• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಣಯ್ ಪ್ರಣಯಕ್ಕೆ 'ಅಮೃತ' ಸಿಂಚನ ನೀಡಿದ ಲವ್ಲಿ ವಿಡಿಯೋ!

|

ಹೈದರಾಬಾದ್, ಸೆಪ್ಟೆಂಬರ್ 21: ತೆಲಂಗಾಣದಲ್ಲಿ ಮರ್ಯಾದಾ ಹತ್ಯೆಗೊಳಗಾದ ಪ್ರಣಯ್ ನೆನಪನ್ನು ಹಚ್ಚ ಹಸಿರಾಗಿರಿಸುವಂಥ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

'ಗರ್ಭಪಾತಕ್ಕೆ ಅಪ್ಪ ಒತ್ತಾಯಿಸಿದ್ದು ಯಾಕೆ ಅಂತ ಈಗ ತಿಳಿಯುತ್ತಿದೆ!'

ಮದುವೆಯ ನಂತರ ದಂಪತಿ ಒಟ್ಟಾಗಿ ತೆಗೆಸಿಕೊಂಡ ಈ ವಿಡಿಯೋ ನೋಡಿದರೆ 'ಈ ಮುದ್ದು ಜೋಡಿಗೆ ಯಾರ ಕಣ್ಣೂ ಬೀಳದಿರಲಿ, ಅವರು ಸುಖವಾಗಿ ಬಾಳಲಿ' ಎಂದು ಮನಸ್ಸು ಹಾರೈಸುತ್ತೆ. ಆದರೆ ಹಾಗೆ ಹಾರೈಸೋಕೂ, ಪ್ರಣಯ್ ಬದುಕಿರುವುದು ಈ ವಿಡಿಯೋದಲ್ಲಿ ಮಾತ್ರ ಎಂಬುದು ನೆನಪಾದಾಗ ವಿಷಾದವಾಗುತ್ತದೆ.

ಯಾವ ಸಿನಿಮಾ ನಾಯಕ-ನಾಯಕಿಗೂ ಕಡಿಮೆ ಇಲ್ಲದಂತೆ ಈ ಮುದ್ದು ಜೋಡಿ ತೆಗೆಸಿಕೊಂಡ ವಿಡಿಯೋವನ್ನು ಅಮೃತಾ ಅವರು ಒಂದು ತಿಂಗಳ ಹಿಂದೆ ಪೋಸ್ಟ್ ಮಾಡಿದ್ದರು. ಇದನ್ನು 6.8 ಸಾವಿರ ಜನ ಲೈಕ್ ಮಾಡಿದ್ದರೆ, 1.5 ಸಾವಿರ ಜನ ಶೇರ್ ಮಾಡಿದ್ದರು. ನೂರಾರು ಜನ ದಂಪತಿಗೆ ಅಭಿನಂದನೆ, ಶುಭಾಶಯ ಕೋರಿದ್ದರು.

'ಅಮೃತಾ, ನೀನು ನಿಮ್ಮಪ್ಪನನ್ನು ಎಂದೋ ಸಾಯಿಸಿದ್ದೀಯಾ!'

ಮನೆಯವರ ವಿರೋಧದ ಹೊರತಾಗಿಯೂ ಅಂತರ್ಜಾತೀಯ ವಿವಾಹವಾಗಿದ್ದ ಅಮೃತಾ ಮತ್ತು ಪ್ರಣಯ್ ಸೆ.14 ರಂದು ಮಿರ್ಯಾಲಗುಡದ ಜ್ಯೋತಿ ಆಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಹೊರಗಿದ್ದ ಪ್ರಣಯ್ ನನ್ನು ಕೆಲ ಅಪರಿಚಿತ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಪ್ರಣಯ್ ಸಾವಿಗೆ ತನ್ನ ತಂದೆ ಮಾರುತಿ ರಾವ್ ಅವರೇ ಕಾರಣ. ಅವರಲ್ಲದೆ ಇನ್ನ್ಯಾರೂ ಪ್ರಣಯ್ ನನ್ನು ಕೊಲ್ಲುವುದಕ್ಕೆ ಸಾಧ್ಯವೇ ಇಲ್ಲ ಎಂದು ಅಮೃತಾ ದೂರಿದ್ದರು. ಅಮೃತಾ ತಂದೆಯೇ ಈ ಕೊಲೆ ಮಾಡಿಸಿದ್ದು ಎಂಬುದಕ್ಕೆ ಕೆಲವು ಪುರಾವೆಗಳೂ ಸಿಕ್ಕಿದ್ದು, ಅವರೊಂದಿಗೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.(ವಿಡಿಯೋ ಕೃಪೆ: ಮೊಮೆಂಟ್ ಮೇಕರ್ಸ್, ಫೆಸ್ ಬುಕ್)

