ಆಯುಧ ಪೂಜೆಗೂ ಬಂತು AI: ದೇವರಿಗೆ ಆರತಿ ಬೆಳಗಿದ ಹ್ಯೂಮನಾಯ್ಡ್ ರೋಬೋಟ್, Video Viral

ಸಾಮಾನ್ಯವಾಗಿ ಆಯುಧ ಪೂಜೆಯೆಂದರೆ ನಾವು ದಿನನಿತ್ಯ ಬಳಸುವ ವಾಹನಗಳು, ಯಂತ್ರೋಪಕರಣಗಳು, ಆಯುಧಗಳು ಹಾಗೂ ಕಚೇರಿಯ ಪರಿಕರಗಳಿಗೆ ಪೂಜೆ ಸಲ್ಲಿಸುವ ಶತಮಾನಗಳ ಹಿಂದೂ ಸಂಪ್ರದಾಯ. ಆದರೆ, ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಆಯುಧ ಪೂಜೆ ಆಚರಣೆ ಈ ಬಾರಿ ಎಲ್ಲರಿಗಿಂತಲೂ ತೀರಾ ವಿಭಿನ್ನವಾಗಿತ್ತು. ಇಲ್ಲಿ ಯಂತ್ರಗಳನ್ನು ಕೇವಲ ಪೂಜಿಸುವ ವಸ್ತುವನ್ನಾಗಿ ನೋಡದೆ, ಆ ಯಂತ್ರಗಳೇ ನೇರವಾಗಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿತ್ತು.

ಹೌದು, ಆರ್.ಎಸ್. ಪುರಂನಲ್ಲಿರುವ ಮಿರಾಕಲ್ ಎಂಬ ಹೆಸರಾಂತ ರೊಬೊಟಿಕ್ಸ್ ಕಂಪನಿಯಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಹ್ಯೂಮನಾಯ್ಡ್ ರೋಬೋಟ್‌ಗಳು ಸಾಂಪ್ರದಾಯಿಕವಾಗಿ ದೇವರಿಗೆ ಆರತಿ ಬೆಳಗಿ, ಧೂಪ ದ್ರವ್ಯಗಳನ್ನ ಅರ್ಪಿಸಿ ಭಕ್ತಿಭಾವದಿಂದ ಪೂಜೆ ಸಲ್ಲಿಸಿವೆ.

Tamil Nadu AI Humanoid Robot Performing Aarti During Ayudha Puja In Coimbatore Goes Viral Now

ವೈರಲ್ ಆದ ಹ್ಯೂಮನಾಯ್ಡ್ ರೋಬೋಟ್ ಆರತಿ ವೀಡಿಯೊ

ದೇವರಿಗೆ ಪೂಜೆ ಸಲ್ಲಿಸುವ ರೋಬೋಟ್‌ನ ಈ ಅದ್ಭುತ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ವೀಕ್ಷಕರನ್ನು ಬೆರಗುಗೊಳಿಸಿದೆ. ವೈರಲ್ ಆಗಿರುವ ವೀಡಿಯೊದಲ್ಲಿ ಹ್ಯೂಮನಾಯ್ಡ್ ರೋಬೋಟ್ ಒಂದು ತನ್ನ ಯಾಂತ್ರಿಕ ಕೈಗಳಿಂದಲೇ ಕರ್ಪೂರ ಹಚ್ಚುವುದು ಮತ್ತು ದೇವರಿಗೆ ಆರತಿ ಬೆಳಗುವುದನ್ನ ಸ್ಪಷ್ಟವಾಗಿ ಕಾಣಬಹುದು.

ಶಿಕ್ಷಣ ಹಾಗೂ ಜನರ ನಡುವೆ ಜಾಗೃತಿ ಮೂಡಿಸುವ ವಿಶೇಷ ಉದ್ದೇಶದಿಂದ ಈ ಹ್ಯೂಮನಾಯ್ಡ್ ರೋಬೋಟ್‌ಗಳನ್ನ ಮಿರಾಕಲ್ ಸಂಸ್ಥೆ ಅಭಿವೃದ್ಧಿಪಡಿಸಿದೆ. ಸಾಮಾನ್ಯವಾಗಿ ಮನುಷ್ಯರು ಶ್ರದ್ಧಾಭಕ್ತಿಯಿಂದ ಮಾಡುವ ದೈನಂದಿನ ಪೂಜಾ ವಿಧಿವಿಧಾನಗಳನ್ನ ಈ ಕೃತಕ ಬುದ್ಧಿಮತ್ತೆ ಆಧಾರಿತ ರೋಬೋಟ್‌ಗಳು ಅತ್ಯಂತ ಅಚ್ಚುಕಟ್ಟಾಗಿ, ಯಾವುದೇ ಲೋಪವಿಲ್ಲದೆ ನಿರ್ವಹಿಸಿರುವುದು ನೆಟ್ಟಿಗರ ಅಚ್ಚರಿಗೆ ಕಾರಣವಾಗಿದೆ.

