ರಿಯಾಲಿಟಿ ಷೋದಲ್ಲಿ ಶಿಕ್ಷಕ ಪತಿಯ ಹತ್ಯೆ ಒಪ್ಕೊಂಡ ಶಿಕ್ಷಕಿ

ಕಾರ್ಯಕ್ರಮ ಮುಗಿಯುತ್ತಿದ್ದಂತೆ ಆರೋಪಿ ಮಹಿಳೆ ಡಿ ಸುಮತಿ ತಿರುವೂರು ಜಿಲ್ಲಾ ನ್ಯಾಯಾಲಯದಲ್ಲಿ ಶರಣಾದರು. ಆಕೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕುತೂಹಲದ ಸಂಗತಿಯೆಂದರೆ ಸುಮತಿ ಪತಿ ಎಸ್ ಧನಶೇಖರ್ (49) ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿದ್ದಾರೆ ಎಂದು ಪರಿಭಾವಿಸಲಾಗಿತ್ತು.
ಸುಮತಿ ಶರಣಾದ 2 ದಿನಗಳ ನಂತರ ಆಕೆಯ ಪ್ರಿಯಕರ ಟಿ ರಾಜನ್ (49) ಸಹ ಪೊಲೀಸರಿಗೆ ಶರಣಾಗಿದ್ದಾನೆ. ಆರೋಪಿಗಳಿಬ್ಬರೂ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮೃತ ಧನಶೇಖರ್ ಸರಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿದ್ದರು. ಗಮನಾರ್ಹವೆಂದರೆ ಸುಮತಿ ಸಹ ಅರೆ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.
ಮರಕ್ಕಡೈನಲ್ಲಿ ಸುಮತಿ ತಮ್ಮ ಮನೆಯಲ್ಲೇ ಮೇ 14ರಂದು ಪತಿ ಧನಶೇಖರ್ ಅವರಿಗೆ ವಿಷವುಣ್ಣಿಸಿ ಸಾಯಿಸಿದ್ದಳು. ಮೃತ ರಾಜನ್ ಅವರ ಸೋದರ ಕಣ್ಣದಾಸನ್ ಎದುರು ಸಹ ಸುಮತಿ ತಪ್ಪೊಪ್ಪಿಕೊಂಡಿದ್ದರು. ಪಾಪ ಪ್ರಜ್ಞೆ ಹೆಚ್ಚಾಗಿ ಇತ್ತೀಚೆಗೆ ಟಿವಿ ರಿಯಾಲ್ಟಿ ಷೋದಲ್ಲಿ ಭಾಗವಹಿಸಿದ ಸುಮತಿ, ತನ್ನ ಪತಿಯನ್ನು ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದರು.
ತಿರುವೂರು ಪೊಲೀಸರು ಸುಮತಿ ಮತ್ತು ರಾಜನ್ ಅವರಿಬ್ಬರ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications