ಮಾನವ ಹಕ್ಕು ಹೋರಾಟಗಾರ್ತಿ ಇರೋಮ್ ಶರ್ಮಿಳಾಗೆ ಶಾದಿ ಭಾಗ್ಯ!
ಕೊಡೈಕೆನಾಲ್, ಆಗಸ್ಟ್ 18: ಮಾನವ ಹಕ್ಕು ಹೋರಾಟಗಾರ್ತಿ 44 ವರ್ಷದ ಇರೋಮ್ ಶರ್ಮಿಳಾ ಅವರು ಆಗಸ್ಟ್ 17 ರಂದು ತಮ್ಮ ಬಹುಕಾಲದ ಗೆಳೆಯ ಬ್ರಿಟೀಶ್ ಮೂಲದ ಡೆಸ್ಮಂಡ್ ಕುಟಿನ್ಹೋ ಅವರನ್ನು ಮದುವೆಯಾದರು.
ತಮಿಳುನಾಡಿನ ಕೊಡೈಕೆನಾಲಿನಲ್ಲಿ ವಧು-ವರರ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ಮದುವೆ ಸಮಾರಂಭ ನಡೆಯಿತು. ವಧು-ವರರ ಕುಟುಂಬಸ್ಥರ್ಯಾರೂ ಮದುವೆಗೆ ಆಗಮಿಸಿರಲಿಲ್ಲ.

ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಹುಟ್ಟಿದ ಇರೋಮ್ ಶರ್ಮಿಳಾ, ಈಶಾನ್ಯ ರಾಜ್ಯಗಳಲ್ಲಿನ ಸೇನೆಯನ್ನು ಸರ್ಕಾರ ಹಿಂಪಡೆಯಬೇಕು ಎಂಬ ಬೇಡಿಕೆಯೊಂದಿಗೆ ಆಮರಣಾಂತ ಉಪವಾಸ ಕೈಗೊಂಡಿದ್ದರು. ಸತತ 16 ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ ಇರೋಮ್ ಶರ್ಮಿಳಾ 2016 ರಲ್ಲಿ ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟಿದ್ದರು.
2017 ರ ಮಣಿಪುರ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಇರೋಮ್, ಠೇವಣಿ ಕಳೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications