ಲಾಲೂ ಪುತ್ರನ ವಿವಾಹಕ್ಕೆ ಶುಭಕೋರುವ ಪೋಸ್ಟರ್ ವಿವಾದ
ಪಾಟ್ನ, ಮೇ 13: ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಹಾಗೂ ಐಶ್ವರ್ಯ ರಾಯ್ ಅವರ ಮದುವೆಗೆ ಶುಭ ಕೋರುವ ಪೋಸ್ಟರ್ ವಿವಾದಕ್ಕೆ ಕಾರಣವಾಗಿದೆ.
ತೇಜ್ ಪ್ರತಾಪ್ ಯಾದವ್ ಮದುವೆಗೂ ಮುನ್ನ ಪಾಟ್ನಾ ಹಲವು ಕಡೆ ಬ್ಯಾನರ್ ಹಾಕಲಾಗಿತ್ತು. ಒಂದು ಬ್ಯಾನರ್ ನಲ್ಲಿ ತೇಜ್ ಪ್ರತಾಪ್ ಯಾದವ್ ಮತ್ತು ಐಶ್ವರ್ಯ ರಾಯ್ ಮದುವೆಗೆ ಹಾರ್ದಿಕ ಸ್ವಾಗತ ಕೋರಿ ಹಾಕಲಾದ ಫ್ಲೆಕ್ಸ್ ಬ್ಯಾನರ್‌ಗಳಲ್ಲಿ ತೇಜ್ ಪ್ರತಾಪ್ ಮತ್ತು ಐಶ್ವರ್ಯ ರೈ ಶಿವ-ಪಾರ್ವತಿಯಾಗಿ ಚಿತ್ರಿಸಿದ್ದಾರೆ.

ಮೇವು ಹಗರಣ ಸಂಬಂಧ ಜೈಲು ಶಿಕ್ಷೆಗೆ ಗುರಿಯಾಗಿರುವ ಲಾಲೂ ಪ್ರಸಾದ್ ಯಾದವ್ ಅವರು ಮಗನ ಮದುವೆಗಾಗಿ ಬೇಲ್ ಪಡೆದುಕೊಂಡು ಬಂದಿದ್ದಾರೆ. ಆರು ವಾರಗಳ ಕಾಲ ಜಾಮೀನಿನ ಮೇಲೆ ಹೊರ ಬಂದಿರುವ ಲಾಲೂ ಅವರು ಸರಿ ಸುಮಾರು 20 ಸಾವಿರ ಅತಿಥಿಗಳನ್ನು ಬರಮಾಡಿಕೊಳ್ಳಲಿದ್ದಾರೆ.
ಮದುವೆ ಮನೆಯಲ್ಲಿ ಗೊಂದಲ: ಬಿಹಾರ ಸಿಎಂ ನಿತೀಶ್ ಕುಮಾರ್, ಯುಪಿ ಸಿಎಂ ಅಖಿಲೇಶ್ ಯಾದವ್, ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಸೇರಿದಂತೆ ಹಲವಾರು ಗಣ್ಯರು ಮದುವೆಗೆ ಆಗಮಿಸಿದ್ದಾರೆ.












Click it and Unblock the Notifications