ತಬ್ಲೀಗ್ ಜಮಾತ್ ಸಭೆ: ವೀಸಾ ನಿಯಮಗಳ ಉಲ್ಲಂಘನೆ

ನವದೆಹಲಿ, ಏಪ್ರಿಲ್ 01 : ನವದೆಹಲಿಯ ಮರ್ಕಜ್ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲೀಗ್ ಜಮಾತ್ ಧಾರ್ಮಿಕ ಸಭೆ ಚರ್ಚೆಯ ವಿಷಯವಾಗಿದೆ. ಈ ಸಭೆಯಲ್ಲಿ ಪಾಲ್ಗೊಂಡವರಲ್ಲಿ ಅನೇಕರು ವೀಸಾ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಈಗ ಬೆಳಕಿಗೆ ಬಂದಿದೆ.

Recommended Video

      ಮಾನವೀಯತೆ ಇನ್ನು ಜೀವಂತವಾಗಿದೆ ಎಂದು ಸಾಬೀತುಪಡಿಸಿದ ಯುವಕ

      ತಬ್ಲೀಗ್ ಜಮಾತ್ ಧಾರ್ಮಿಕ ಸಭೆ ಚರ್ಚೆಯಲ್ಲಿ ಪಾಲ್ಗೊಂಡ ವಿವಿಧ ರಾಜ್ಯಗಳ ಹಲವಾರು ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ರಾಜ್ಯ ಸರ್ಕಾರಗಳು ಸಭೆಯಲ್ಲಿ ಪಾಲ್ಗೊಂಡವರ ಬಗ್ಗೆ ಮಾಹಿತಿಯನ್ನು ಸಂಗ್ರಹ ಮಾಡುತ್ತಿದೆ.

      ವೀಸಾ ನಿಯಮಗಳನ್ನು ಉಲ್ಲಂಘನೆ ಮಾಡಿ ಸಭೆಯಲ್ಲಿ ಪಾಲ್ಗೊಂಡವರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಉಲ್ಲಂಘನೆ ಮಾಡಿದವರನ್ನು ಕಪ್ಪು ಪಟ್ಟಿಗೆ ಸೇರಿಸುವ ಆಲೋಚನೆ ಕೇಂದ್ರ ಸರ್ಕಾರದ ಮುಂದಿದೆ.

      Tablighi Jamaat Members Violated Visas Norms

      ಒನ್ ಇಂಡಿಯಾಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ 800 ಜನರು ವೀಸಾ ನಿಯಮ ಉಲ್ಲಂಘಿಸಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಧಾರ್ಮಿಕ ಮಿಷನರಿ ಅಡಿಯಲ್ಲಿ ಅರ್ಜಿ ಹಾಕಿ ವೀಸಾ ಪಡೆಯಬೇಕು.

      ಆದರೆ, ಕಾರ್ಯಕ್ರಮಕ್ಕೆ ಆಗಮಿಸಿದವರು ಪ್ರವಾಸಿ ವೀಸಾ ಪಡೆದು ಆಗಮಿಸಿದ್ದರು. ಮಾರ್ಚ್ 17, 2020ರಂದು ತೆಲಂಗಾಣದಲ್ಲಿ ಮೊದಲ ಬಾರಿಗೆ ತಬ್ಲೀಗ್ ಜಮಾತ್ ಧಾರ್ಮಿಕ ಸಭೆ ಮತ್ತು ಕೊರೊನಾ ಸೋಂಕಿಗೆ ಇರುವ ನಂಟು ಬೆಳಕಿಗೆ ಬಂದಿತ್ತು.

      ಗೃಹ ಇಲಾಖೆ ತಬ್ಲೀಗ್ ಜಮಾತ್ ಧಾರ್ಮಿಕ ಸಭೆಯಲ್ಲಿ 800 ವಿದೇಶಿಗರು ಭಾಗವಹಿಸಿದ್ದರು ಎಂಬ ಪಟ್ಟಿಯನ್ನು ಸಿದ್ಧಪಡಿಸಿದೆ. ಸಭೆಯಲ್ಲಿ ಪಾಲ್ಗೊಂಡ ಇಂಡೋನೇಷಿಯಾದ ಪ್ರಜೆ ತೆಲಂಗಾಣಕ್ಕೂ ಭೇಟಿ ನೀಡಿದ್ದ. ಮಾರ್ಚ್ 17ರಂದು ಆತನಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿತ್ತು.

      ಧಾರ್ಮಿಕ ಸಭೆಯಲ್ಲಿ ಪಾಲ್ಗೊಳ್ಳಲು ಇಂಡೋನೇಷಿಯಾ, ಮಲೇಷ್ಯಾ, ನೇಪಾಳ, ಥಾಲ್ಯಾಂಡ್, ಶ್ರೀಲಂಕಾ, ಬಾಂಗ್ಲಾದೇಶ ಸೇರಿದಂತೆ ವಿವಿಧ ದೇಶಗಳಿಂದ ಸಭೆಗೆ ಹಲವರು ಆಗಮಿಸಿದ್ದರು.

      ವಿವಿಧ ರಾಜ್ಯಗಳಿಂದ ಸಭೆಗೆ ಆಗಮಿಸಿದವರನ್ನು ಮೊದಲು ಪತ್ತೆ ಹಚ್ಚಿ ಎಂದು ಗೃಹ ಇಲಾಖೆ ಸೂಚನೆ ನೀಡಿದೆ. ಪತ್ತೆ ಹಚ್ಚಿದ ಬಳಿಕ ಎಲ್ಲರಿಗೂ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+