಸಿಆರ್‌ಗೂ ಸಂಕಷ್ಟ- ನಿಖರ ಸಮೀಕ್ಷೆಯ ಅಂಕಿಅಂಶ

ಹೈದರಾಬಾದ್‌, ನವೆಂಬರ್‌ 05: ತೆಲಂಗಾಣ ವಿಧಾನಸಭೆ ಚುನಾವಣೆಯು ಭಾರೀ ಚರ್ಚೆಯಲ್ಲಿದೆ. ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಭಾರತ್ ರಾಷ್ಟ್ರ ಸಮಿತಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಸತತ ಎರಡು ಬಾರಿ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಏರಿದ್ದ ಚಂದ್ರಶೇಖರ್‌ ರಾವ್‌ ಅವರಿಗೆ ಕಾಂಗ್ರೆಸ್‌ನಿಂದ ಪೈಪೋಟಿ ಎದುರಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಕೇಂದ್ರದಲ್ಲಿರುವ ಬಿಜೆಪಿ ಪರಿಸ್ಥಿತಿ ಮಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.

ತೆಲಂಗಾಣ ಚುನಾವಣೆ 2023

ತೆಲಂಗಾಣದ ಒಟ್ಟು 119 ಸ್ಥಾನಗಳಿಗೆ ನವೆಂಬರ್ 30 ರಂದು ಏಕ-ಹಂತದ ಮತದಾನ ನಡೆಯಲಿದೆ. ಡಿಸೆಂಬರ್ 3 ರಂದು ಫಲಿತಾಂಶ ಹೊರಬೀಳಲಿದೆ.

ತೆಲಂಗಾಣ ಚುನಾವಣೆ: ದಿನಾಂಕಗಳು

ತೆಲಂಗಾಣ ಚುನಾವಣೆ- 2023 ಮತದಾನದ ದಿನಾಂಕ: ನವೆಂಬರ್ 30

ತೆಲಂಗಾಣ ಚುನಾವಣೆ- 2023 ಫಲಿತಾಂಶದ ದಿನಾಂಕ: ಡಿಸೆಂಬರ್ 3

ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದ ದಿನಾಂಕ: ನವೆಂಬರ್ 3, 2023 (ಶುಕ್ರವಾರ)

ನಾಮನಿರ್ದೇಶನಗಳ ಕೊನೆಯ ದಿನಾಂಕ: ನವೆಂಬರ್ 10, 2023 (ಶುಕ್ರವಾರ)

ನಾಮನಿರ್ದೇಶನಗಳ ಪರಿಶೀಲನೆಯ ದಿನಾಂಕ: ನವೆಂಬರ್ 13, 2023 (ಸೋಮವಾರ)

ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕ: ನವೆಂಬರ್ 15, 2023 (ಬುಧವಾರ)

ಮತದಾನದ ದಿನಾಂಕ: ನವೆಂಬರ್ 30, 2023 (ಗುರುವಾರ)

ಎಣಿಕೆಯ ದಿನಾಂಕ: ಡಿಸೆಂಬರ್ 3, 2023 (ಭಾನುವಾರ)

Telangana assembly election 2023: Here is the Final Opinion poll accurate stats, info, details

ತೆಲಂಗಾಣ ಚುನಾವಣೆಯ ಪ್ರಮುಖ ವಿಚಾರಗಳು

ಕಲ್ಯಾಣ ಯೋಜನೆಗಳು, ರಾಜ್ಯದ ಸಾಲ ಮತ್ತು ಪಕ್ಷದೊಳಗಿನ ಆಂತರಿಕ ಕಚ್ಚಾಟ ಸೇರಿದಂತೆ ಹಲವಾರು ಸಮಸ್ಯೆಗಳು ಈ ಚುನಾವಣೆಯಲ್ಲಿ ಪ್ರಮುಖವಾಗಿವೆ. ಎಲ್ಲಾ ಪಕ್ಷಗಳು ಉತ್ತಮ ಪಿಂಚಣಿ, ನಿರುದ್ಯೋಗ ಸೌಲಭ್ಯಗಳು, ವಿಮೆ, ರಾಜ್ಯ ಸರ್ಕಾರದ ಉದ್ಯೋಗ ಸೇರಿದಂತೆ ಕಲ್ಯಾಣ ಯೋಜನೆಗಳನ್ನು ಘೋಷಿಸುವ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿವೆ.

ಮುಂಬರುವ ಚುನಾವಣೆಯಲ್ಲಿ ಆಡಳಿತಾರೂಢ ಬಿಆರ್‌ಎಸ್ ಪಕ್ಷ ಕಾಂಗ್ರೆಸ್‌ನಿಂದ ತೀವ್ರ ಪೈಪೋಟಿ ಎದುರಿಸುತ್ತಿದೆ. ಬಿಆರ್‌ಎಸ್ ಪಕ್ಷವು ತನ್ನ ಅಭ್ಯರ್ಥಿಗಳನ್ನು ಎಲ್ಲರಿಗಿಂತ ಮೊದಲು ಘೋಷಿಸುವ ಮೂಲಕ ಕೊಂಚ ಲಾಭ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಟಿಕೆಟ್ ಸಿಗದ ಪಕ್ಷದ ಬಂಡಾಯ ನಾಯಕರು ಚುನಾವಣೆಗೂ ಮುನ್ನ ಆಡಳಿತ ಪಕ್ಷದ ವಿರುದ್ಧ ಕೆಲಸ ಮಾಡುವ ನಿರೀಕ್ಷೆ ಇದೆ.

ತೆಲಂಗಾಣ- 2018ರ ಫಲಿತಾಂಶಗಳು

119 ಸದಸ್ಯ ಬಲದ ವಿಧಾನಸಭೆಯಲ್ಲಿ ಕೆಸಿಆರ್‌ ನೇತೃತ್ವದ ಬಿಆರ್‌ಎಸ್ 88 ಸ್ಥಾನಗಳನ್ನು ಗಳಿಸಿತ್ತು. ಅಂದರೆ ಶೇ 46.87 ಮತಗಳನ್ನು ಗಳಿಸುವ ಮೂಲಕ ಪ್ರಚಂಡ ಗೆಲುವು ಸಾಧಿಸಿತು. ನಂತರ ಕಾಂಗ್ರೆಸ್ 21, ಎಐಎಂಐಎಂ 7, ಟಿಡಿಪಿ 2 ಮತ್ತು ಬಿಜೆಪಿ 1 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದವು.

Telangana assembly election 2023: Here is the Final Opinion poll accurate stats, info, details

ಬಿಆರ್‌ಎಸ್‌- 88
ಕಾಂಗ್ರೆಸ್ - 21
ಎಐಎಂಐಎಂ- 7
ಇತರೆ - 2
ಬಿಜೆಪಿ- 1

ಪ್ರಮುಖ ರಾಜಕೀಯ ಪಕ್ಷಗಳು ಮತ್ತು ಮೈತ್ರಿಗಳು

ತೆಲಂಗಾಣ ಪ್ರಸ್ತುತ ಭಾರತ್ ರಾಷ್ಟ್ರ ಸಮಿತಿ ಪ್ರಮುಖ ಪಕ್ಷವಾಗಿದೆ. ಕಾಂಗ್ರೆಸ್ ಪ್ರಮುಖ ವಿರೋಧ ಪಕ್ಷವಾಗಿದ್ದು, ಬಿಜೆಪಿ ರಾಜ್ಯದ ಪ್ರಮುಖ ಪಕ್ಷಗಳಲ್ಲಿ ಒಂದಾಗಲು ಪ್ರಯತ್ನಿಸುತ್ತಿದೆ.

