Cyclone Fengal: ಫೆಂಗಲ್ ಚಂಡಮಾರುತ- ಸಚಿವ ಕೆ ಪೊನ್ಮಡಿ ಮೇಲೆ ಕೆಸರು ಎಸೆದ ಗ್ರಾಮಸ್ಥರು!

ತಮಿಳುನಾಡಿನಲ್ಲಿ ಇಂದು ಕೂಡ ಧಾಕಾರವಾಗಿ ಮಳೆಯಾಗುತ್ತಿದೆ. ಕಳೆದ ಕೆಲ ದಿನಗಳಿಂದ ಬೆಂಬಿಡದೆ ಸುರಿಯುತ್ತಿರುವ ಮಳೆಗೆ ತಮಿಳುನಾಡಿನ ಜನ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಫೆಂಗಲ್ ಚಂಡಮಾರುತದ ಪ್ರಭಾವದಿಂದಾಗಿ ನೆರೆ ರಾಜ್ಯದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಮನೆಗಳು, ರಸ್ತೆಗಳು ನದಿಗಳಾಗಿ ಪರಿವರ್ತನೆಗೊಂಡಿವೆ. ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಇದಕ್ಕಾಗಿ ಸ್ಥಳ ಪರಿಶೀಲನೆಗೆಂದು ತೆರಳಿದ ತಮಿಳುನಾಡು ಅರಣ್ಯ ಸಚಿವರ ಮೇಲೆ ಸ್ಥಳೀಯರು ಕೋಪ ತೋರಿಸಿದ್ದಾರೆ. ಅವರ ಮೇಲೆ ಕೆಸರು ಎಸೆದು ಆಕ್ರೋಶ ಹೊರ ಹಾಕಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಇರುವೆಲ್ಪಟ್ಟು ಗ್ರಾಮದ ನಿವಾಸಿಗಳು ಮಂಗಳವಾರ (ಡಿಸೆಂಬರ್ 03) ಪ್ರವಾಹದಿಂದ ಉಂಟಾದ ಹಾನಿಯನ್ನು ವೀಕ್ಷಿಸಲು ಬಂದ ತಮಿಳುನಾಡು ಅರಣ್ಯ ಸಚಿವ ಕೆ ಪೊನ್ಮಡಿ ಅವರ ಮೇಲೆ ಕೆಸರು ಎಸೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಫೆಂಗಲ್ ಚಂಡಮಾರುತದಿಂದ ನಾನಾ ಸಮಸ್ಯೆಗಳನ್ನು ಅನುಭವಿಸಿದ ಪ್ರದೇಶದಲ್ಲಿ ಇರುವೆಲ್ಪಟ್ಟು ಗ್ರಾಮವೂ ಒಂದು. ಇಲ್ಲಿನ ಸಮಸ್ಯೆಗಳ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಈವರೆಗೂ ಪ್ರಯೋಜನವಾಗಿರಲಿಲ್ಲ. ಫೆಂಗಲ್ ಚಂಡಮಾರುತದಿಂದ ಪರಿಹಾರವೂ ಸರಿಯಾಗಿ ನೀಡದ ಬೆನ್ನಲ್ಲೆ ಜನರ ಕೋಪ ನೆತ್ತಿಗೇರಿತ್ತು. ಹೀಗಾಗಿ ಸಚಿವರು ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ ಚೆನ್ನೈ-ತಿರುಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ರಾಮದ ಜನ ಪ್ರತಿಭಟನೆಗೆ ಮುಂದಾಗಿದ್ದರು. ಇದೇ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

Tamil Nadu Minister k ponmudy visits areas affected by Cyclone Fengal Villagers throw mud

ಇರುವೆಲ್ಪಟ್ಟು ಗ್ರಾಮವನ್ನು ಪರಿಶೀಲಿಸುವಾಗ ವಿಲ್ಲುಪುರಂ ಜಿಲ್ಲೆಯಾದ್ಯಂತ ಫೆಂಗಲ್ ಚಂಡಮಾರುತದ ಪ್ರಭಾವ ಹೆಚ್ಚಾಗಿರುವುದು ಕಂಡು ಬಂದಿದೆ. ತಮ್ಮ ದೂರದ ಗ್ರಾಮವನ್ನು ಅಧಿಕಾರಿಗಳು ಎರಡು ದಿನಗಳಿಂದ ನಿರ್ಲಕ್ಷಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಕಾರಣಕ್ಕೆ ಕೋಪಗೊಂಡ ಸ್ಥಳೀಯರು ಜಮಾಯಿಸಿ ಸಚಿವರ ಮೇಲೆ ಕೆಸರು ಎಸೆದಿದ್ದಾರೆ. ಇದರಿಂದಾಗಿ ಸಚಿವರ ಬಿಳಿ ಅಂಗಿ ಹಾಗೂ ಅವರೊಂದಿಗೆ ಇದ್ದ ಪೊಲೀಸರು ಮತ್ತು ಇತರ ಅಧಿಕಾರಿಗಳ ಬಟ್ಟೆಗಳಿಗೆ ಕಪ್ಪು ಕಲೆ ಅಂಟಿರುವುದು ಕಂಡು ಬಂದಿದೆ. ನಾಲ್ಕು ಗಂಟೆಗೂ ಹೆಚ್ಚು ಕಾಲ ನಡೆದ ಪ್ರತಿಭಟನೆಯಿಂದ ಸಂಚಾರ ಸ್ಥಗಿತಗೊಂಡಿದ್ದು, ಚಂಡಮಾರುತದಿಂದ ಸಂತ್ರಸ್ತರಾದ ಜನರು ಸಚಿವರಿಗೆ ದೂರು ಸಲ್ಲಿಸಿದರು.

ಮಣ್ಣು ಎರಚಿದ ಬಗ್ಗೆ ಸಚಿವರು ಹೇಳಿದ್ದೇನು?

ಘಟನೆಯ ಬಗ್ಗೆ ಮಾಧ್ಯಮಗಳನ್ನು ಉದ್ದೇಶಿಸಿ ಚೆನ್ನೈನಲ್ಲಿ ಶೇಖರ್ ಬಾಬು ಅವರು ಮಾತನಾಡಿದರು. ಇದು ರಾಜಕೀಯ ಪ್ರೇರಿತ ಕೃತ್ಯ. ರಾಜಕೀಯ ಪಕ್ಷದ ಸದಸ್ಯರು ಹಾಗೂ ಅವರ ಸಂಬಂಧಿಯೊಬ್ಬರು ಮಣ್ಣು ಎಸೆದಿದ್ದಾರೆ ಎಂದು ಬಾಬು ಹೇಳಿದರು.

ಬಿಜೆಪಿಯಿಂದ ವೀಡಿಯೋ ಶೇರ್

ಬಿಜೆಪಿ ತಮಿಳುನಾಡು ಅಧ್ಯಕ್ಷ ಕೆ ಅಣ್ಣಾಮಲೈ ಅವರು ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಚೆನ್ನೈನಲ್ಲಿ ಫೋಟೋ ತೆಗೆಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ರಾಜಧಾನಿ ನಗರದಲ್ಲಿ ಏನಾಗುತ್ತಿದೆ ಎಂಬುದನ್ನು ಹೊರತುಪಡಿಸಿ ಬೇರೆ ಏನನ್ನೂ ನೋಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಸಂತ್ರಸ್ತರಿಗೆ ಪರಿಹಾರ ಧನ

ವಿಲ್ಲುಪುರಂ, ಕಡಲೂರು ಮತ್ತು ಕಲ್ಲಕುರಿಚಿ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆ ಮಾಡುವ ಸಚಿವರೊಂದಿಗೆ ಸ್ಟಾಲಿನ್ ಮಂಗಳವಾರ ಉನ್ನತ ಮಟ್ಟದ ಸಭೆ ಕರೆದಿದ್ದರು. ನಂತರ ಸಂತ್ರಸ್ತ ಕುಟುಂಬಗಳು ಅನುಭವಿಸಿದ ನಷ್ಟವನ್ನು ಪರಿಹರಿಸುವ ಉದ್ದೇಶದಿಂದ ಸ್ಟಾಲಿನ್ ಪರಿಹಾರ ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ. ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ಮತ್ತು ಹಾನಿಗೊಳಗಾದ ಮನೆಗಳಿಗೆ 10 ಸಾವಿರ ನೀಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+