Tamil Nadu: 100 ವರ್ಷಗಳ ಬಳಿಕ ತಿರುವಣ್ಣಾಮಲೈ ಅಮ್ಮನ್ ದೇವಸ್ಥಾನಕ್ಕೆ ದಲಿತರ ಎಂಟ್ರಿ- ಪ್ರತಿಭಟನೆ, ಪೊಲೀಸ್‌ ಭದ್ರತೆ

ತಿರುವಣ್ಣಾಮಲೈ, ಆಗಸ್ಟ್‌ 03: ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಅಮ್ಮನ್‌ ದೇವಸ್ಥಾನಕ್ಕೆ ದಲಿತರು ಎಂಟ್ರಿ ಕೊಟ್ಟಿದ್ದಾರೆ. ನೂರು ವರ್ಷಗಳ ಬಳಿಕ ದಲಿತರು ದೇವಾಲಯಕ್ಕೆ ಪ್ರವೇಶ ಪಡೆದಿರುವುದು ತಮಿಳುನಾಡಿನಲ್ಲಿ ಮಹತ್ವ ಪಡೆದುಕೊಂಡಿದೆ.

ತಿರುವಣ್ಣಾಮಲೈ ಜಿಲ್ಲೆಯ ಕಿಲ್ಪೆನ್ನತ್ತೂರ್ ಬ್ಲಾಕ್‌ನ ಚೆಲ್ಲಂಕುಪ್ಪಂ ಗ್ರಾಮದ ಆದಿ ದ್ರಾವಿಡರ್ (ಪರಿಶಿಷ್ಟ ಜಾತಿ) ಸಮುದಾಯಕ್ಕೆ ಸೇರಿದ ನಿವಾಸಿಗಳು ಐತಿಹಾಸಿಕ ದೇವಸ್ಥಾನವನ್ನು ಪ್ರವೇಶಿಸಿ ಪೂಜೆ ಸಲ್ಲಿಸಿದ್ದಾರೆ.

Tamil Nadu: After 100 years Dalits entry to Thiruvannamalai Amman temple

ಸ್ಥಳೀಯ ಪೊಲೀಸರು ದಲಿತ ವ್ಯಕ್ತಿಗೆ ಭದ್ರತೆ ನೀಡಿದ್ದಾರೆ. ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಅಡಿಯಲ್ಲಿ ಬರುವ ಅಮ್ಮನ್‌ ದೇವಸ್ಥಾನದೊಳಗೆ ನೂರು ವರ್ಷಗಳಿಂದ ಯಾವುದೇ ದಲಿತ ವ್ಯಕ್ತಿ ಪ್ರವೇಶ ಪಡೆದಿರಲಿಲ್ಲ. ನೂರು ವರ್ಷಗಳಿಗೂ ಹೆಚ್ಚು ಕಾಲ ದಲಿತರನ್ನು ಈ ದೇವಾಲಯ ಪ್ರವೇಶಿಸಿದಂತೆ ತಡೆಯಲಾಗಿತ್ತು.

ಮೂಲಗಳ ಪ್ರಕಾರ, ಅದೇ ಗ್ರಾಮದ ದಲಿತ ಸೆಂತಮಿಲ್ ಮತ್ತು ಪ್ರಬಲ ಸಮುದಾಯಕ್ಕೆ ಸೇರಿದ ತಂಗರಸು ನಡುವೆ ಜಗಳವಾಗಿತ್ತು. ಕಳೆದ ತಿಂಗಳು ಫೇಸ್‌ಬುಕ್‌ನಲ್ಲಿ ದೇವಸ್ಥಾನ ಪ್ರವೇಶಿಸುವ ಬಗ್ಗೆ ವಾಗ್ವಾದ ನಡೆದಿತ್ತು. ಅದು ದೈಹಿಕ ಮಾರಾಮಾರಿಗೆ ತಿರುಗಿತ್ತು.

ಈ ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದರು. ಏತನ್ಮಧ್ಯೆ, ಹಲವು ದಶಕಗಳಿಂದ ಮಾರಿಯಮ್ಮನ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಲಾಗಿದೆ ಎಂದು ಆದಿ ದ್ರಾವಿಡರ್ ಸಮುದಾಯದ ದಲಿತರು ಸುಮಾರು 10 ದಿನಗಳ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

ಕಾರ್ಯಾಚರಣೆಗಿಳಿದ ತಿರುವಣ್ಣಾಮಲೈ ಎಸ್ಪಿ ಕೆ ಕಾರ್ತಿಕೇಯನ್ ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಲು ಬಲಿಷ್ಠ ಪೊಲೀಸ್ ಪಡೆಯನ್ನು ನಿಯೋಜಿಸಿ ಗ್ರಾಮದಲ್ಲಿ ಪರೇಡ್ ನಡೆಸಿದರು. ಭಾರೀ ಪೊಲೀಸ್ ಬಂದೋಬಸ್ತ್ ನಡುವೆ ಗ್ರಾಮದ ಮಹಿಳೆಯರು, ಮಕ್ಕಳು ಸೇರಿದಂತೆ ಎಸ್‌ಸಿ ಸಮುದಾಯದವರು ದೇವಾಲಯಕ್ಕೆ ಪ್ರವೇಶ ಪಡೆದರು. ಹಾರ, ಹಣ್ಣು ಹಂಪಲು ಹೊತ್ತು ದೇವಸ್ಥಾನ ಪ್ರವೇಶಿಸಿದರು. ಅಮ್ಮನವರಿಗೆ ಪೂಜೆ ಸಲ್ಲಿಸಿದರು. ದೇವಸ್ಥಾನವು ರಾಜ್ಯ ಸರ್ಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಡಳಿತದಲ್ಲಿದೆ.

ದಲಿತರಿಗೆ ಪ್ರವೇಶ ನಿರಾಕರಣೆ: ವಿಲ್ಲುಪುರಂ ದೇವಸ್ಥಾನಕ್ಕೆ ಬೀಗ

ಎರಡು ತಿಂಗಳ ಹಿಂದೆ ದಲಿತರಿಗೆ ಪ್ರವೇಶ ನಿರ್ಬಂಧಿಸಿದ್ದಕ್ಕಾಗಿ ವಿಲ್ಲುಪುರಂ ದೇವಸ್ಥಾನಕ್ಕೆ ಬೀಗ ಜಡಿದು ಸೀಲ್‌ ಮಾಡಲಾಗಿತ್ತು. ತಮಿಳುನಾಡಿನ ವಿಲ್ಲುಪುರಂ ಜಿಲ್ಲಾಡಳಿತವು ಮೇಲ್ಪತಿ ಗ್ರಾಮದ ದ್ರೌಪತಿ ಅಮ್ಮನ್ ದೇವಸ್ಥಾನವನ್ನು ಸೀಲ್ ಮಾಡಿತ್ತು.

ದಲಿತರು ದೇವಸ್ಥಾನಕ್ಕೆ ಪ್ರವೇಶಿಸುವುದನ್ನು ಮೇಲ್ಜಾತಿಯವರು ಒಪ್ಪಿರಲಿಲ್ಲ. ಹಲವಾರು ಸುತ್ತಿನ ಶಾಂತಿ ಮಾತುಕತೆ ವಿಫಲವಾದ ನಂತರ ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗ್ರಾಮದಲ್ಲಿ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.

ಏಪ್ರಿಲ್ 7 ರಂದು ಮೇಲ್ಪತಿ ಗ್ರಾಮದ ಮಧ್ಯಭಾಗದಲ್ಲಿರುವ ದೇವಸ್ಥಾನಕ್ಕೆ ಪ್ರವೇಶಿಸಿದ್ದಕ್ಕಾಗಿ ಪರಿಶಿಷ್ಟ ಜಾತಿ (ಎಸ್‌ಸಿ) ಗೆ ಸೇರಿದ ಮೂವರು ಯುವಕರ ಮೇಲೆ ಪ್ರಬಲ ಜಾತಿಯ ಹಿಂದೂಗಳು ಹಲ್ಲೆ ನಡೆಸಿದ್ದರು. ಆ ಬಳಿಕ ಜಾತಿ ತಾರತಮ್ಯದ ವಿಷಯ ಬೆಳಕಿಗೆ ಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+