ಊಟದ ಪಾರ್ಸೆಲ್‌ನಲ್ಲಿ ಉಪ್ಪಿನಕಾಯಿ ಹಾಕದ ಹೋಟೆಲ್‌ಗೆ 35,025 ರೂಪಾಯಿ ದಂಡ!

ಊಟದ ಪಾರ್ಸೆಲ್‌ನಲ್ಲಿ ಉಪ್ಪಿನಕಾಯಿ ಹಾಕದ ಹಿನ್ನೆಲೆಯಲ್ಲಿ ಗ್ರಾಹಕನಿಗೆ ₹35,025 ಪರಿಹಾರ ನೀಡುವಂತೆ ತಮಿಳುನಾಡಿನ ಬಾಲಮುರುಗನ್‌ ಹೋಟೆಲ್‌ಗೆ ವಿಲ್ಲುಪುರಂ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ವಿಲ್ಲುಪುರಂನ ವಝುದರೆಡ್ಡಿ ನಿವಾಸಿಯಾದ ಸಿ ಆರೋಗ್ಯಸಾಮಿ ಅವರು 2022 ರ ನವೆಂಬರ್ 28 ರಂದು ಹೋಟೆಲ್ ಬಾಲಮುರುಗನ್‌ನಿಂದ 25 ಊಟಗಳನ್ನು ಖರೀದಿಸಿದರು, ಸಂಬಂಧಿಕರ ಮೊದಲ ಮರಣ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಯಸ್ಸಾದವರಿಗೆ ಊಟದ ಪಾರ್ಸೆಲ್‌ಗಳನ್ನು ವಿತರಿಸಲು ಹೋಟೆಲ್‌ನಿಂದ ಊಟವನ್ನು ಖರೀದಿ ಮಾಡಿದ್ದರು. ಹೋಟೆಲ್ ಊಟಕ್ಕೆ ಒಟ್ಟು ₹ 2,000 ಶುಲ್ಕ ವಿಧಿಸಿತು ಮತ್ತು ಆರೋಗ್ಯಸ್ವಾಮಿ ರಸೀದಿ ಕೇಳಿದರೂ, ಕೈಬರಹದ ಹಾಳೆಯನ್ನು ಹೋಟೆಲ್‌ನವರು ನೀಡಿ ಕಳಿಸಿದ್ದರು.

Tamil Nadu Eatery Fined Rs 35 025 for Missing Pickle in Meal Parcel

ಊಟವನ್ನು ವಿತರಿಸಿದ ನಂತರ, ಆರೋಗ್ಯಸಾಮಿ ಅವರು ಕೊಟೇಶನ್‌ನಲ್ಲಿ ಸೇರಿಸಲಾದ ಉಪ್ಪಿನಕಾಯಿ ಪಾರ್ಸೆಲ್‌ಗಳಲ್ಲಿ ಕಾಣೆಯಾಗಿದೆ ಎಂದು ತಿಳಿದುಕೊಂಡರು. ಹೋಟೆಲ್ ಆಡಳಿತ ಮಂಡಳಿಯನ್ನು ಸಂಪರ್ಕಿಸಿದಾಗ ಸಿಬ್ಬಂದಿ ತಲಾ ₹1 ಬೆಲೆಯ ಉಪ್ಪಿನಕಾಯಿ ಪ್ಯಾಕೆಟ್‌ಗಳನ್ನು ಸೇರಿಸಲು ಮರೆತಿರುವುದನ್ನು ಖಚಿತಪಡಿಸಿದರು. ನಾಪತ್ತೆಯಾದ ಉಪ್ಪಿನಕಾಯಿಗೆ ₹25 ಮರುಪಾವತಿಸುವಂತೆ ಆರೋಗ್ಯಸಾಮಿ ಒತ್ತಾಯಿಸಿದಾಗ ಹೋಟೆಲ್‌ನವರು ನಿರಾಕರಿಸಿದರು, ಮತ್ತು ಸರಿಯಾದ ಉತ್ತರ ಕೊಡದೇ ನಿರ್ಲಕ್ಷ್ಯ ತೋರಿದರು.

ಆರೋಗ್ಯಸಾಮಿ ಅವರು ಸೆಪ್ಟೆಂಬರ್ 2023 ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆಯೋಗದ ಅಧ್ಯಕ್ಷ ಡಿ ಸತೀಶ್ ಕುಮಾರ್ ಮತ್ತು ಸದಸ್ಯರಾದ ಎಸ್‌ಎಂ ಮೀರಾ ಮೊಹಿದೀನ್ ಮತ್ತು ಕೆ ಅಮಲಾ ಅವರು ದೂರಿನ ಬಗ್ಗೆ ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಎರಡೂ ಕಡೆಯ ಅಹವಾಲುಗಳನ್ನು ಆಲಿಸಿದ ಆಯೋಗವು ದೂರುದಾರರಿಗೆ ಉಂಟಾದ ಮಾನಸಿಕ ನೋವಿಗೆ ಪರಿಹಾರವಾಗಿ ₹30,000, ವ್ಯಾಜ್ಯ ವೆಚ್ಚಕ್ಕಾಗಿ ₹ 5,000 ಮತ್ತು ನಾಪತ್ತೆಯಾದ ಉಪ್ಪಿನಕಾಯಿ ಪ್ಯಾಕೆಟ್‌ಗಳಿಗೆ ₹ 25 ಒಟ್ಟು ₹ 35,025 ನೀಡುವಂತೆ ಹೋಟೆಲ್‌ಗೆ ಆದೇಶಿಸಿತು.

ಹೋಟೆಲ್ ಈ ಮೊತ್ತವನ್ನು 45 ದಿನಗಳಲ್ಲಿ ಪಾವತಿಸಬೇಕು, ವಿಫಲವಾದರೆ ಅವರು ಮೊತ್ತದ ಮೇಲೆ ಒಂಬತ್ತು ಪ್ರತಿಶತ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಎಂದು ಆಯೋಗ ಆದೇಶದಲ್ಲಿ ತಿಳಿಸಿದೆ. ಆರೋಗ್ಯಸಾಮಿ ಅವರು ಎಲ್ಲಾ ಗ್ರಾಹಕರು, ಸಾರ್ವಜನಿಕರು ಮತ್ತು ಪರಿಸರ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷರಾಗಿದ್ದಾರೆ ಎಂದು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+