ಹಬ್ಬದ ಆಚರಣೆಗಳಲ್ಲಿ ರೋಬೋಟ್‌ಗಳನ್ನು ಕೇವಲ ಪ್ರದರ್ಶನದ ವಸ್ತುವಾಗಿ ಇಡದೆ, ಅವೇ ಸ್ವತಃ ದೇವರಿಗೆ ಪೂಜೆ ಮಾಡುವ ಮೂಲಕ ಈ ಬಾರಿಯ ಆಚರಣೆಗೆ ಹೊಸ ತಾಂತ್ರಿಕ ಸ್ಪರ್ಶ ನೀಡಲಾಗಿದೆ.

ಬಿಡಿಭಾಗಗಳಿಗೂ ವಿಶೇಷ ಪೂಜೆ

ಈ ವಿಶೇಷ ರೋಬೋಟ್ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಕೇವಲ ರೋಬೋಟ್‌ಗಳು ಪೂಜೆ ಮಾಡಿದ್ದಷ್ಟೇ ಅಲ್ಲದೆ, ಆ ರೋಬೋಟ್‌ಗಳನ್ನ ತಯಾರಿಸಲು ಬಳಸಲಾಗುವ ವಿವಿಧ ಯಾಂತ್ರಿಕ ಬಿಡಿಭಾಗಗಳಿಗೂ ಸಂಸ್ಥೆಯ ಸಿಬ್ಬಂದಿ ಹಿಂದೂ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು. ಯಂತ್ರಗಳಿಗೆ ಪೂಜೆ ಮಾಡುವ ನಮ್ಮ ಸಂಪ್ರದಾಯವನ್ನ ಮುಂದಿನ ಹಂತಕ್ಕೆ ಕೊಂಡೊಯ್ದಿರುವ ಈ ಆಚರಣೆಯು, ಅತ್ಯಾಧುನಿಕ ಎಐ ತಂತ್ರಜ್ಞಾನ ಹಾಗೂ ನಮ್ಮ ಹಳೆಯ ಸಂಪ್ರದಾಯಗಳ ನಡುವಿನ ಸುಂದರ ಬೆಸುಗೆಯನ್ನ ಸಾರುತ್ತದೆ.

ಹಿಂದೆಲ್ಲಾ ಕಾರ್ಖಾನೆಗಳು, ದೊಡ್ಡ ದೊಡ್ಡ ಕೈಗಾರಿಕಾ ವಲಯಗಳು ಹಾಗೂ ಕೇವಲ ಐಟಿ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿದ್ದ ಯಂತ್ರಗಳು ಮತ್ತು ರೋಬೋಟ್‌ಗಳು, ಇದೀಗ ಮನುಷ್ಯನ ದೈನಂದಿನ ಧಾರ್ಮಿಕ ಆಚರಣೆಗಳಿಗೂ, ಹಬ್ಬ ಹರಿದಿನಗಳಿಗೂ ಕಾಲಿಡುತ್ತಿವೆ ಎಂಬುದಕ್ಕೆ ಕೊಯಮತ್ತೂರಿನ ಈ ಆಯುಧ ಪೂಜೆಯೇ ಉದಾಹರಣೆ.

ಇತ್ತೀಚಿನ ದಿನಗಳಲ್ಲಿ ರೋಬೋಟಿಕ್ಸ್ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದು, ಮಾನವನಿಗೆ ಪರ್ಯಾಯವಾಗಿ ಹಲವು ಕಡೆಗಳಲ್ಲಿ ರೋಬೋಟ್‌ಗಳನ್ನ ಬಳಸಲಾಗುತ್ತಿದೆ. ಹೊಟೇಲ್‌ಗಳಲ್ಲಿ ಸರ್ವರ್ ಆಗಿ, ಆಸ್ಪತ್ರೆಗಳಲ್ಲಿ ನರ್ಸ್ ಆಗಿ, ಕಚೇರಿಗಳಲ್ಲಿ ಸ್ವಾಗತಕಾರರಾಗಿ ಕೆಲಸ ಮಾಡುತ್ತಿದ್ದ ರೋಬೋಟ್‌ಗಳು ಇದೀಗ ದೇವರ ಭಕ್ತನಾಗಿ ಆರತಿ ಬೆಳಗಿರುವುದು ನಿಜಕ್ಕೂ ತಂತ್ರಜ್ಞಾನದ ಬಹುದೊಡ್ಡ ಮೈಲಿಗಲ್ಲು ಎನ್ನಬಹುದು.

ತಂತ್ರಜ್ಞಾನ ಕೇವಲ ಕೆಲಸವನ್ನ ಸುಲಭಗೊಳಿಸುವುದು ಮಾತ್ರವಲ್ಲ, ನಮ್ಮ ಸಾಂಸ್ಕೃತಿಕ ಆಚರಣೆಗಳ ಭಾಗವಾಗುವ ದಿನಗಳು ದೂರವಿಲ್ಲ ಎಂಬುದನ್ನ ಈ ವೈರಲ್ ದೃಶ್ಯವು ಸಾಬೀತುಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+