''ನಾನು ಮಾತನಾಡಿರುವ ಆಡಿಯೋ ಕಟ್ಟುಕಥೆ..'' ಎಂದ ಪಿಟಿಆರ್
ಚೆನ್ನೈ ಏಪ್ರಿಲ್ 22: ನನ್ನ ಭಾಷಣದ ಆಡಿಯೋ ಎಂದು ಹೇಳಿಕೊಂಡು ಬಿಡುಗಡೆ ಮಾಡಿದ ವಿಡಿಯೋ ಕಟ್ ಅಂಡ್ ಪೇಸ್ಟ್ ಮಾಡಲಾಗಿದೆ ಎಂದು ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಟ್ವಿಟರ್ ನಲ್ಲಿ ವಿವರಣೆ ನೀಡಿದ್ದಾರೆ. ಜೊಎತೆಗ ಇದು ಡಿಎಂಕೆಗೆ ಕಳಂಕ ತರಲು ಮಾಡಿದ ಪ್ಲ್ಯಾನ್ ಎಂದು ಪಿಟಿಆರ್ ಹೇಳಿದ್ದಾರೆ.
ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಮಾತನಾಡಿದ್ದಾರೆ ಎಂಬ ಆಡಿಯೋವೊಂದು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದೇ ಆಡಿಯೋವನ್ನು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ತಮ್ಮ ಟ್ವಿಟರ್ ಪೇಜ್ ನಲ್ಲಿ ಬಿಡುಗಡೆ ಮಾಡಿದ್ದರು. ಅಲ್ಲದೆ ಇಂಗ್ಲಿಷ್ ಸಂಭಾಷಣೆಯ ತಮಿಳು ಅನುವಾದವನ್ನು ವೀಡಿಯೊದಲ್ಲಿ ಹಂಚಿಕೊಳ್ಳಲಾಗಿದೆ.

ಈ ಆಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ ಮತ್ತು ಟೀಕಿಸಿದ್ದಾರೆ. ಅದರಲ್ಲೂ ತಮಿಳುನಾಡಿನ ಬಿಜೆಪಿ ನಾಯಕ ಅಣ್ಣಾಮಲೈ ಈ ವಿಚಾರವನ್ನು ಪ್ರಸ್ತಾಪಿಸಿ ತೀವ್ರ ಟೀಕೆ ಮಾಡಿದ್ದಾರೆ.
My statement on the 26-second malicious fabricated audio clip pic.twitter.com/KM85dogIgh
— Dr P Thiaga Rajan (PTR) (@ptrmadurai) April 22, 2023
ಈ ನಿಟ್ಟಿನಲ್ಲಿ ಡಿಎಂಕೆ ಸರಕಾರ ಯಾವುದೇ ವಿವರಣೆ ನೀಡದೆ ಮೌನವಹಿಸಿರುವುದು ತಮಗೆ ಮತ ಹಾಕಿದ ಜನತೆಗೆ ಮಾಡುತ್ತಿರುವ ಅನ್ಯಾಯ ಎಂಬುದನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅರಿತುಕೊಳ್ಳಬೇಕು ಎಂದು ಅಣ್ಣಾಮಲೈ ಹೇಳಿದ್ದರು.

ಈಗ ಆಡಿಯೋ ಬಿಡುಗಡೆಯಾಗಿರುವ ಬಗ್ಗೆ ಪಳನಿವೇಲ್ ತ್ಯಾಗರಾಜನ್ ಟ್ವಿಟ್ಟರ್ ನಲ್ಲಿ ವಿವರಣೆ ನೀಡಿದ್ದಾರೆ. ಡಿಎಂಕೆಗೆ ಕಳಂಕ ತರಲು ನನ್ನ ಭಾಷಣವನ್ನು ಬೇಕಾದ ರೀತಿಯಲ್ಲಿ ಕಟ್ ಅಂಡ್ ಪೇಸ್ಟ್ ಮಾಡಲಾಗಿದೆ ಎಂದಿದ್ದಾರೆ.
