ತಮಿಳು, ಬೆಂಗಾಲಿ ಕಲಿಯುತ್ತಿರುವ ಅಮಿತ್ ಶಾಗೆ ಕನ್ನಡ ಕಾಣಿಸುತ್ತಿಲ್ವಾ?

Subscribe to Oneindia Kannada

ನವದೆಹಲಿ, ನವೆಂಬರ್ 21: ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಗದ್ದುಗೆ ಏರಬೇಕು ಎಂಬ ಉದ್ದೇಶವನ್ನು ಬಿಜೆಪಿ ಹಲವು ವರ್ಷಗಳಿಂದ ಹೊಂದಿದೆ. ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಕೇಸರಿ ಪಕ್ಷದ ಈ ಹಪಾಹಪಿ ಮತ್ತಷ್ಟು ಹೆಚ್ಚಾಗಿದೆ.

ಈ ಎರಡೂ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶದಿಂದ ಬಿಜೆಪಿ ಹೂಡದೆ ಉಳಿದ ತಂತ್ರಗಳಿಲ್ಲ. ರಜನಿಕಾಂತ್ ರನ್ನು ಪಕ್ಷಕ್ಕೆ ಕರೆತರುವ ಯತ್ನದಿಂದ ಹಿಡಿದು ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಮುಕುಲ್ ರಾಯ್ ರನ್ನೂ ಪಕ್ಷಕ್ಕೆ ಕರೆತರಲಾಗಿದೆ.

ಕನ್ನಡ ಕಲಿಯೋದಿಲ್ವಾ ಮಿ. ಅಮಿತ್ ಶಾ ಅಂದ ಸಿಎಂಗೆ ಟ್ವಿಟ್ಟಿಗರ ಕಿವಿಮಾತು!

ಇದೀಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಮಿಳು ಮತ್ತು ಬೆಂಗಾಲಿ ಭಾಷೆ ಕಲಿಯುತ್ತಿದ್ದಾರೆ. ಪ್ರಾದೇಶಿಕ ಭಾಷೆಗಳಲ್ಲಿ ಸಂವಹನ ಮಾಡುವುದು ಹೆಚ್ಚು ಸೂಕ್ತ ಎಂಬ ಕಾರಣಕ್ಕೆ ಶಾ ಸ್ಥಳೀಯ ಭಾಷಾ ಕಲಿಕೆಯ ತಂತ್ರಕ್ಕೆ ಮೊರೆ ಹೋಗಿದ್ದಾರೆ.

Target Tamil Nadu, West Bengal: Amit Shah learning Tamil and Bengali

ವೃತ್ತಿಪರ ಅಧ್ಯಾಪಕರಿಂದ ಶಾ ತಮ್ಮ ಭಾಷಾ ಕಲಿಕೆಯನ್ನು ಮುಂದುವರಿಸಿದ್ದು ಕಳೆದ ಒಂದು ವರ್ಷದಿಂದ ನಿರಂತರ ತರಗತಿಗಳು ನಡೆಯುತ್ತಿವೆ. ಸದ್ಯಕ್ಕೆ ಶಾ ಎರಡೂ ಭಾಷೆಗಳಲ್ಲಿ ಮಾತನಾಡುವಷ್ಟು ಹಿಡಿತ ಸಾಧಿಸಿದ್ದಾರೆ. ಆದರೆ ನಿರರ್ಗಳವಾಗಿ ಮಾತನಾಡಲು ಮತ್ತಷ್ಟು ಅಧ್ಯಯನದ ಅಗತ್ಯವಿದೆ ಎಂದು ಮೂಲಗಳು ಹೇಳಿವೆ.

ಇದರ ಜತೆಗೆ ಜತೆಗೆ ಅಸ್ಸಾಮಿ ಮತ್ತು ಮಣಿಪುರಿ ಭಾಷೆಗಳನ್ನೂ ಕಲಿಯುತ್ತಿದ್ದಾರೆ. ಅಲ್ಲದೆ ಒತ್ತಡದಿಂದ ಹೊರ ಬರಲು ಶಾಸ್ತ್ರೀಯ ಸಂಗೀತ ಮತ್ತು ಯೋಗವನ್ನೂ ಕಲಿಯುತ್ತಿದ್ದಾರೆ.

ಕನ್ನಡ ಕಲಿಕೆಗೆ ಶಾಗಿಲ್ಲ ಮನಸ್ಸು

ಕರ್ನಾಟಕದಲ್ಲಿಯೂ ಬಿಜೆಪಿ ಅಧಿಕಾರ ಹಿಡಿಯಬೇಕು ಎಂದು ಶತಾಯ ಗತಾಯ ಪ್ರಯತ್ನ ನಡೆಸುತ್ತಿದೆ. ಆದರೆ ಕನ್ನಡ ಕಲಿಕೆಗೆ ಬಿಡಿ ಸ್ವಲ್ಪ ಮಟ್ಟಿನ ಅಧ್ಯಯನಕ್ಕೂ ಅಮಿತ್ ಶಾ ಮುಂದಾಗಿಲ್ಲ.

ಕರ್ನಾಟಕದಲ್ಲಿ ಯಾವ ಭಾಷೆಯಲ್ಲೂ ಮಾತನಾಡಿದರೂ ಇಲ್ಲಿನ ಜನ ಸ್ವೀಕರಿಸುತ್ತಾರೆ ಎಂಬ ಅಸಡ್ಡೆಯಿಂದ ಕನ್ನಡ ಕಲಿಕೆಯ ಬಗ್ಗೆ ಯೋಚನೆಯನ್ನೂ ಶಾ ಮಾಡಿಲ್ಲ.

ತಮಿಳು, ಬೆಂಗಾಲಿ ಕಲಿತು ಅಲ್ಲಿನ ಸ್ಥಳೀಯ ಸಂಸ್ಕೃತಿ ಜತೆ ಬೆರೆತು ಅಧಿಕಾರ ಹಿಡಿಯಬೇಕು ಎಂಬ ಮನಸ್ಸು ಅಮಿತ್ ಶಾಗೆ ಇದೆ. ಆದರೆ ಕನ್ನಡ ಕಲಿತು ಇಲ್ಲಿನ ಸಂಸ್ಕೃತಿಯನ್ನು ಅರಿತು ಅಧಿಕಾರ ಹಿಡಿಯಬೇಕು ಎಂಬ ಮನಸ್ಸು ಅವರಿಗಿಲ್ಲದಿರುವುದು ವಿಪರ್ಯಾಸವೇ ಸರಿ.

ಈ ಅಸಡ್ಡೆ, ಅಹಂಕಾರಗಳಿಂದಲೇ ಕರ್ನಾಟಕ ಬಿಜೆಪಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
National BJP president Amit Shah has started learning Bengali and Tamil. His aim is to communicate in local language and to win West Bengal and Tamil Nadu elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