ಜೋಡಿಯನ್ನು ಒಪ್ಪಿಕೊಂಡಿದ್ದ ಪ್ರಣಯ್ ಕುಟುಂಬಸ್ಥರು

ಜೋಡಿಯನ್ನು ಒಪ್ಪಿಕೊಂಡಿದ್ದ ಪ್ರಣಯ್ ಕುಟುಂಬಸ್ಥರು

ಈ ಜೋಡಿಯನ್ನು ಪ್ರಣಯ್ ಅವರ ಕುಟುಂಬಸ್ಥರು ಮೊದಲು ಒಪ್ಪಿಕೊಳ್ಳದಿದ್ದರೂ, ಕ್ರಮೇಣ ಒಪ್ಪಿಕೊಂಡಿದ್ದರು. ಪ್ರಣಯ್ ಕುಟುಂಬ ಇವರನ್ನು ಒಪ್ಪಿಕೊಂಡ ನಂತರ ಆಗಸ್ಟ್ ನಲ್ಲಿ ಇಬ್ಬರ ಅದ್ಧೂರಿ ಆರತಕ್ಷತೆ ಸಹ ನಡೆದಿತ್ತು. ಈ ಸಂದರ್ಭದಲ್ಲಿ ಶೂಟ್ ಮಾಡಿದ ವಿಡಿಯೋವೇ ಇದೀಗ ವೈರಲ್ ಆಗಿದೆ.

'ಅಮೃತಾ ಮಾಡಿದ್ದು ಸರೀನಾ?' ಫೇಸ್ ಬುಕ್ ನಲ್ಲಿ ಜನ ಏನಂತಾರೆ?

ಅಮೃತಾಗೆ ಸರ್ಕಾರಿ ಕೆಲಸದ ಭರಸೆ

ಅಮೃತಾಗೆ ಸರ್ಕಾರಿ ಕೆಲಸದ ಭರಸೆ

ಪ್ರಣಯ್ ಹತ್ಯೆಯ ಒಂದು ವಾರದ ನಂತರ ಅಮೃತಾ ಮತ್ತು ಪ್ರಣಯ್ ಕುಟುಂಬಸ್ಥರನ್ನು ಬೇಟಿಯಾದ ತೆಲಂಗಾಣ ಸಚಿವ ಜಿ.ಜಗದೀಶ್ ರೆಡ್ಡಿ, ತೆಲಂಗಾಣ ಸರ್ಕಾರದ ಕಡೆಯಿಂದ ಪ್ರಣಯ್ ಪತ್ನಿ ಅಮೃತಾ ಅವರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ತೆಲಂಗಾಣ ಹತ್ಯೆ: ಅಮ್ಮನಿಗೆ ಮಾಡಿದ ಫೋನ್ ಕರೆಗಳೇ ಪತಿಯ ಜೀವಕ್ಕೆ ಮುಳುವಾದವೇ?

ತಾಯಿಯ ಕರೆಯೇ ಮುಳುವಾಯ್ತು!

ತಾಯಿಯ ಕರೆಯೇ ಮುಳುವಾಯ್ತು!

ತೆಲಂಗಾಣವನ್ನು ಬೆಚ್ಚಿ ಬೀಳಿಸಿದ ಈ ಘಟನೆಯಲ್ಲಿ ತಾಯಿ-ಮಗಳ ಫೋನ್ ಸಂಭಾಷಣೆಯೇ ಪ್ರಣಯ್ ಪ್ರಾಣಕ್ಕೆ ಮುಳುವಾಗಿದ್ದು ದುರಂತದ ವಿಷಯ. ಅಮೃತಾ ಗರ್ಭಿಣಿ ಎಂಬುದು ತಿಳಿಯುತ್ತಿದ್ದಂತೆಯೇ ಅವಳ ತಾಯಿ ಮನಸ್ತಾಪವನ್ನೆಲ್ಲ ಮರೆತು ಮಗಳಿಗೆ ಫೊನ್ ಮಾಡಲು ಆರಂಭಿಸಿದ್ದರು. ಮಗಳ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುವಂತೆ ಕೇಳುತ್ತಿದ್ದರು. ಈ ಸಂದರ್ಭದಲ್ಲಿ ಒಂದೆರಡು ಬಾರಿ ಮಗಳೊಂದಿಗೆ ಮಾತನಾಡಿದ್ದ ಮಾರುತಿ ರಾವ್, ಗರ್ಭಪಾತ ಮಾಡಿಸಿಕೊಳ್ಳುವಂತೆಯೂ ಪೀಡಿಸಿದ್ದರು. ಆದರೆ ಅದಕ್ಕೆ ಅಮೃತಾ ಒಪ್ಪಿರಲಿಲ್ಲ. ಅಮೃತಾ ಮತ್ತು ಪ್ರಣಯ್ ಚಲನವಲನಗಳ ಬಗ್ಗೆ ಅಮೃತಾ ತಾಯಿಯ ಬಳಿ ಮಾರುತಿ ರಾವ್ ಮಾಹಿತಿ ಕಲೆಹಾಕುತ್ತಿದ್ದ. ಆದರೆ ಪತಿಯ ಮನಸ್ಸಿನಲ್ಲಿ ಪ್ರಣಯ್ ನನ್ನು ಸಾಯಿಸುವ ಕ್ರೂರ ಕೊಲೆಗಾರನಿದ್ದಾನೆ ಎಂಬುದು ಗೊತ್ತಿಲ್ಲದೆ, ಅಮೃತಾ ತಾಯಿ ಎಲ್ಲವನ್ನೂ ಮುಗ್ಧವಾಗಿ ಹಂಚಿಕೊಳ್ಳುತ್ತಿದ್ದರು. ಸೆ.14 ರಂದು ಮಿರ್ಯಾಲಗುಡದ ಜ್ಯೋತಿ ಆಸ್ಪತ್ರೆಯ ಬಳಿಯೂ ಪ್ರಣಯ್ ಬರುವ ವಿಷಯವನ್ನು ಹೀಗೆಯೇ ತಿಳಿದುಕೊಂಡ ಮಾರುತಿ ರಾವ್ ಪ್ರಣಯ್ ಹತ್ಯೆಯನ್ನು ಸುಪಾರಿ ಕಿಲ್ಲರ್ ಗಳ ಮೂಲಕ ಮಾಡಿಸಿದ್ದರು.

ಸ್ಫೋಟಕ ಮಾಹಿತಿ: ಪ್ರಣಯ್ ಹತ್ಯೆಗೆ 4 ಬಾರಿ ನಡೆದಿತ್ತು ಸಂಚು!

ಜಾತಿಯ ಕಾರಣಕ್ಕೆ ಬರ್ಬರ ಹತ್ಯೆ

ಜಾತಿಯ ಕಾರಣಕ್ಕೆ ಬರ್ಬರ ಹತ್ಯೆ

ಅಂತರ್ಜಾತೀಯ ವಿವಾಹವಾಗಿ, ಪೋಷಕರ ವಿರೋಧದ ನಡುವೆಯೂ ಮನೆಬಿಟ್ಟು ತೆರಳಿದ ಕಾರಣಕ್ಕೆ ಅಮೃತಾ ಅವರ ತಂದೆ ಮಾರುತಿ ರಾವ್ ಅವರಿಗೆ, ತಮ್ಮ ಘನತೆಗೆ ಕುಂದುಂಟಾಗಿದೆ' ಎಂಬ ನೋವಿತ್ತು. ಆ ಹತಾಶೆಯಲ್ಲಿ ಸುಮಾರು ನಾಲ್ಕು ಬಾರಿ ಪ್ರಣಯ್ ನನ್ನು ಹತ್ಯೆಗೈಯ್ಯಲು ಅವರು ಮಾಡಿದ್ದ ಪ್ರಯತ್ನಗಳು ವಿಫಲವಾಗಿದ್ದವು. ಆದರೆ ಸೆ.14 ರ ಅವರ ಪ್ರಯತ್ನ ಕೈಗೂಡಿತು. ಜಾತಿ, ಪ್ರತಿಷ್ಟೆಯ ಹುಚ್ಚಿಗೆ ತನ್ನ ಗರ್ಭಿಣಿ ಮಗಳನ್ನೇ ತಂದೆ ವಿಧವೆಯನ್ನಾಗಿ ಮಾಡಿದರು ಎಂದು ದೇಶದಾದ್ಯಂತ ಜನ ಆಕ್ರೋಶ ವ್ಯಕ್ತಪಡಿಸಿದ್ದರು.

'ಪ್ರಣಯ್ ನನಗೆ ನೀಡಿದ ಅತ್ಯಮೂಲ್ಯ ಉಡುಗೊರೆ ನನ್ನ ಗರ್ಭದಲ್ಲಿದೆ'

ಇನ್ನಷ್ಟು pranay amrutha ಸುದ್ದಿಗಳುView All

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Telangana caste killing: Here is a beautiful video of Pranay and Amrutha. Pranay and Amrutha who are intercaste couple got married on January of this year. On Sep 14th Pranay was killed by Aamrutha's father.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more