Except for the DMK IT Wing Dimwits, no one would believe this line of defence.
— K.Annamalai (@annamalai_k) April 22, 2023
What is stopping the state FM from calling for an “independent forensic analysis” of the audio?
₹30,000 Crores in a year - Thiru @mkstalin has a lot to explain to the people. (2/2)
ಈ ಸಂಬಂಧ ಪಳನಿವೇಲ್ ತ್ಯಾಗರಾಜನ್ ಅವರು ಎರಡು ಪುಟಗಳ ವಿಸ್ತೃತ ವಿವರಣೆ ನೀಡಿದ್ದಾರೆ. ಅದರಲ್ಲಿ ನಾನು ಮಾತನಾಡಿದ್ದೇನೆ ಎಂದು ಹರಿದಾಡುತ್ತಿರುವ ಈ ಆಡಿಯೋಗಳು ದುರುದ್ದೇಶಪೂರ್ವಕವಾಗಿ ಕಲ್ಪಿತವಾಗಿದ್ದು, ತಂತ್ರಜ್ಞಾನದ ಸಹಾಯದಿಂದ ಯಾರು ಬೇಕಾದರೂ ಇಂತಹ ಆಡಿಯೋ ರಚಿಸಬಹುದು ಎಂದು ಹೇಳಿದ್ದಾರೆ.
ಆಡಿಯೋ ಕ್ಲಿಪ್‌ನ ಸ್ಕ್ರೀನ್‌ಶಾಟ್ ಅನ್ನು ಸಹ ಅವರು ಪೋಸ್ಟ್ ಮಾಡಿದ್ದಾರೆ. ಇಂತಹ ಆರೋಪಗಳಿಗೆ ಉತ್ತರವೇ ಇಲ್ಲ ಎಂದು ಸಚಿವರು ಹೇಳಿದ್ದಾರೆ. ಯಾವುದೇ ನೈತಿಕ ತತ್ವಗಳಿಲ್ಲದ ನಿರ್ಲಜ್ಜ ರಾಜಕಾರಣಿಗಳಿಂದ ಈ ಆಡಿಯೋ ಪದೇ ಪದೇ ಹರಡುತ್ತಿದೆ ಎಂದು ಪಿಟಿಆರ್ ಗುಡುಗಿದ್ದಾರೆ.
ಈ ಆಡಿಯೋ ನಿಜವಲ್ಲ ಎಂಬುದು ಸಾರ್ವಜನಿಕವಾಗಿ ಬಿಡುಗಡೆಯಾಗಿ ಸ್ಪಷ್ಟವಾಗಿದೆ. ಸುಧಾರಿತ ತಂತ್ರಜ್ಞಾನವು ಸುಲಭವಾಗಿ ಲಭ್ಯವಿರುವ ದಿನಗಳಲ್ಲಿ ಇಂತಹ ನಕಲಿ ಆಡಿಯೊಗಳನ್ನು ರಚಿಸಲು ಸುಲಭವಾಗಿದೆ. ಅಂತಹ ಅನೇಕ ಆಡಿಯೊಗಳು ಮತ್ತು ವೀಡಿಯೊಗಳನ್ನು ದುರುದ್ದೇಶಪೂರಕವಾಗಿ ಬಿಡುಗಡೆ ಮಾಡಬಹುದು. ಇದರಲ್ಲಿ ಆಶ್ಚರ್ಯಪಡುವಂಥದ್ದೇನೂ ಇಲ್ಲ. ನಮ್ಮನ್ನು ವಿಭಜಿಸುವ ಇಂತಹ ದುರುದ್ದೇಶಪೂರಿತ ಪ್ರಯತ್ನಗಳು ಫಲಿಸುವುದಿಲ್ಲ ಎಂದು ಪಿಟಿಆರ್ ತಿರುಗೇಟು ಕೊಟ್ಟಿದ್ದಾರೆ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications