ತಿರುಚ್ಚಿ ಅಗ್ನಿದುರಂತದಲ್ಲಿ 16 ಜನ ಸಾವು, 15 ಮಂದಿಗೆ ಗಾಯ

Posted By:
Subscribe to Oneindia Kannada

ತಿರುಚ್ಚಿ, ಡಿಸೆಂಬರ್ 1: ತಮಿಳುನಾಡಿನ ತಿರುಚ್ಚಿಯ ಸ್ಟೋಟಕ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು 16 ಮಂದಿ ಮೃತರಾಗಿದ್ದಾರೆ. 15 ಮಂದಿಗೆ ಗಂಭೀರ ಗಾಯಗಳಾಗಿವೆ.

ಈ ಕಾರ್ಖಾನೆ ತಿರುಚ್ಚಿಯಿಂದ 40 ಕಿಲೋ ಮೀಟರ್ ದೂರದ ಮರುಗಪತಿಯಲ್ಲಿದ್ದು, ಸ್ಫೋಟದಲ್ಲಿ ಒಟ್ಟು 16 ಮಂದಿ ಮೃತಪಟ್ಟಿದ್ದಾರೆ.ಇವರಲ್ಲಿ ಎರಡು ಮೃತದೇಹಗಳು ಸಿಕ್ಕಿದೆ, ಅವಘಡವು ಗುರುವಾರ ಬೆಳಗ್ಗೆ 7.45 ಕ್ಕೆ ಸಂಭವಿಸಿದ್ದು, ಕಾರ್ಖಾನೆಯಲ್ಲಿ ಹದಿನಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಹೊರಗಿನವರಿಗೂ ಗಾಯಗಳಾಗಿದೆ ಎಂದು ಹೇಳಲಾಗಿದೆ. [ಕೋಲ್ಕತ್ತಾ ಎಸ್ ಎಸ್ ಕೆ ಎಂ ಆಸ್ಪತ್ರೆಯಲ್ಲಿ ಅಗ್ನಿ ಅವಘಡ]

tiruchy 2

ಈ ಕಟ್ಟಡದ ಬಳಿ ಮೂರು ಅಗ್ನಿ ಶಾಮಕ ವಾಹನಗಳು ಬಂದಿದ್ದು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿವೆ. ಹಾಗು 10 ಆ್ಯಂಬುಲೆನ್ಸ್ ಗಳು ಸೇವೆಗೆ ಮುಂದಾಗಿದೆ.

tiruchy 2

ಈ ಕಾರ್ಖಾನೆ ಇಲ್ಲಿ 25 ವರ್ಷದಿಂದ ಕಾರ್ಯ ನಿರ್ವಹಿಸುತ್ತಾ ಇತ್ತು. ಯಾವಗಲೂ ಈ ರೀತಿಯ ಅವಘಡ ಸಂಭವಿಸಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

tiruchy

ಇನ್ನು ಈ ಕಾರ್ಖಾನೆಯ ಕಟ್ಟಡದ ಬಹುಭಾಗ ನೆಲಸಮವಾಗಿದ್ದು ಮೃತರಾಗಿರುವ ಕಾರ್ಮಿಕರನ್ನು ಹುಡುಕಲು ಪೊಲೀಸ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಅಗ್ನಿದುರಂತಕ್ಕೆ ಕಾರಣವೇನು ಎಂದು ಇನ್ನೂ ತಿಳಿದು ಬಂದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least 10 people are feared dead after a blast at an explosives factory in Tamil Nadu's Tiruchirappalli district. Two bodies have already been recovered, officials said
Please Wait while comments are loading...