TDP Support BJP: ದೆಹಲಿ ಸುಗ್ರೀವಾಜ್ಞೆಗೆ ಟಿಡಿಪಿ ಬೆಂಬಲ, ಎಎಪಿಗೆ ಹಿನ್ನಡೆ
ನವದೆಹಲಿ, ಆಗಸ್ಟ್ 02: ದೆಹಲಿಯ ಸುಗ್ರೀವಾಜ್ಞೆ ಜಾರಿ ವಿಚಾರದಲ್ಲಿ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ನಿರ್ಧಾರವನ್ನು ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷ (TDP) ಸಂಸತ್ತಿನ ಮಸೂದೆಯನ್ನು ಬೆಂಬಲಿಸುವುದಾಗಿ ಘೋಷಿಸಿದೆ. ವಿಶೇಷವೆಂದರೆ ಈ ಟಿಡಿಪಿ ಪಕ್ಷವು ಬಿಜೆಪಿಯ ಎದುರಾಳಿ ಪಕ್ಷವಾಗಿದ್ದರೂ ಸಹ ಬೆಂಬಲ ಘೋಷಿಸಿರುವುದು ಕುತೂಹಲ ಕೆರಳಿಸಿದೆ.
ದೆಹಲಿಯಲ್ಲಿ ಆಡಳಿತದಲ್ಲಿರುವ ಆಮ್ ಆದ್ಮಿ ಪಕ್ಷ (ಎಎಪಿ) ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯನ್ನು ವಿರೋಧಿಸಿತಲ್ಲದೇ, ಕೇಂದ್ರ ವಿಪಕ್ಷಗಳನ್ನು ಸಂಸತ್ತಿನಲ್ಲಿ ಸುಗ್ರೀವಾಜ್ಞೆ ಆಕ್ಷೇಪಿಸುವಂತೆ ಬೆಂಬಲ ಸಹ ಪಡೆದಿದೆ. ಆದರೆ ಟಿಡಿಪಿ ಪಕ್ಷ ಎಎಪಿ ವಿರುದ್ಧ ಮತ್ತು ಬಿಜೆಪಿ ನಿರ್ಧಾರಕ್ಕೆ ಬೆಂಬಲ ನೀಡಲು ಸಜ್ಜಾಗಿದೆ.

2018ರಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (NDA)ಯಿಂದ ಬೇರ್ಪಟ್ಟು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಈ ಟಿಡಿಪಿ ಮಂಡಿಸಿತ್ತು. ಇದೀಗ ಪ್ರತಿಪಕ್ಷಗಳ ವಿರುದ್ಧವೇ ನಿರ್ಧಾರ ಪ್ರಕಟಿಸಿದೆ.
YSRCP ಸಹ ಸುಗ್ರೀವಾಜ್ಞೆಗೆ ಬೆಂಬಲ
ಲೋಕಸಭೆಯಲ್ಲಿ ಮೂವರು ಸಂಸದರು ಮತ್ತು ರಾಜ್ಯಸಭೆಯಲ್ಲಿ ಒಬ್ಬ ಸಂಸದರನ್ನು ಹೊಂದಿರುವ ಟಿಡಿಪಿಯು ಈ ನಿರ್ಧಾರವು ಸಂಸತ್‌ನಲ್ಲಿ ಬಿಜೆಪಿ ಬಲವನ್ನು ಹೆಚ್ಚಿಸುತ್ತದೆ. ದೆಹಲಿ ಎನ್‌ಸಿಟಿ (ತಿದ್ದುಪಡಿ) ಮಸೂದೆ 2023 ಅನ್ನು ಸಂಸತ್ತಿನಲ್ಲಿ ಅಂಗೀಕರಿಸಲು ತೀರ್ಮಾನಿಸಲಾಗಿದೆ. ಇನ್ನೂ ಟಿಡಿಪಿ ಜೊತೆಗೆ ಆಂಧ್ರ ಪ್ರದೇಶದ ಪ್ರಾದೇಶಿಕ ಪಕ್ಷವಾದ YSRCP ಸಹ ಬೆಂಬಲಿಸುತ್ತಿದೆ.
ಈ ಮೂಲಕ ದೆಹಲಿ ಎಎಪಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ತುಸು ಹಿನ್ನಡೆ ಆಗಿದೆ. ಒಡಿಶಾ ಸಿಎಂ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ (BJD) ಸುಗ್ರೀವಾಜ್ಞೆ ವಿರುದ್ಧ ಭವಿಷ್ಯ ನುಡಿದಿದ್ದರು. ರಾಜ್ಯಸಭೆಯಲ್ಲಿ ಒಂಬತ್ತು ಸಂಸದರನ್ನು ಹೊಂದಿರುವ ಬಿಜೆಡಿಯು ಬಿಜೆಪಿ ನೇತೃತ್ವದ ಎನ್‌ಡಿಎ ಸ್ವಂತವಾಗಿ ಪೂರ್ಣ ಬಹುಮತ ಹೊಂದದೆ ಅರ್ಧಕ್ಕೆ ಬಿಟ್ಟು ಹೋಗುತ್ತದೆ ಎಂದು ಹೇಳಿದೆ.

109 ಸಂಸದರು ಮತ ಚಲಾಯಿಸುವ ಸಾಧ್ಯತೆ
ಜಗನ್ ರೆಡ್ಡಿಯವರ ವೈಎಸ್‌ಆರ್ ಪಕ್ಷವು ರಾಜ್ಯಸಭೆಯಲ್ಲಿ ಒಂಬತ್ತು ಮತ್ತು ಲೋಕಸಭೆಯಲ್ಲಿ 22 ಸದಸ್ಯರನ್ನು ಹೊಂದಿದೆ. ವಿವಾದಾತ್ಮಕ ದೆಹಲಿ ಸೇವಾ ಸುಗ್ರೀವಾಜ್ಞೆ ವಿರುದ್ಧ ಸಂಸತ್‌ನಲ್ಲಿ 26 ಸದಸ್ಯರ ವಿರೋಧ ಪಕ್ಷಗಳ ಒಕ್ಕೂಟದ ಭಾರತ ಮತ್ತು ಕೆಲವು ಸ್ವತಂತ್ರರು ಸೇರಿದಂತೆ ಸುಮಾರು 109 ಸಂಸದರು ಮತ ಚಲಾಯಿಸುವ ನಿರೀಕ್ಷೆ ಇದೆ.
ಕೇಂದ್ರ ಸರ್ಕಾರದ ದೆಹಲಿಯ NCT (ತಿದ್ದುಪಡಿ) ಮಸೂದೆಯು ದೆಹಲಿಯ ಅಧಿಕಾರಶಾಹಿಗಳ ನಿಯಂತ್ರಿಸುವ ಸಲುವಾಗಿ ಹೊರಡಿಸಲಾಗಿದೆ ಎನ್ನಲಾಗಿದೆ. ಆದರೆ ಕೇಂದ್ರವು ಸುಪ್ರೀಂ ಕೋರ್ಟ್ ಆದೇಶವನ್ನು ಬೈಪಾಸ್ ಮಾಡಲು ಇದನ್ನು ಹೊರಡಿಸಿದೆ ಅಂತಲೂ ಆರೋಪ ಮಾಡಲಾಗಿದೆ.












Click it and Unblock the Notifications