ಆಡಳಿತಾರೂಢ ಬಿಆರ್‌ಎಸ್‌ಗೆ ಪ್ರಮುಖ ಎದುರಾಳಿಯಾಗಿ ಹೊರಹೊಮ್ಮಲು ಬಿಜೆಪಿ ತೀವ್ರ ಪ್ರಯತ್ನ ನಡೆಸುತ್ತಿದೆ. ಆದರೆ, ಈ ವರೆಗೆ ರಾಜ್ಯದ ಜನರ ಮೇಲೆ ಯಾವುದೇ ಪರಿಣಾಮ ಬೀರಲು ಬಿಜೆಪಿ ಸಫಲವಾಗಿಲ್ಲ.

Telangana assembly election 2023: Here is the Final Opinion poll accurate stats, info, details

ಹ್ಯಾಟ್ರಿಕ್ ಸಾಧನೆ ಮಾಡಲು ಬಿಆರ್‌ಎಸ್‌ ತನ್ನ ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳ ಮೇಲೆ ಮತಗಳನ್ನು ಸೆಳೆಯಲು ಯತ್ನಿಸುತ್ತಿದೆ. ನೆರೆಯ ಕರ್ನಾಟಕದಲ್ಲಿ ಪಕ್ಷದ ಅದ್ಭುತ ಗೆಲುವನ್ನು ಪುನರಾವರ್ತಿಸಲು ಕಾಂಗ್ರೆಸ್ ಮುಂದಾಗಿದೆ. ಕೆಸಿಆರ್‌ ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರಗಳಲ್ಲಿ ಬಿಜೆಪಿ ನಿರತವಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಅಸಾದುದ್ದೀನ್ ಓವೈಸಿ ಅವರ ಅದಿಲಾಬಾದ್ ಮತ್ತು ನಿಜಾಮಾಬಾದ್ ಜಿಲ್ಲೆಗಳಲ್ಲಿ ಸ್ಪರ್ಧೆಗೆ ಇಳಿದಿದೆ. ಇದರ ಹೊರತಾಗಿ ಹೈದರಾಬಾದ್‌ನ ಕನಿಷ್ಠ ಒಂಬತ್ತು ಸ್ಥಾನಗಳಲ್ಲಿ ಸ್ಪರ್ಧಿಸಲು ಯೋಜಿಸುತ್ತಿದೆ. ಮುಸ್ಲಿಂ ಮತದಾರರಲ್ಲಿ ಪಕ್ಷವು ಸಾಕಷ್ಟು ಪ್ರಭಾವವನ್ನು ಹೊಂದಿದೆ.

ಸ್ಮಾಲ್‌ ಬಾಕ್ಸ್‌ ಇಂಡಿಯಾ ಸಮೀಕ್ಷೆ

ಕರ್ನಾಟಕದ ಚುನಾವಣೆ ಕುರಿತು ನಿಟಕ ಸಮೀಕ್ಷೆ ನೀಡಿದ್ದ ಸ್ಮಾಲ್‌ ಬಾಕ್ಸ್‌ ಇಂಡಿಯಾ ತೆಲಂಗಾಣದ ಸಮೀಕ್ಷೆಯನ್ನು ನೀಡಿದೆ.

ಸ್ಮಾಲ್‌ ಬಾಕ್ಸ್‌ ಇಂಡಿಯಾ ಸಮೀಕ್ಷೆ ಪ್ರಕಾರ, ತೆಲಂಗಾಣದಲ್ಲಿ ಕಾಂಗ್ರೆಸ್‌ ಪಕ್ಷವು 50 ರಿಂದ 56 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಬಿಆರ್‌ಎಸ್‌ ಪಕ್ಷವು 48 ರಿಂದ 59 ಕ್ಷೇತ್ರಗಳಲ್ಲಿ ಗೆಲುವ ಸಾಧಿಸಲಿದೆ. ಬಿಜೆಪಿ 2 ರಿಂದ 4 ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಎಐಎಂಐಎಂ 5 ರಿಂದ 6 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+